ETV Bharat / business

ನಿರೀಕ್ಷೆಗಿಂತ ಬಿಜೆಪಿಗೆ ಹಿನ್ನಡೆ: ಷೇರು ಮಾರುಕಟ್ಟೆ ಭಾರಿ ಕುಸಿತ: 3 ಸಾವಿರ ಅಂಕ ಕಳೆದುಕೊಂಡ ಸೆನ್ಸೆಕ್ಸ್​ - Lok Sabha Election Results 2024 - LOK SABHA ELECTION RESULTS 2024

ಮತ ಏಣಿಕೆಯ ದಿನವಾದ ಮಂಗಳವಾರದಂದು ಭಾರತದ ಷೇರು ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿವೆ.

ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಭಾರಿ ಕುಸಿತ
ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಭಾರಿ ಕುಸಿತ (IANS (ಸಂಗ್ರಹ ಚಿತ್ರ))
author img

By ETV Bharat Karnataka Team

Published : Jun 4, 2024, 11:20 AM IST

ಮುಂಬೈ : ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿರುವಂತೆಯೇ ಸೆನ್ಸೆಕ್ಸ್ ಮತ್ತು ನಿಫ್ಟಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡವು. ಮಾರುಕಟ್ಟೆಯ ನಿರೀಕ್ಷೆಗಳನ್ನು ಮೀರಿ ಕಾಂಗ್ರೆಸ್ ನೇತೃತ್ವದ ಐಎನ್​ಡಿಐಎ ಮೈತ್ರಿಕೂಟವು ಹೆಚ್ಚು ಸ್ಥಾನಗಳಲ್ಲಿ ಲೀಡ್​ ಪಡೆದುಕೊಳ್ಳುತ್ತಿರುವುದು ಈ ಪ್ರವೃತ್ತಿಗೆ ಕಾರಣವಾಗಿದೆ.

ಇಂದಿನ ವಹಿವಾಟಿನಲ್ಲಿ ಪಿಎಸ್ ಯು, ರಕ್ಷಣಾ ಮತ್ತು ರೈಲ್ವೆ ಸಂಬಂಧಿತ ಷೇರುಗಳು ಕುಸಿದವು. ಅದಾನಿ ಸಮೂಹದ ಬಹುತೇಕ ಷೇರುಗಳು ಕೂಡ ಇಳಿಕೆಯಲ್ಲಿ ವಹಿವಾಟು ನಡೆಸುತ್ತಿವೆ. ಬೆಳಗ್ಗೆ 10.50 ಕ್ಕೆ, 30-ಪ್ಯಾಕ್ ಸೆನ್ಸೆಕ್ಸ್​ ಸೂಚ್ಯಂಕವು 3047 ಪಾಯಿಂಟ್ ಅಥವಾ ಶೇಕಡಾ 3.98 ರಷ್ಟು ಕುಸಿದು 73,421ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 918 ಪಾಯಿಂಟ್ ಅಥವಾ ಶೇಕಡಾ 3.95 ರಷ್ಟು ಕುಸಿದು 22,345 ಕ್ಕೆ ತಲುಪಿದೆ. ಬಿಎಸ್ಇ ಪಿಎಸ್ ಯು ಸೂಚ್ಯಂಕವು ಸುಮಾರು 5 ಪ್ರತಿಶತದಷ್ಟು ಕುಸಿದರೆ, ಅದಾನಿ ಗ್ರೂಪ್ ಷೇರುಗಳು ಶೇಕಡಾ 12 ರವರೆಗೆ ಕುಸಿದವು.

ಸೆನ್ಸೆಕ್ಸ್ ಷೇರುಗಳ ಪೈಕಿ ಎನ್​ಟಿಪಿಸಿ ಶೇ 6.16, ಎಸ್​ಬಿಐ ಶೇ .5.94 ಮತ್ತು ಪವರ್ ಗ್ರಿಡ್ ಶೇ 5.85ರಷ್ಟು ಕುಸಿದವು. ಲಾರ್ಸನ್ ಆಂಡ್ ಟರ್ಬೋ, ಬಜಾಜ್ ಫಿನ್ ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 5 ರಷ್ಟು ಕುಸಿದವು.

ಅದಾನಿ ಷೇರುಗಳಲ್ಲಿ, ಅದಾನಿ ಎಂಟರ್ ಪ್ರೈಸಸ್ ಶೇಕಡಾ 9.62 ರಷ್ಟು ಕುಸಿದು 3,295.10 ರೂ.ಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡಾ 8.91 ರಷ್ಟು ಕುಸಿದು 1,443.80 ರೂ.ಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡಾ 8.91 ರಷ್ಟು ಕುಸಿದು 797 ರೂ.ಗೆ ತಲುಪಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಅದಾನಿ ಎನರ್ಜಿ ಸಲ್ಯೂಷನ್ಸ್ ಶೇಕಡಾ 10 ರಿಂದ 11 ರಷ್ಟು ಕುಸಿದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ ₹ 6,850.76 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಅಂಕಿ ಅಂಶಗಳು ತಿಳಿಸಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ ಮತ್ತು ಶಾಂಘೈ ಇಳಿಕೆಯಲ್ಲಿ ವಹಿವಾಟು ನಡೆಸಿದರೆ, ಹಾಂಗ್ ಕಾಂಗ್ ಲಾಭದೊಂದಿಗೆ ವಹಿವಾಟು ನಡೆಸಿತು.

ಯುಎಸ್ ಮಾರುಕಟ್ಟೆಗಳು ಸೋಮವಾರ ಮಿಶ್ರ ಟಿಪ್ಪಣಿಯಲ್ಲಿ ಕೊನೆಗೊಂಡವು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.68 ರಷ್ಟು ಇಳಿದು ಬ್ಯಾರೆಲ್​ಗೆ 77.83 ಡಾಲರ್​ಗೆ ತಲುಪಿದೆ.

ಇದನ್ನೂ ಓದಿ : ಜೂನ್ 5ರಿಂದ ಆರ್​ಬಿಐ ಎಂಪಿಸಿ ಸಭೆ: ರೆಪೊ ದರ ಬದಲಾವಣೆ ಸಾಧ್ಯತೆ ಇಲ್ಲವೆಂದ ತಜ್ಞರು - Repo Rate

ETV Bharat Logo

Copyright © 2025 Ushodaya Enterprises Pvt. Ltd., All Rights Reserved.