ETV Bharat / business

ವಿದೇಶಿ ಹೂಡಿಕೆಯ ಷೇರುಗಳ ಮಾರಾಟ; ಪಾತಾಳಕ್ಕೆ ಬಿದ್ದ ದೇಶಿ ಮಾರುಕಟ್ಟೆ - ವಿದೇಶಿ ಹೂಡಿಕೆಯ ಷೇರುಗಳ ಮಾರಾಟ

ದೇಶಿ ಷೇರು ಮಾರುಕಟ್ಟೆಗಳು ಬುಧವಾರ ಭಾರಿ ನಷ್ಟದೊಂದಿಗೆ ಮುಕ್ತಾಯಗೊಂಡವು. ಬಹುತೇಕ ಎಲ್ಲಾ ಕ್ಷೇತ್ರಗಳು ಭಾರಿ ನಷ್ಟ ಅನುಭವಿಸಿವೆ. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕುಸಿದವು.

BSE Sensex fell  Reliance Industries and bank stocks  Sensex and Nifty tumble  ವಿದೇಶಿ ಹೂಡಿಕೆಯ ಷೇರುಗಳ ಮಾರಾಟ  ಪಾತಾಳಕ್ಕೆ ಬಿದ್ದ ದೇಶಿಯ ಮಾರುಕಟ್ಟೆ
ಪಾತಾಳಕ್ಕೆ ಬಿದ್ದ ದೇಶಿಯ ಮಾರುಕಟ್ಟೆ
author img

By PTI

Published : Feb 28, 2024, 6:46 PM IST

ಮುಂಬೈ(ಮಹಾರಾಷ್ಟ್ರ): ಇಂದು ದೇಶಿ ಷೇರು ಮಾರುಕಟ್ಟೆಗಳು ಭಾರಿ ನಷ್ಟದೊಂದಿಗೆ ಅಂತ್ಯಗೊಂಡವು. ಬಹುತೇಕ ಎಲ್ಲ ವಲಯಗಳೂ ನಷ್ಟ ಅನುಭವಿಸಿದವು. ಏಷ್ಯಾದ ಮಾರುಕಟ್ಟೆಗಳಿಂದ ನಕಾರಾತ್ಮಕ ಸಂಕೇತಗಳೂ ಸೇರಿದಂತೆ ವಿದೇಶಿ ಹೂಡಿಕೆಯ ಹೊಡೆತವೇ ಈ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ರಿಲಯನ್ಸ್ ಮತ್ತು ಬ್ಯಾಂಕ್ ಷೇರುಗಳ ಮಾರಾಟವು ದೇಶಿಯ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಿದೆ ಎಂದು ತಿಳಿದುಬಂದಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 790 ಅಂಕ ಕಳೆದುಕೊಂಡು 72,304ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 247 ಅಂಕ ಕಳೆದುಕೊಂಡು 21,951ರಲ್ಲಿ ಸ್ಥಿರವಾಯಿತು. ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ಕೆಲ ಷೇರುಗಳು ಏರಿಕೆ ಕಂಡರೆ, ಪವರ್‌ಗ್ರಿಡ್, ಮಾರುತಿ ಸುಜುಕಿ, ವಿಪ್ರೋ, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಸೇರಿದಂತೆ ಇತರ ವಲಯದ ಷೇರುಗಳಲ್ಲಿ ಕುಸಿತವೇ ಹೆಚ್ಚಾಗಿ ಕಂಡುಬಂದಿದೆ.

ಪೇಟಿಎಂ ಷೇರು: ಪೇಟಿಎಂ (One97 ಕಮ್ಯುನಿಕೇಷನ್ಸ್ ಲಿಮಿಟೆಡ್) ಷೇರುಗಳು ಬುಧವಾರ 5 ಪ್ರತಿಶತ ಕಳೆದುಕೊಂಡಿವೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿದ ನಂತರ, ಕಂಪನಿಯು ತೀವ್ರ ಏರಿಳಿತಗಳನ್ನು ಎದುರಿಸುತ್ತಿದೆ.

ಏಷ್ಯಾದ ಷೇರು ಮಾರುಕಟ್ಟೆಗಳು: ಏಷ್ಯಾದ ಮಾರುಕಟ್ಟೆಗಳಾದ ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಬುಧವಾರ ನಷ್ಟದೊಂದಿಗೆ ಕೊನೆಗೊಂಡಿವೆ. ಸಿಯೋಲ್ ಮಾತ್ರ ಸಣ್ಣ ಲಾಭಗಳೊಂದಿಗೆ ಸ್ಥಿರವಾಗಿದೆ. ಮತ್ತೊಂದೆಡೆ, ಯುರೋಪಿಯನ್ ಮಾರುಕಟ್ಟೆಗಳು ಸಹ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಇವೆಲ್ಲವೂ ಭಾರತದ ಷೇರುಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಮಂಗಳವಾರದಂದು ಅಮೆರಿಕದ ಮಾರುಕಟ್ಟೆಗಳು ಲಾಭದೊಂದಿಗೆ ಅಂತ್ಯಗೊಂಡಿದ್ದು ಗೊತ್ತೇ ಇದೆ.

ವಿದೇಶಿ ಸಾಂಸ್ಥಿಕ ಹೂಡಿಕೆ: ಸ್ಟಾಕ್ ಎಕ್ಸ್ಚೇಂಜ್ ಡೇಟಾ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 1,509 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದೊಂದು ಸಹ ಇಂದು ಷೇರು ಮಾರುಕಟ್ಟೆ ಕುಸಿಯಲು ಕಾರಣವಾಗಿದೆ ಎನ್ನುತ್ತಾರೆ ತಜ್ಞರು.

ತೈಲ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ.0.90ರಷ್ಟು ಇಳಿಕೆಯಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 82.90 ಡಾಲರ್​ಗೆ ಮಾರಾಟವಾಗುತ್ತಿದೆ.

ರುಪಾಯಿ ಮೌಲ್ಯ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 3 ಪೈಸೆ ಇಳಿಕೆಯಾಗಿದೆ. ಪ್ರಸ್ತುತ, ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.82.92 ಆಗಿದೆ.

ಇದನ್ನೂ ಓದಿ: 10 ವರ್ಷಗಳಲ್ಲಿ $2 ಟ್ರಿಲಿಯನ್​ ತಲುಪಲಿದೆ ಭಾರತದ ರಿಟೇಲ್ ಮಾರುಕಟ್ಟೆ: ಸಂಶೋಧನಾ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.