ETV Bharat / business

ಸ್ಟಾಕ್ ಮಾರ್ಕೆಟ್​ ನ್ಯೂಸ್: ಸೆನ್ಸೆಕ್ಸ್ 140 ಅಂಕ ಏರಿಕೆ, 24,998ಕ್ಕೆ ತಲುಪಿದ ನಿಫ್ಟಿ

ಭಾರತದ ಷೇರು ಮಾರುಕಟ್ಟೆಗಳು ಗುರುವಾರದಂದು ಏರಿಕೆಯೊಂದಿಗೆ ಕೊನೆಗೊಂಡಿವೆ.

author img

By ETV Bharat Karnataka Team

Published : 2 hours ago

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)

ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಗುರುವಾರ ಏರಿಕೆಯೊಂದಿಗೆ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 140.75 ಪಾಯಿಂಟ್ಸ್ ಅಥವಾ ಶೇಕಡಾ 0.17 ರಷ್ಟು ಏರಿಕೆಯಾಗಿ ಕಂಡು 81,607.55 ರಲ್ಲಿ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ50 16.50 ಪಾಯಿಂಟ್ಸ್ ಅಥವಾ ಶೇಕಡಾ 0.07 ರಷ್ಟು ಏರಿಕೆಯಾಗಿ 24,998.45 ರಲ್ಲಿ ಕೊನೆಗೊಂಡಿದೆ.

ಯಾರಿಗೆ ನಷ್ಟ?: ನಿಫ್ಟಿ50 ಯ 50 ಘಟಕ ಷೇರುಗಳ ಪೈಕಿ 27 ಷೇರುಗಳು ನಷ್ಟದೊಂದಿಗೆ ಕೊನೆಗೊಂಡವು. ಸಿಪ್ಲಾ, ಟೆಕ್ ಮಹೀಂದ್ರಾ, ಟ್ರೆಂಟ್, ಸನ್ ಫಾರ್ಮಾ ಮತ್ತು ಇನ್ಫೋಸಿಸ್ ಶೇಕಡಾ 3.37 ರಷ್ಟು ನಷ್ಟ ಅನುಭವಿಸಿದವು.

ಯಾರಿಗೆ ಲಾಭ?: ಇನ್ನು ನಿಫ್ಟಿ 50ಯಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್, ಜೆಎಸ್​ಡಬ್ಲ್ಯೂ ಸ್ಟೀಲ್, ಎಚ್​ಡಿಎಫ್​ಸಿ ಬ್ಯಾಂಕ್, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಸೇರಿದಂತೆ 23 ಷೇರುಗಳು ಶೇ 3.84ರವರೆಗೆ ಲಾಭ ಗಳಿಸಿದವು.

ಬಿಎಸ್ಇಯಲ್ಲಿ ನೋಡುವುದಾದರೆ- ಸೆನ್ಸೆಕ್ಸ್​ನ 30 ಘಟಕ ಷೇರುಗಳ ಪೈಕಿ ಕೊಟಕ್ ಮಹೀಂದ್ರಾ ಬ್ಯಾಂಕ್, ಜೆಎಸ್ ಡಬ್ಲ್ಯೂ ಸ್ಟೀಲ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ 17 ಷೇರುಗಳು ಶೇಕಡಾ 3.90 ರಷ್ಟು ಲಾಭದೊಂದಿಗೆ ಕೊನೆಗೊಂಡವು. ಏತನ್ಮಧ್ಯೆ, ಟೆಕ್ ಮಹೀಂದ್ರಾ ಮತ್ತು ಸನ್ ಫಾರ್ಮಾ ಶೇಕಡಾ 2.82 ರಷ್ಟು ಕುಸಿದವು.

ವಿಶಾಲ ಸೂಚ್ಯಂಕಗಳಲ್ಲಿ ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 0.19 ರಷ್ಟು ಏರಿಕೆ ಕಂಡರೆ, ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 0.28 ರಷ್ಟು ಕುಸಿದಿದೆ. ಬ್ಯಾಂಕ್ ನಿಫ್ಟಿ ಮತ್ತು ಪಿಎಸ್​ಯು ಬ್ಯಾಂಕ್ ಸೂಚ್ಯಂಕಗಳು ಇತರ ವಲಯ ಸೂಚ್ಯಂಕಗಳನ್ನು ಮೀರಿಸಿದವು ಮತ್ತು ತಲಾ 1 ಪ್ರತಿಶತದಷ್ಟು ಏರಿಕೆ ಕಂಡವು. ಫೈನಾನ್ಷಿಯಲ್ ಸರ್ವೀಸಸ್, ಆಟೋ ಮತ್ತು ಮೆಟಲ್ ಷೇರುಗಳು ಸಹ ಹಸಿರು ಬಣ್ಣದಲ್ಲಿ ಕೊನೆಗೊಂಡವು. ಏತನ್ಮಧ್ಯೆ, ಐಟಿ, ಫಾರ್ಮಾ, ಎಫ್ಎಂಸಿಜಿ ಮತ್ತು ಹೆಲ್ತ್ ಕೇರ್ ವಲಯ ಶೇ 2.01 ರವರೆಗೆ ನಷ್ಟ ಕಂಡವು.

ವಿದೇಶಿ ನಿಧಿಯ ನಿರಂತರ ಹೊರಹರಿವು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ಮಧ್ಯೆ ಗುರುವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 2 ಪೈಸೆ ಕುಸಿದು 83.98 ಕ್ಕೆ (ತಾತ್ಕಾಲಿಕ) ತಲುಪಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ 83.95 ರಲ್ಲಿ ಪ್ರಾರಂಭವಾಗಿ, ಯುಎಸ್ ಡಾಲರ್ ವಿರುದ್ಧ 1 ಪೈಸೆಯ ಅಲ್ಪ ಏರಿಕೆಯನ್ನು ದಾಖಲಿಸಿತ್ತು. ನಂತರ 83.95-83.98 ರ ಬಿಗಿಯಾದ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ರೂಪಾಯಿ ಕೊನೆಯಲ್ಲಿ 83.98 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ಇದು ಬುಧವಾರದ ಮುಕ್ತಾಯ 83.96 ಕ್ಕೆ ಹೋಲಿಸಿದರೆ 2 ಪೈಸೆ ಕಡಿಮೆಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್​ಗೆ ಸ್ಪೈಸ್​ಜೆಟ್​ ವಿಮಾನಯಾನ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.