ETV Bharat / business

ಷೇರು ಮಾರುಕಟ್ಟೆ ಅಲ್ಪ ಕುಸಿತ: ಸೆನ್ಸೆಕ್ಸ್​ 34 & ನಿಫ್ಟಿ 18 ಅಂಕ ಇಳಿಕೆ - Stock Market

author img

By ETV Bharat Karnataka Team

Published : Jul 2, 2024, 6:27 PM IST

ಮಂಗಳವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಅಲ್ಪ ಕುಸಿತ ಕಂಡಿವೆ.

ಷೇರು ಮಾರುಕಟ್ಟೆ ಅಲ್ಪ ಕುಸಿತ
ಷೇರು ಮಾರುಕಟ್ಟೆ ಅಲ್ಪ ಕುಸಿತ (IANS (ಸಾಂದರ್ಭಿಕ ಚಿತ್ರ))

ಮುಂಬೈ: ಬ್ಯಾಂಕಿಂಗ್ ಷೇರುಗಳಲ್ಲಿ ಮಾರಾಟದ ಒತ್ತಡದಿಂದಾಗಿ ಭಾರತದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳು ಮಂಗಳವಾರ ಅಲ್ಪ ನಷ್ಟದೊಂದಿಗೆ ಕೊನೆಗೊಂಡವು. ಮಂಗಳವಾರದ ವಹಿವಾಟಿನಲ್ಲಿ ಎನ್ಎಸ್ಇ ನಿಫ್ಟಿ50 18.10 ಪಾಯಿಂಟ್ಸ್ ಅಥವಾ ಶೇಕಡಾ 0.07 ರಷ್ಟು ಕುಸಿದು 24,123.85 ರಲ್ಲಿ ಕೊನೆಗೊಂಡರೆ, ಬಿಎಸ್ಇ ಸೆನ್ಸೆಕ್ಸ್ 34.73 ಪಾಯಿಂಟ್ಸ್ ಅಥವಾ ಶೇಕಡಾ 0.04 ರಷ್ಟು ಕುಸಿದು 79,441.46 ರಲ್ಲಿ ಕೊನೆಗೊಂಡಿದೆ.

ಸ್ಮಾಲ್ - ಕ್ಯಾಪ್ ಮತ್ತು ಮಿಡ್ - ಕ್ಯಾಪ್ ಷೇರುಗಳ ಕುಸಿತದೊಂದಿಗೆ ವಿಶಾಲ ಸೂಚ್ಯಂಕಗಳು ಕೂಡ ಇಳಿಕೆಯೊಂದಿಗೆ ಕೊನೆಗೊಂಡವು. ಬ್ಯಾಂಕ್ ನಿಫ್ಟಿ ಸೂಚ್ಯಂಕವು 406.65 ಪಾಯಿಂಟ್ ಅಥವಾ ಶೇಕಡಾ 0.77 ರಷ್ಟು ಕುಸಿದು 52,168.10 ಕ್ಕೆ ತಲುಪಿದೆ. ಮಾಧ್ಯಮ ಮತ್ತು ಐಟಿ ಷೇರುಗಳು ಇತರ ವಲಯ ಸೂಚ್ಯಂಕಗಳಲ್ಲಿ ಲಾಭ ಗಳಿಸಿದರೆ, ಪಿಎಸ್​ಯು ಬ್ಯಾಂಕುಗಳು ಮತ್ತು ಆಟೋ ಷೇರುಗಳು ಕುಸಿದವು.

ಸೆನ್ಸೆಕ್ಸ್​ನ 30 ಷೇರುಗಳ ಪೈಕಿ, ಸೌದಿ ಅರಾಮ್ಕೊದಿಂದ ಆರ್ಡರ್ ಪಡೆದ ಸುದ್ದಿಯ ನಡುವೆ ಲಾರ್ಸೆನ್ & ಟೂಬ್ರೊ ಸುಮಾರು ಶೇಕಡಾ 3 ರಷ್ಟು ಲಾಭ ಗಳಿಸಿತು. ಇನ್ಫೋಸಿಸ್, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಟಿಸಿಎಸ್ ಲಾಭ ಗಳಿಸಿದ ಇತರ ಪ್ರಮುಖ ಷೇರುಗಳಾಗಿವೆ. ಮತ್ತೊಂದೆಡೆ ಭಾರ್ತಿ ಏರ್ಟೆಲ್ ಮತ್ತು ಕೋಟಕ್ ಬ್ಯಾಂಕ್ ತಲಾ ಶೇಕಡಾ 2 ಕ್ಕಿಂತ ಹೆಚ್ಚಾಗಿವೆ. ಇಂಡಸ್ಇಂಡ್ ಬ್ಯಾಂಕ್, ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್​ ಬಲವಾಗಿದ್ದು ಮತ್ತು ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ಮಂಗಳವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 6 ಪೈಸೆ ಕುಸಿದು 83.50 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ 83.51 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಡಾಲರ್ ವಿರುದ್ಧ 83.47 ರ ಗರಿಷ್ಠ ಮತ್ತು 83.56 ರ ಕನಿಷ್ಠ ಮಟ್ಟವನ್ನು ತಲುಪಿತು. ಇದು ಅಂತಿಮವಾಗಿ ಡಾಲರ್ ವಿರುದ್ಧ 83.50 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 6 ಪೈಸೆ ಕಡಿಮೆಯಾಗಿದೆ.

ವಿಂಡ್​ ಫಾಲ್ ತೆರಿಗೆ ಹೆಚ್ಚಳ: ಜುಲೈ 2, 2024 ರ ಮಂಗಳವಾರದಿಂದ ಜಾರಿಗೆ ಬರುವಂತೆ ದೇಶೀಯವಾಗಿ ಉತ್ಪಾದಿಸಿದ ಕಚ್ಚಾ ತೈಲದ ಮೇಲಿನ ಲಾಭದ ತೆರಿಗೆಯನ್ನು (ವಿಂಡ್​ ಫಾಲ್ ಟ್ಯಾಕ್ಸ್​) ಪ್ರತಿ ಟನ್​ಗೆ 3,250 ರೂ.ಗಳಿಂದ 6,000 ರೂ.ಗೆ ಹೆಚ್ಚಿಸಲಾಗಿದೆ. ಈ ತೆರಿಗೆಯನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ) ರೂಪದಲ್ಲಿ ವಿಧಿಸಲಾಗುತ್ತದೆ. ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನ ಅಥವಾ ಎಟಿಎಫ್ ರಫ್ತಿನ ಮೇಲಿನ ಎಸ್ಎಇಡಿಯನ್ನು 'ಶೂನ್ಯ'ದಲ್ಲಿಯೇ ಮುಂದುವರಿಸಲಾಗಿದೆ. ಹೊಸ ದರಗಳು ಜುಲೈ 2 ರಿಂದ ಜಾರಿಗೆ ಬರಲಿವೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಇದನ್ನೂ ಓದಿ : ನಿಯಮ ಉಲ್ಲಂಘನೆ: ಮೇ ತಿಂಗಳಲ್ಲಿ 66 ಲಕ್ಷ ಖಾತೆ ನಿಷೇಧಿಸಿದ ವಾಟ್ಸ್​ಆ್ಯಪ್ - WhatsApp banned accounts

ETV Bharat Logo

Copyright © 2024 Ushodaya Enterprises Pvt. Ltd., All Rights Reserved.