ETV Bharat / business

ಮುತ್ತೂಟ್ ಗ್ರೂಪ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕ - Shah Rukh Khan - SHAH RUKH KHAN

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಮುತ್ತೂಟ್ ಗ್ರೂಪ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.

ಮುತ್ತೂಟ್ ಗ್ರೂಪ್​ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕ
ಮುತ್ತೂಟ್ ಗ್ರೂಪ್​ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕ (IANS)
author img

By ETV Bharat Karnataka Team

Published : May 29, 2024, 12:24 PM IST

ನವದೆಹಲಿ: ಭಾರತದ 137 ವರ್ಷಗಳಷ್ಟು ಹಳೆಯದಾದ ಮುತ್ತೂಟ್ ಪಪ್ಪಚನ್ ಗ್ರೂಪ್ (ಎಂಪಿಜಿ) ಬುಧವಾರ ಶಾರುಖ್ ಖಾನ್ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಮುತ್ತೂಟ್ ಪಪ್ಪಚನ್ ಗ್ರೂಪ್ ಅನ್ನು ಮುತ್ತೂಟ್ ಬ್ಲೂ ಎಂದೂ ಕರೆಯಲಾಗುತ್ತದೆ. ಈ ಕಾರ್ಯತಂತ್ರದ ಸಹಯೋಗವು ಎಂಪಿಜಿಗೆ ಮಹತ್ವದ ಮೈಲಿಗಲ್ಲಾಗಿದೆ ಮತ್ತು ಇದು ಕಂಪನಿಯ ಬ್ರ್ಯಾಂಡ್ ಉಪಸ್ಥಿತಿಯನ್ನು ಬಲಪಡಿಸುತ್ತದೆ.

"ಇದು ನಮಗೆ ಮಹತ್ವದ ಮೈಲಿಗಲ್ಲು. ಶಾರುಖ್ ನಮಗೆ ಕೇವಲ ಓರ್ವ ಸ್ಟಾರ್ ಅಲ್ಲ. ಅವರು ನಮ್ಮ ಮೂಲ ಮೌಲ್ಯಗಳಿಗೆ ಹೊಂದಿಕೆಯಾಗುವ ನಮ್ರತೆ ಮತ್ತು ಸ್ವಯಂನಿರ್ಮಿತ ಯಶಸ್ಸನ್ನು ಸಹ ಪ್ರತಿನಿಧಿಸುತ್ತಾರೆ" ಎಂದು ಮುತ್ತೂಟ್ ಪಪ್ಪಚನ್ ಗ್ರೂಪ್​ನ ಅಧ್ಯಕ್ಷ ಥಾಮಸ್ ಜಾನ್ ಮುತ್ತೂಟ್ ಹೇಳಿದರು.

ಸಮೂಹದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ಅನೇಕ ಎಂಪಿಜಿಯ ಅಭಿಯಾನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಕಂಪನಿಯ ಸೇವೆಗಳಿಗೆ ಪ್ರಚಾರ ನೀಡಲಿದ್ದಾರೆ. ಈ ಅಭಿಯಾನಗಳ ಅಂಗವಾಗಿ ಹಣಕಾಸು ಉತ್ಪನ್ನಗಳು ಮತ್ತು ಕಂಪನಿಯ ಸೇವೆಗಳ ಶ್ರೇಣಿಯನ್ನು ಪ್ರದರ್ಶಿಸಲಾಗುವುದು.

"ಪ್ರತಿಷ್ಠಿತ ಮುತ್ತೂಟ್ ಪಪ್ಪಚನ್ ಗ್ರೂಪ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ನನಗೆ ರೋಮಾಂಚನ ಮೂಡಿಸಿದೆ. ಶತಮಾನದ ಸುದೀರ್ಘ ಪರಂಪರೆಯೊಂದಿಗೆ, ಎಂಪಿಜಿ ಭಾರತದ ಆರ್ಥಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದೆ." ಎಂದು ಶಾರುಖ್ ಖಾನ್ ಹೇಳಿದರು.

"ಶಾರುಖ್ ಖಾನ್ ಖ್ಯಾತಿಗಿಂತ ಹೆಚ್ಚಿನ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ; ಅವರು ನಮ್ರತೆ ಮತ್ತು ಸ್ವಯಂನಿರ್ಮಿತ ವಿಜಯವನ್ನು ಸಾಕಾರಗೊಳಿಸುತ್ತಾರೆ. ದೊಡ್ಡ ಕನಸುಗಳನ್ನು ಕಂಡ ಮತ್ತು ತನ್ನ ಕನಸುಗಳನ್ನು ನನಸಾಗಿಸಿದ ಸಾಮಾನ್ಯ ವ್ಯಕ್ತಿಯಾಗಿ ಅವರು ನಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುತ್ತಾರೆ" ಎಂದು ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್​ನ ಸಿಇಒ ಶಾಜಿ ವರ್ಗೀಸ್ ಹೇಳಿದರು.

ಮುತ್ತೂಟ್ ಪಪ್ಪಚನ್ ಗ್ರೂಪ್ ಇದು ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ (ಸಮೂಹದ ಪ್ರಮುಖ ಕಂಪನಿ), ಮುತ್ತೂಟ್ ಮೈಕ್ರೋಫಿನ್ ಲಿಮಿಟೆಡ್, ಮುತ್ತೂಟ್ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ ಮತ್ತು ಮುತ್ತೂಟ್ ಹೌಸಿಂಗ್ ಫೈನಾನ್ಸ್ ಕಂಪನಿ ಲಿಮಿಟೆಡ್ ಸೇರಿದಂತೆ ದೇಶದ ಪ್ರಮುಖ ಎನ್‌ಬಿಎಫ್‌ಸಿಗಳ ಮೂಲ ಕಂಪನಿಯಾಗಿದೆ.

ಮುತ್ತೂಟ್ ಪಪ್ಪಚನ್ ಗ್ರೂಪ್ (ಎಂಪಿಜಿ) ಅನ್ನು 1979 ರಲ್ಲಿ ಮುತ್ತೂಟ್ ಪಪ್ಪಚನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಿವಂಗತ ಮ್ಯಾಥ್ಯೂ ಎಂ.ಥಾಮಸ್ ಸ್ಥಾಪಿಸಿದರು. ನಂತರದ ವರ್ಷಗಳಲ್ಲಿ ಮುತ್ತೂಟ್ ಪಪ್ಪಚನ್ ಗ್ರೂಪ್ ಭಾರತೀಯ ಮಾರುಕಟ್ಟೆ ವಲಯದಲ್ಲಿ ಮಹತ್ವದ ಘಟಕವಾಗಿ ಬೆಳೆದಿದೆ.

ಇದನ್ನೂ ಓದಿ: ಸಕ್ಕರೆ ಉತ್ಪಾದನೆ ಕುಸಿತ ಸಂಭವ: ಜುಲೈ ನಂತರವೇ ರಫ್ತು ಅನುಮತಿ ಬಗ್ಗೆ ನಿರ್ಧಾರ - Sugar exports

ETV Bharat Logo

Copyright © 2024 Ushodaya Enterprises Pvt. Ltd., All Rights Reserved.