ನವದೆಹಲಿ : ಯಾವುದೇ ಲಂಚದ ಆರೋಪದ ಬಗ್ಗೆ ಅಮೆರಿಕ ನ್ಯಾಯಾಂಗ ಇಲಾಖೆಯಿಂದ (ಡಿಒಜೆ) ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅದಾನಿ ಗ್ರೂಪ್ ಆಫ್ ಕಂಪನಿ ತಿಳಿಸಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಪಾರದರ್ಶಕತೆ ಗಮನಿಸಿದರೆ ಅದಾನಿ ಸಮೂಹದ ಮೇಲಿನ ಲಂಚದ ಆರೋಪ ತೀರಾ ಅಸಂಭವ ಎಂದು ಜೆಪಿ ಮೋರ್ಗಾನ್ ವರದಿ ತಿಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯಿಂದ ಯಾವುದೇ ನೋಟಿಸ್ ಬಂದಿಲ್ಲ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಸುಳ್ಳು ಎಂದು ಅದಾನಿ ಗ್ರೂಪ್ ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಕಳೆದ ವಾರಾಂತ್ಯದಲ್ಲಿ, ಅಮೆರಿಕದ ಅಟಾರ್ನಿ ಕಚೇರಿ ಮತ್ತು ಯುಎಸ್ ಡಿಪಾರ್ಟ್ಮೆಂಟ್ ಜಸ್ಟಿಸ್ನ (ಡಿಒಜೆ) ಪ್ರಾಸಿಕ್ಯೂಟರ್ ಗಳು ಅದಾನಿ ಗ್ರೂಪ್ ಕಂಪನಿಗಳು ಮತ್ತು ಅಜುರೆ ಪವರ್ ಗ್ಲೋಬಲ್ ಕಂಪನಿಗಳ ವಿರುದ್ಧ ಕೇಳಿ ಬಂದ ಸಂಭಾವ್ಯ ಲಂಚದ ಆರೋಪಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಬ್ಲೂಮ್ ಬರ್ಗ್ ಮಾಧ್ಯಮ ವರದಿ ಮಾಡಿತ್ತು.
ಈ ಬಗ್ಗೆ ಮತ್ತೊಂದು ಪ್ರತ್ಯೇಕ ಫೈಲಿಂಗ್ ಸಲ್ಲಿಸಿರುವ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, "ನಮಗೆ ಯಾವುದೇ ನೋಟಿಸ್ ಬಂದಿಲ್ಲ, ಆದರೆ ಯುನೈಟೆಡ್ ಸ್ಟೇಟ್ಸ್ ಭ್ರಷ್ಟಾಚಾರ ವಿರೋಧಿ ಕಾನೂನುಗಳ ಸಂಭಾವ್ಯ ಉಲ್ಲಂಘನೆಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ತನಿಖೆಯ ಬಗ್ಗೆ ಥರ್ಡ್ ಪಾರ್ಟಿಯಿಂದ ತಿಳಿದು ಬಂದಿದೆ" ಎಂದು ಹೇಳಿದೆ.
"ಕಂಪನಿಯು ಈ ಥರ್ಡ್ ಪಾರ್ಟಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಮತ್ತು ಅದೇ ಕಾರಣದಿಂದ ಕಂಪನಿ ಅಥವಾ ಅದರ ಯಾವುದೇ ಸಿಬ್ಬಂದಿ ಥರ್ಡ್ ಪಾರ್ಟಿಯೊಂದಿಗಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಳಪಟ್ಟಿರುವ ಅಥವಾ ಬಹಿರಂಗಪಡಿಸಿರುವ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ" ಎಂದು ಅದಾನಿ ಗ್ರೀನ್ ಎನರ್ಜಿ ಫೈಲಿಂಗ್ನಲ್ಲಿ ತಿಳಿಸಿದೆ.
"ಒಟ್ಟಾರೆಯಾಗಿ ಇದು ಕಂಪನಿಗಳ ನವೀಕರಿಸಬಹುದಾದ ಇಂಧನ ಯೋಜನೆಗೆ ಸಂಬಂಧಿಸಿದೆ ಎಂದು ಭಾವಿಸಿದರೆ, ವರದಿಯಾದ ತನಿಖೆಯು ಪ್ರಾಸಿಕ್ಯೂಷನ್ ಹಂತಕ್ಕೆ ಹೋದರೂ ಮತ್ತು ನಂತರ ಲಂಚದ ನಿದರ್ಶನವನ್ನು ಸ್ಥಾಪಿಸಿದರೂ ಅಂತಹ ನಿಬಂಧನೆಗಳು ಭೌತಿಕ ಆರ್ಥಿಕ ಪರಿಣಾಮಕ್ಕೆ ಕಾರಣವಾಗುವುದಿಲ್ಲ ಎಂದು ನಾವು ನಂಬುತ್ತೇವೆ" ಎಂದು ಜೆಪಿ ಮೋರ್ಗಾನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 20ರಷ್ಟು ಹೆಚ್ಚಳ