ಮುಂಬೈ : ಬುಧವಾರ ದಿನದ ಆರಂಭದಲ್ಲಿ ಏರಿಕೆಯೊಂದಿಗೆ ಪ್ರಾರಂಭವಾದ ಷೇರು ಮಾರುಕಟ್ಟೆ, ತನ್ನ ವಹಿವಾಟಿನ ಕೊನೆಯಲ್ಲಿ ಲಾಭ ಕಳೆದುಕೊಂಡು ನಷ್ಟದೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 117.58 ಪಾಯಿಂಟ್ಸ್ ಅಥವಾ ಶೇಕಡಾ 0.16 ರಷ್ಟು ಕುಸಿದು 72,987.03 ರಲ್ಲಿ ಕೊನೆಗೊಂಡರೆ, ನಿಫ್ಟಿ 17.30 ಪಾಯಿಂಟ್ಸ್ ಅಥವಾ ಶೇಕಡಾ 0.08 ರಷ್ಟು ಇಳಿಕೆಯಾಗಿ 22,200.55 ರಲ್ಲಿ ಕೊನೆಗೊಂಡಿತು.
ಸೆನ್ಸೆಕ್ಸ್ನಲ್ಲಿ ಭಾರ್ತಿ ಏರ್ಟೆಲ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಎನ್ಟಿಪಿಸಿ, ಟಾಟಾ ಸ್ಟೀಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಮೋಟಾರ್ಸ್, ಬಜಾಜ್ ಫಿನ್ ಸರ್ವ್ ಮತ್ತು ಬಜಾಜ್ ಫೈನಾನ್ಸ್ ಇವು ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಮತ್ತೊಂದೆಡೆ, ಎಚ್ಯುಎಲ್, ಎಚ್ಡಿಎಫ್ಸಿ ಬ್ಯಾಂಕ್, ಜೆಎಸ್ಡಬ್ಲ್ಯೂ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಅನುಭವಿಸಿದವು.
ವಲಯ ಸೂಚ್ಯಂಕಗಳ ಪೈಕಿ ಫಾರ್ಮಾ, ಪಿಎಸ್ಯು ಬ್ಯಾಂಕ್, ಇಂಧನ, ಮೂಲಸೌಕರ್ಯ, ಲೋಹ ಏರಿಕೆಯಲ್ಲಿ ವಹಿವಾಟು ನಡೆಸಿದರೆ, ಆಟೋ, ಐಟಿ, ಎಫ್ಎಂಸಿಜಿ ಮತ್ತು ಸೇವಾ ವಲಯದ ಷೇರುಗಳು ಇಳಿಕೆಯೊಂದಿಗೆ ವಹಿವಾಟು ನಡೆಸಿದವು. ನಿಫ್ಟಿ ಪಿಎಸ್ಇ ಸೂಚ್ಯಂಕವು 174.55 ಪಾಯಿಂಟ್ಸ್ ಅಥವಾ ಶೇಕಡಾ 1.76 ರಷ್ಟು ಏರಿಕೆ ಕಂಡು 10,090.30ಕ್ಕೆ ತಲುಪಿದೆ.
ವಿಶಾಲ ಮಾರುಕಟ್ಟೆಗಳನ್ನು ನೋಡುವುದಾದರೆ - ನಿಫ್ಟಿ ಮಿಡ್ ಕ್ಯಾಪ್-100 482.55 ಪಾಯಿಂಟ್ ಅಥವಾ ಶೇಕಡಾ 0.96 ರಷ್ಟು ಏರಿಕೆ ಕಂಡು 50,707.75 ಕ್ಕೆ ತಲುಪಿದ್ದರೆ, ನಿಫ್ಟಿ ಸ್ಮಾಲ್ ಕ್ಯಾಪ್ 100 94.30 ಪಾಯಿಂಟ್ ಅಥವಾ ಶೇಕಡಾ 0.58 ರಷ್ಟು ಏರಿಕೆ ಕಂಡು 16,457.45ಕ್ಕೆ ತಲುಪಿದೆ.
ಮೇ 15 ರಂದು ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಒಂದು ಪೈಸೆ ಏರಿಕೆಯಾಗಿ 83.50 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ವಿದೇಶಿ ಹೂಡಿಕೆದಾರರು ಯುಎಸ್ ಡಾಲರ್ಗಳನ್ನು ಖರೀದಿಸುತ್ತಿರುವುದರಿಂದ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಡಾಲರ್ಗಳನ್ನು ಮಾರಾಟ ಮಾಡುತ್ತಿರುವುದರಿಂದ ಡಾಲರ್ ಮತ್ತು ರೂಪಾಯಿ ಜೋಡಿಯು ಸ್ವಲ್ಪ ದೌರ್ಬಲ್ಯದ ವ್ಯಾಪ್ತಿಯಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯು 83.49 ರಲ್ಲಿ ಪ್ರಾರಂಭವಾಯಿತು. ವಹಿವಾಟಿನಲ್ಲಿ ಇದು 83.51-83.47 ರ ಸೀಮಿತ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ರೂಪಾಯಿಯು ಅಂತಿಮವಾಗಿ 83.50 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ ಒಂದು ಪೈಸೆ ಹೆಚ್ಚಾಗಿದೆ.
ಇದನ್ನೂ ಓದಿ : ಭಾರ್ತಿ ಏರ್ಟೆಲ್ ನಿವ್ವಳ ಲಾಭ ಶೇ 31ರಷ್ಟು ಕುಸಿತ: ಪ್ರತಿ ಷೇರಿಗೆ 8 ರೂ. ಲಾಭಾಂಶ ಘೋಷಣೆ - Airtel Net Profit