ETV Bharat / business

ಷೇರು ಮಾರುಕಟ್ಟೆ ಅಲ್ಪ ಹೆಚ್ಚಳ: ಸೆನ್ಸೆಕ್ಸ್​ 131 & ನಿಫ್ಟಿ 36 ಅಂಕ ಏರಿಕೆ - Share Market Today - SHARE MARKET TODAY

ಸೋಮವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಅಲ್ಪಮಟ್ಟದ ಏರಿಕೆಯೊಂದಿಗೆ ಕೊನೆಗೊಂಡಿವೆ.

ಬಾಂಬೆ ಸ್ಟಾಕ್ಸ್​ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್ (IANS)
author img

By ETV Bharat Karnataka Team

Published : Jun 24, 2024, 5:52 PM IST

ಮುಂಬೈ: ಸೋಮವಾರದ ವಹಿವಾಟಿನಲ್ಲಿ ಭಾರತದ ಬೆಂಚ್ ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಅಲ್ಪಮಟ್ಟದ ಏರಿಕೆಯೊಂದಿಗೆ ಕೊನೆಗೊಂಡಿವೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 131.18 ಪಾಯಿಂಟ್ ಅಥವಾ ಶೇಕಡಾ 0.17ರಷ್ಟು ಏರಿಕೆ ಕಂಡು 77,341.08ರಲ್ಲಿ ಕೊನೆಗೊಂಡಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 463.96 ಪಾಯಿಂಟ್ ಅಥವಾ ಶೇಕಡಾ 0.60ರಷ್ಟು ಕುಸಿದು 76,745.94ಕ್ಕೆ ತಲುಪಿತ್ತು. ನಿಫ್ಟಿ 36.75 ಪಾಯಿಂಟ್ ಅಥವಾ ಶೇಕಡಾ 0.16ರಷ್ಟು ಏರಿಕೆ ಕಂಡು 23,537.85ರಲ್ಲಿ ಕೊನೆಗೊಂಡಿದೆ.

ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ ಮಹೀಂದ್ರಾ & ಮಹೀಂದ್ರಾ, ಪವರ್ ಗ್ರಿಡ್, ಸನ್ ಫಾರ್ಮಾ, ನೆಸ್ಲೆ, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಐಟಿಸಿ, ಐಸಿಐಸಿಐ ಬ್ಯಾಂಕ್, ಟೈಟಾನ್, ಬಜಾಜ್ ಫಿನ್ ಸರ್ವ್, ಭಾರ್ತಿ ಏರ್‌ಟೆಲ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಇಂಡಸ್ಇಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ನಷ್ಟ ಅನುಭವಿಸಿದವು.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಇಳಿಕೆಯಲ್ಲಿ ವಹಿವಾಟು ನಡೆಸಿದರೆ, ಟೋಕಿಯೊ ಏರಿಕೆಯೊಂದಿಗೆ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಶುಕ್ರವಾರ ಬಹುತೇಕ ಕೆಳಮಟ್ಟದಲ್ಲಿ ಕೊನೆಗೊಂಡವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ 1,790.19 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿಅಂಶಗಳು ತಿಳಿಸಿವೆ. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.41ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 85.59 ಡಾಲರ್​ಗೆ ತಲುಪಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿ ಮತ್ತು ಸ್ಥಿರವಾದ ಜಾಗತಿಕ ಕಚ್ಚಾ ತೈಲ ಬೆಲೆಗಳ ಬೆಂಬಲದೊಂದಿಗೆ ರೂಪಾಯಿ ಸೋಮವಾರ ಯುಎಸ್ ಡಾಲರ್ ವಿರುದ್ಧ 11 ಪೈಸೆ ಏರಿಕೆಯಾಗಿ 83.46ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು 83.52ಕ್ಕೆ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಡಾಲರ್ ವಿರುದ್ಧ 83.44ಕ್ಕೆ ತಲುಪಿದೆ. ಇದು ಅಂತಿಮವಾಗಿ ಡಾಲರ್ ವಿರುದ್ಧ 83.46 (ತಾತ್ಕಾಲಿಕ)ರಲ್ಲಿ ಸ್ಥಿರವಾಯಿತು. ಹಿಂದಿನ ಮುಕ್ತಾಯಕ್ಕಿಂತ ಇದು 11 ಪೈಸೆ ಲಾಭವಾಗಿದೆ.

ಇದನ್ನೂ ಓದಿ: ಏರುಗತಿಯಲ್ಲಿ ಗೋಧಿ ಬೆಲೆ: ದಾಸ್ತಾನಿಗೆ ಮಿತಿ ವಿಧಿಸಿ ಕೇಂದ್ರ ಸರ್ಕಾರ ಆದೇಶ - Wheat Prices Rise

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.