ETV Bharat / business

ಹಿರಿಯ ನಾಗರಿಕರಿಗೆ ವಿಶೇಷ ಕೊಡುಗೆ: ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ 'ತೆರಿಗೆ ಉಳಿತಾಯ + ರಿಟರ್ನ್' ಗ್ಯಾರಂಟಿ! - tax saving investments

Tax Saving Investments For Senior Citizens : ಹಿರಿಯ ನಾಗರಿಕರು ತಮ್ಮ ಭವಿಷ್ಯದ ಅಗತ್ಯಗಳಿಗಾಗಿ ಅಪಾಯ - ಮುಕ್ತ ರೀತಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅದಕ್ಕಾಗಿಯೇ ಈ ಲೇಖನದ ಮೂಲಕ ಹಿರಿಯ ನಾಗರಿಕರಿಗೆ ತೆರಿಗೆ ಉಳಿತಾಯ ಮತ್ತು ಅಪಾಯ - ಮುಕ್ತ ಆದಾಯದ ಭರವಸೆಯನ್ನು ಒದಗಿಸುವ ಕೆಲವು ಹೂಡಿಕೆ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Tax Saving Investments For Senior  senior citizens  consider before 31st march
ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ 'ತೆರಿಗೆ ಉಳಿತಾಯ + ರಿಟರ್ನ್' ಗ್ಯಾರೆಂಟಿ!
author img

By ETV Bharat Karnataka Team

Published : Mar 16, 2024, 6:17 PM IST

ಹೈದರಾಬಾದ್​: 2023-24 ರ ಆರ್ಥಿಕ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳುತ್ತಿದೆ. ಆದ್ದರಿಂದ, ಹಿರಿಯ ನಾಗರಿಕರು ರಿಸ್ಕ್​ ಇಲ್ಲದೇ ಉತ್ತಮ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಹೆಚ್ಚುವರಿ ಆದಾಯ ಒದಗಿಸುವುದರ ಜೊತೆಗೆ ಈ ಯೋಜನೆಗಳು ತೆರಿಗೆ ವಿನಾಯಿತಿಗಳನ್ನು ಸಹ ಒದಗಿಸುತ್ತವೆ.

ಸ್ಥಿರ ಠೇವಣಿ: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳು ವೃದ್ಧಾಪ್ಯದಲ್ಲಿ ಭದ್ರತೆ ಒದಗಿಸುತ್ತವೆ. ಇವುಗಳಿಗೆ 5 ವರ್ಷಗಳ ಲಾಕಿಂಗ್ ಅವಧಿ ಇರುತ್ತದೆ. ಮಾರುಕಟ್ಟೆಯ ಏರಿಳಿತಗಳು ಅದರ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಅವರು ಖಾತರಿ ಆದಾಯವನ್ನು ನೀಡುತ್ತಾರೆ. ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಶೇಕಡಾ 5.50 ರಿಂದ 6.25 ರವರೆಗೆ ಬಡ್ಡಿದರ ನೀಡುತ್ತಿವೆ. ಈ ಹೂಡಿಕೆಯ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಈ ಯೋಜನೆಯಲ್ಲಿ ಹೂಡಿಕೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿ ರೂ.1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ (PPF): ಹಿರಿಯ ನಾಗರಿಕರು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) ಹೂಡಿಕೆ ಮಾಡಬಹುದು. ಇದು 15 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ. ಈ PPF ಶೇಕಡಾ 7.1 ರಷ್ಟು ಬಡ್ಡಿ ಗಳಿಸುತ್ತದೆ. ಇದು ನಿಶ್ಚಿತ ಠೇವಣಿಯಿಂದ ಗಳಿಸುವ ಬಡ್ಡಿಗಿಂತ ಹೆಚ್ಚಾಗಿರುತ್ತದೆ. ಹೂಡಿಕೆಯ ಮೇಲಿನ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಹೂಡಿಕೆದಾರರು ಪಿಪಿಎಫ್‌ನಲ್ಲಿ ವರ್ಷಕ್ಕೆ ಗರಿಷ್ಠ ರೂ.1.5 ಲಕ್ಷ ಹೂಡಿಕೆ ಮಾಡಬಹುದು. ಪಬ್ಲಿಕ್ ಪ್ರಾವಿಡೆಂಡ್​​​ ಫಂಡ್ (ಪಿಪಿಎಫ್) ಉಳಿಸಿದ ಹೂಡಿಕೆದಾರರು ಸೆಕ್ಷನ್ 80 ಸಿ ಅಡಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಹಿರಿಯ ನಾಗರಿಕರು ತಮ್ಮ ನಿವೃತ್ತಿಯನ್ನು ಸರಿಯಾದ ರೀತಿಯಲ್ಲಿ ಯೋಜಿಸಲು ರಾಷ್ಟ್ರೀಯ ಪಿಂಚಣಿ ಯೋಜನೆ ಉಪಯುಕ್ತವಾಗಿದೆ. ಇದು ಇಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಸಾಲ ಹೂಡಿಕೆ ಆಯ್ಕೆಗಳೊಂದಿಗಿನ ಯೋಜನೆಯಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿ ತೆರಿಗೆ ಕಡಿತವನ್ನು ಕೂಡಾ ಪಡೆಯಬಹುದು. ಈ ಯೋಜನೆಯಲ್ಲಿ ವರ್ಷಕ್ಕೆ ಗರಿಷ್ಠ ರೂ.1.5 ಲಕ್ಷ ಹೂಡಿಕೆ ಮಾಡಬಹುದು, ಸೆಕ್ಷನ್ 80CCD (1B) ಅಡಿ ರೂ.50,000 ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.

ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳು (ELSS): ತೆರಿಗೆ ಪ್ರಯೋಜನಗಳನ್ನು ಪಡೆಯಲು ಹಿರಿಯ ನಾಗರಿಕರು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳು (ELSS) ಇದಕ್ಕೆ ಅವಕಾಶ ಒದಗಿಸುತ್ತದೆ. ಈ ಮ್ಯೂಚುವಲ್ ಫಂಡ್‌ಗಳು ಮೂರು ವರ್ಷಗಳ ಲಾಕ್ - ಇನ್ ಅವಧಿಯನ್ನು ಹೊಂದಿರುತ್ತವೆ. ಅವರು ಹೆಚ್ಚಿನ ಆದಾಯವನ್ನು ಸಹ ನೀಡುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ಸೆಕ್ಷನ್ 80ಸಿ ಅಡಿಯಲ್ಲಿ ರೂ.1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, ಇದರಲ್ಲಿ ಸ್ವಲ್ಪ ಅಪಾಯವಿದೆ ಎಂಬುದನ್ನು ಹಿರಿಯ ನಾಗರಿಕರು ಅರಿತುಕೊಳ್ಳಬೇಕು.

ತೆರಿಗೆ ಮುಕ್ತ ಬಾಂಡ್‌ಗಳು: ತೆರಿಗೆ - ಮುಕ್ತ ಬಾಂಡ್‌ಗಳ ಮೇಲೆ ಗಳಿಸಿದ ಬಡ್ಡಿಯು ಆದಾಯ ತೆರಿಗೆಗೆ ಒಳಪಡುವುದಿಲ್ಲ. ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ನಿಗಮಗಳು ಸರ್ಕಾರದ ಪರವಾಗಿ ಈ ಬಾಂಡ್‌ಗಳನ್ನು ನೀಡುತ್ತವೆ. ಇವು ಹೂಡಿಕೆದಾರರಿಗೆ ನಿಶ್ಚಿತ ಬಡ್ಡಿಯನ್ನು ಗಳಿಸುವ ಅವಕಾಶವನ್ನು ನೀಡುತ್ತವೆ. ಅಪಾಯ - ಮುಕ್ತ ಹೂಡಿಕೆಗಳನ್ನು ಮಾಡಲು ಬಯಸುವ ಹಿರಿಯ ನಾಗರಿಕರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಓದಿ: ಹೊಸ ಇವಿ ನೀತಿಯೊಂದಿಗೆ ಟೆಸ್ಲಾ ಸಂಚಾರಕ್ಕೆ ಹಾದಿ ಸುಗಮಗೊಳಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.