ETV Bharat / business

ಜನರ ಬಳಿ ಇನ್ನೂ ಇದೆ 8,470 ಕೋಟಿ ಮೌಲ್ಯದ 2,000 ರೂಪಾಯಿ ನೋಟುಗಳು: ಆರ್​ಬಿಐ - ಅಮಾನ್ಯೀಕರಣ

2023ರ ಮೇ 19ರಂದು ಆರ್​ಬಿಐ 2,000 ರೂ ನೋಟಿನ ಚಲಾವಣೆಯನ್ನು ಅಮಾನ್ಯೀಕರಣ ಮಾಡಿತ್ತು.

2000 NOTES
rbi2000 NOTES
author img

By PTI

Published : Mar 1, 2024, 4:03 PM IST

ಮುಂಬೈ: 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ದಿನದಿಂದ ಇಲ್ಲಿಯವರೆಗೆ ಶೇ 97.62ರಷ್ಟು ನೋಟುಗಳು ಮರಳಿದ್ದು, 8,470 ಕೋಟಿ ಮೌಲ್ಯದ ನೋಟುಗಳು ಇನ್ನೂ ಕೂಡ ಸಾರ್ವಜನಿಕರ ಬಳಿ ಇದೆ ಎಂದು ಭಾರತೀಯ ರಿಸರ್ವ್​​ ಬ್ಯಾಂಕ್ (ಆರ್‌ಬಿಐ)​ ತಿಳಿಸಿದೆ. ​​

2023ರ ಮೇ 19ರಂದು ಆರ್​ಬಿಐ 2,000 ರೂಪಾಯಿ ನೋಟಿನ ಚಲಾವಣೆ ನಿಲ್ಲಿಸಿತ್ತು. ಈ ನೋಟುಗಳನ್ನು ಹಿಂತಿರುಗಿಸಲು ಕಾಲಾವಕಾಶ ನೀಡಲಾಗಿತ್ತು. ಮೇ 19, 2023ರಲ್ಲಿ ನೋಟಿನ ಚಲಾವಣೆಯ ಮೌಲ್ಯ 3.56 ಲಕ್ಷ ಕೋಟಿಯಾಗಿತ್ತು ಎಂದು ಆರ್‌ಬಿಐ ಘೋಷಿಸಿತ್ತು. ಇದೀಗ ಫೆಬ್ರವರಿ 29, 2024ರಲ್ಲಿನ ವಾಣಿಜ್ಯ ವಹಿವಾಟು ಮುಕ್ತಾಯದ ಸಮಯದಲ್ಲಿ ಇದರ ಮೌಲ್ಯ 8,470 ಕೋಟಿಗೆ ಇಳಿಕೆ ಕಂಡಿದೆ ದೇಶದ ಅಪೆಕ್ಸ್‌ ಬ್ಯಾಂಕ್‌ ಮಾಹಿತಿ ನೀಡಿದೆ.

ಎರಡು ಸಾವಿರ ರೂಪಾಯಿ ನೋಟುಗಳು 'ಲೀಗಲ್​ ಟೆಂಡರ್'​ ಆಗಿ ಮುಂದುವರೆಯಲಿವೆ. ದೇಶದಲ್ಲಿರುವ ಆರ್​ಬಿಐನ 19 ಕಚೇರಿಯಲ್ಲಿ ಜನರು ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಅಲ್ಲದೇ ಇಂಡಿಯಾ ಪೋಸ್ಟ್​​ ಮೂಲಕವೂ ಆರ್​ಬಿಐ ನೀಡಿರುವ ಖಾತೆಗೆ ನೋಟುಗಳನ್ನು ವರ್ಗಾಯಿಸಬಹುದು.

ಅಮಾನ್ಯೀಕರಣ ಘೋಷಣೆಯ ಬಳಿಕ ಸಾರ್ವಜನಿಕರು ಮತ್ತು ಘಟಕಗಳು ನೋಟುಗಳನ್ನು ಮರಳಿಸಲು 2023ರ ಸೆಪ್ಟೆಂಬರ್​ 30ರವರೆಗೆ ಆರ್‌ಬಿಐ ಗಡುವು ನೀಡಿತ್ತು. ಬಳಿಕ ಈ ಗಡುವನ್ನು 2023 ಅಕ್ಟೋಬರ್​​ 7ರವರೆಗೆ ವಿಸ್ತರಿಸಲಾಗಿತ್ತು. ಬ್ಯಾಂಕ್​ನಲ್ಲಿ ಈ ನೋಟುಗಳ ಠೇವಣಿ ಮತ್ತು ಬದಲಾವಣೆಗೂ ಕೂಡ ಅಕ್ಟೋಬರ್​ 7ರವರೆಗೆ ಅವಕಾಶ ನೀಡಲಾಗಿತ್ತು. 2023 ಅಕ್ಟೋಬರ್​ 8ರ ಬಳಿಕ ಈ ನೋಟುಗಳನ್ನು ಆರ್​ಬಿಐನ 19 ಕಚೇರಿಗಳ ಬ್ಯಾಂಕ್​ ಖಾತೆಯಲ್ಲಿ ಬದಲಾಯಿಸುವ ಅವಕಾಶ ನೀಡಲಾಯಿತು.

ಬೆಂಗಳೂರು, ಅಹಮದಾಬಾದ್​, ಭೋಪಾಲ್​, ಭುವನೇಶ್ವರ್​​, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್​, ಜೈಪುರ, ಜಮ್ಮು, ಕಾನ್ಫುರ್​​, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ್​​, ನವದೆಹಲಿ, ಪಟ್ನಾ ಮತ್ತು ತಿರುವನಂತಪುರದಲ್ಲಿರುವ ಆರ್​ಬಿಐ ಕಚೇರಿಗಳಲ್ಲಿ ನೋಟುಗಳ ಠೇವಣಿ ಅಥವಾ ಬದಲಾವಣೆ ಮಾಡಿಕೊಳ್ಳಬಹುದು.

2016ರ ನವೆಂಬರ್​ನಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ 1000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯೀಕರಣ ಮಾಡಿ, ಆರ್​ಬಿಐ ಕಾಯಿದೆ 1934ರ ಸೆಕ್ಷನ್ 24 (1) ಅಡಿ ಹೊಸ 2000 ರೂ ನೋಟು ಪರಿಚಯಿಸಲಾಗಿತ್ತು.

ಇದನ್ನೂ ಓದಿ: ವಿಕಸಿತ್ ಭಾರತ ನಿರ್ಮಾಣಕ್ಕೆ ಬೆಂಗಳೂರು ತೆರಿಗೆದಾರರು ಬಲ ನೀಡುತ್ತಿದ್ದಾರೆ: ಸಚಿವೆ ಸೀತಾರಾಮನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.