ETV Bharat / business

ಗ್ರಾಹಕ ಸೇವೆಯಲ್ಲಿ ನಿರ್ಲಕ್ಷ್ಯ: ಓಲಾಗೆ 60 ಸಾವಿರ ಪರಿಹಾರ ನೀಡಲು ಕೋರ್ಟ್​​ ಆದೇಶ - service deficiency of Ola E Bike - SERVICE DEFICIENCY OF OLA E BIKE

ಎರಡು ವಾರ ಕಳೆದರೂ ಸಮಸ್ಯೆ ನಿವಾರಣೆ ಮಾಡದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರು ಓಲಾ ಸೇವೆಯ ವಿರುದ್ಧ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗದ ಮೆಟ್ಟಿಲು ಹತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕ ಕೋರ್ಟ್​​​​ 60 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.

service deficiency of Ola Electric Bike Company court order 60,000 compensation in Tamilnadu
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 10, 2024, 12:41 PM IST

ಪೆರಂಬಲೂರ್​: ತಮಿಳುನಾಡಿನ ಪೆರಂಬಲೂರಿನ ಮುತ್ತು ನಗರ್​ನ ನಿವಾಸಿ ರಾಜನ್​​ ಗುರುರಾಜನ್​ (50) ಪತ್ರಕರ್ತರಾಗಿದ್ದು, ಪೆರಂಬಲೂರ್​ ಲಯನ್ಸ್​ ಅಸೋಸಿಯೇಷನ್​ನಲ್ಲಿ ಸಹಾಯಕರೂ ಆಗಿದ್ದಾರೆ. ಕಳೆದ ಜನವರಿ 26ರಂದು ಇವರು ಒಲಾ ವೆಬ್​​ಸೈಟ್​ನಲ್ಲಿ ಆನ್​ಲೈನ್​ ಮೂಲಕ 1,34,270 ರೂ ಪಾವತಿ ಮಾಡಿ, ಒಂದು ಎಲೆಕ್ಟ್ರಿಕಲ್​ ಸ್ಕೂಟರ್​ ಬುಕ್​ ಮಾಡಿದ್ದರು.

ಎರಡು ತಿಂಗಳ ಬಳಿಕ ಒಲಾದ ಎಲೆಕ್ಟ್ರಿಕ್​ ದ್ವಿಚಕ್ರ ವಾಹನವನ್ನು ಮನೆಗೆ ತಲುಪಿಸಲಾಗಿತ್ತು. ಈ ವೇಳೆ ಒಂದು ವರ್ಷ ಬಳಕೆಯಲ್ಲಿದ್ದ ಸ್ಕೂಟರ್‌ನಲ್ಲಿನ ಸಾಫ್ಟ್‌ವೇರ್ ಅನ್ನು ಜನವರಿ 2024 ರಲ್ಲಿ ಓಲಾ ಆವೃತ್ತಿ 4.0 ಗೆ ನವೀಕರಿಸಿ ನೀಡಿತ್ತು. ಇದಾದ ಬಳಿಕ ರಾಜನ್​ ಗುರುರಾಜ್​ ಅವರ ಇ ಸ್ಕೂಟರ್​ನಲ್ಲಿ ಬ್ಯಾಟರಿ ಸಮಸ್ಯೆ ಕಂಡು ಬಂದಿದ್ದು, ಅದನ್ನು ಚಾಲನೆ ಮಾಡಲು ಕೂಡಾ ಸಾಧ್ಯವಾಗಿರಲಿಲ್ಲ.

ಸ್ಕೂಟರ್​ನ ಕೆಟ್ಟ ಕಾರ್ಯಾಚರಣೆಯಿಂದಾಗಿ ಅವರು ಸ್ಕೂಟರ್​ ದುರಸ್ತಿ ಮಾಡುವಂತೆ ಓಲಾ ತಿರುಚ್ಚಿ ಎಕ್ಸಿಪಿರಿಯನ್ಸ್​ ಸೆಂಟರ್​ಗೆ ದೂರು ನೀಡಿದ್ದರು. ಅಲ್ಲದೇ ವಾಟ್ಸ್​​ಆ್ಯಪ್​ ಮತ್ತು ಇಮೇಲ್​ ಮೂಲಕ ಕೃಷ್ಣಗಿರಿ ಓಲಾ ಮುಖ್ಯ ಕಚೇರಿ ಅವರನ್ನು ಸಂಪರ್ಕಸಿ, ದುರಸ್ತಿ ಮಾಡುವಂತೆ ತಿಳಿಸಿದರು.

ದೂರು ಸಲ್ಲಿಸಿದ 15 ದಿನದ ಬಳಿಕ, ಟೆಕ್ನಿಷಿಯನ್​ ಸಿಬ್ಬಂದಿಯೊಬ್ಬರು ಆಗಮಿಸಿ, ಸ್ಕೂಟರ್​ನ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಈ ವೇಳೆ, ಬ್ಯಾಟರಿ ಹಾನಿಯಾಗಿರುವುದು ಪತ್ತೆ ಮಾಡಿ, ಎರಡು ವಾರದಲ್ಲಿ ಸರಿಪಡಿಸುವುದಾಗಿ ಹೇಳಿ ತೆರಳಿದ್ದಾರೆ. ಆದರೆ, ಎರಡು ವಾರ ಕಳೆದರೂ ಓಲಾ ಸಮಸ್ಯೆ ನಿವಾರಣೆ ಮಾಡಿಲ್ಲ. ಜೊತೆಗೆ ಖರೀದಿಸಿದ ಇ ಸ್ಕೂಟರ್​ 45 ದಿನಕ್ಕಿಂತ ಹೆಚ್ಚು ದಿನ ಕಾರ್ಯಾಚರಣೆಗೆ ಬರಲಿಲ್ಲ.

ಇದರಿಂದ ಬೇಸತ್ತ ಅವರು, ಓಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಿರುಚ್ಚಿಯ ಓಲಾ ಎಕ್ಸಿಪಿರಿಯನ್ಸ್​ ಸೆಂಟರ್​ನ ಮುಖ್ಯಸ್ಥರ ಮೇಲೆ ದೂರು ದಾಖಲಿಸಿದ್ದಾರೆ. ರಾಜನ್​ ಪರ ಫೆ 15ರಂದು ಪೆರಂಬಲೂರ್​ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗದಲ್ಲಿ ವಕೀಲ ಶ್ರೀನಿವಾಸಮೂರ್ತಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಓಲಾ ಕಂಪನಿಯು ಅರ್ಜಿದಾರರ ಹಾನಿಗೊಳಗಾದ ಎಲೆಕ್ಟ್ರಿಕ್ ವಾಹನದ ಬ್ಯಾಟರಿಯನ್ನು 44 ದಿನಗಳ ನಂತರ ಹೊಸದಕ್ಕೆ ಬದಲಾಯಿಸಿದೆ.

ಇದೇ ವೇಳೆ, ಪೆರಂಬಲೂರ್​ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗದ ನ್ಯಾಯಧೀಶರಾದ ಜವಾಹರ್​​​​​ ಮತ್ತು ಅವರ ಸದಸ್ಯ ತಿಲಕ್​ ಮತ್ತು ಮುತ್ತು ಕುಮಾರನ್​, ಪ್ರಕರಣ ಆಲಿಸಿ, 60 ಸಾವಿರ ರೂ ಪರಿಹಾರ, 10 ಸಾವಿರ ವ್ಯಾಜ್ಯದ ಖರ್ಚನ್ನು ನೀಡುವಂತೆ ತೀರ್ಪು ನೀಡಿದೆ.

ಇದನ್ನೂ ಓದಿ: ಭಾರಿ ದುರಂತ: ಪ್ರಯಾಣಿಕ ವಿಮಾನ ಪತನ, ಎಲ್ಲ 61 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.