ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಗತಿಯತ್ತ ಸಾಗುತ್ತಲೇ ಇದೆ. ಭಾನುವಾರ 10 ಗ್ರಾಂ ಚಿನ್ನದ ಬೆಲೆ 74,700 ರೂಪಾಯಿ ಇದ್ದರೆ, 248 ರೂಪಾಯಿ ಏರಿಕೆಯಾಗಿ 74,948 ರೂ.ಗೆ ತಲುಪಿದೆ. ಭಾನುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 85,588 ರೂ.ನಷ್ಟಿದ್ದರೆ, ಸೋಮವಾರ ಅದು 601 ರೂಪಾಯಿ ಹೆಚ್ಚಳವಾಗಿ 86,159 ರೂ.ಗೆ ತಲುಪಿದೆ.
ಪ್ರಮುಖ ನಗರಗಳಲ್ಲಿ ದರ ಹೀಗಿದೆ:
ಬೆಂಗಳೂರಿನಲ್ಲಿ 10 ಗ್ರಾಂ (24 ಕ್ಯಾರೆಟ್) ಚಿನ್ನದ ಬೆಲೆ 74,600, ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.
10 ಗ್ರಾಂ( 22 ಕ್ಯಾರೆಟ್) ಚಿನ್ನದ ಬೆಲೆ 67600( 14 ಏಪ್ರಿಲ್)
ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.74,948, ಪ್ರತಿ ಕೆಜಿ ಬೆಳ್ಳಿ ಬೆಲೆ 86,159 ರೂ.
ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.74,948, ಪ್ರತಿ ಕೆಜಿ ಬೆಳ್ಳಿ ಬೆಲೆ 86,159 ರೂ.
ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.74,948, ಪ್ರತಿ ಕೆಜಿ ಬೆಳ್ಳಿ ಬೆಲೆ 86,159 ರೂ.
ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.74,948, ಪ್ರತಿ ಕೆಜಿ ಬೆಳ್ಳಿ ಬೆಲೆ 86,159 ರೂ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದ ದರಗಳುನ್ನು ಇಲ್ಲಿ ಪರಿಗಣಿಸಲಾಗಿದೆ. ಇದು ಗ್ರಾಹಕರ ಬೇಡಿಕೆ ಮತ್ತು ಮಾರುಕಟ್ಟೆ ಪರಿಣಾಮಗಳಿಂದ ಬದಲಾಗಬಹುದು.
ಸ್ಪಾಟ್ ಚಿನ್ನದ ಬೆಲೆ? : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ದರಗಳು ಹೆಚ್ಚಿವೆ. ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ ಭಾನುವಾರ 2,344 ಡಾಲರ್‌ಗಳಷ್ಟಿತ್ತು. ಸೋಮವಾರದ ವೇಳೆಗೆ ಅದು 15 ಡಾಲರ್‌ಗಳಷ್ಟು ಏರಿಕೆಯಾಗಿ 2,359 ಕ್ಕೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 28.25 ಡಾಲರ್ಗ ಬಿಕರಿಯಾಗುತ್ತಿದೆ.
ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?
ಕ್ರಿಪ್ಟೋಕರೆನ್ಸಿ ವಹಿವಾಟು ಸೋಮವಾರ ಸಹಜವಾಗಿ ಮುಂದುವರಿಯುತ್ತಿವೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಮೌಲ್ಯಗಳು ಹೀಗಿವೆ.
- ಬಿಟ್ ಕಾಯಿನ್ 52,50,080 ರೂಪಾಯಿ
- ಎಥೆರಿಯಂ 2,61,238 ರೂಪಾಯಿ
- ಟೆಥರ್ 80.1 ರೂಪಾಯಿ
- ಬೈನಾನ್ಸ್ ಕಾಯಿನ್ 44,880 ರೂಪಾಯಿ
- ಸೊಲೊನಾ 12,279 ರೂಪಾಯಿ
ಪೆಟ್ರೋಲ್, ಡೀಸೆಲ್ ದರ ಮಾಹಿತಿ: ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ 99.84 ರೂಪಾಯಿ ಇದ್ದರೆ, ಡೀಸೆಲ್ 85.93 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಡೀಸೆಲ್ ಲೀಟರ್‌ಗೆ 87.09, ಪೆಟ್ರೋಲ್ 101.18 ರೂಪಾಯಿ ಇದೆ. ಮೈಸೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 99.40 ರೂಪಾಯಿ, ಡೀಸೆಲ್ 85.54 ರೂಪಾಯಿ ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.76 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 87.66 ರೂ. ಆಗಿದೆ.