ಮುಂಬೈ: ಕಳೆದ ವಾರದ 2.5 ಸ್ಯೂಚಂಕದ ಇಳಿಕೆ ನಂತರ ವಾರದ ಆರಂಭದಲ್ಲಿ ಮತ್ತೆ ಷೇರು ಮಾರುಕಟ್ಟೆ ಪುಟಿದೆದ್ದಿದೆ. ನಿಫ್ಟಿ 50 ಸೂಚ್ಯಂಕವು 70.30 ಪಾಯಿಂಟ್ ಅಥವಾ 0.29 ರಷ್ಟು ಏರಿಕೆಯೊಂದಿಗೆ 24,251.10 ಪಾಯಿಂಟ್‌ಗಳಲ್ಲಿ ಶುಭಾರಂಭ ಮಾಡಿದೆ. ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ 251.38 ಪಾಯಿಂಟ್ ಅಥವಾ 0.32 ರಷ್ಟು ಏರಿಕೆಯೊಂದಿಗೆ 79,653.67 ಪಾಯಿಂಟ್‌ಗಳಲ್ಲಿ ಆರಂಭಗೊಂಡಿದೆ. ಭಾರತದ ಮಾರುಕಟ್ಟೆಗಳ ಮೇಲೆ ಎಫ್‌ಐಐ ಮಾರಾಟದ ಒತ್ತಡವು ಮುಂದುವರೆದಂತೆ ಚಂಚಲತೆ ಹೆಚ್ಚುವ ಸಾಧ್ಯತೆ ಇದೆ.
ಈ ಕುರಿತು ಮಾತಾಡಿರುವ ಬ್ಯಾಂಕಿಂಗ್ ಮತ್ತು ಮಾರ್ಕೆಟ್ ತಜ್ಞರಾದ ಅಜಯ್ ಬಗ್ಗೆ, ಭಾರತದ ಮಾರುಕಟ್ಟೆ ಮೇಲೆ ಇನ್ನೂ ಎಫ್‌ಐಐ ಹಿಡಿತವಿದೆ. ಅಕ್ಟೋಬರ್ 2024ರವರೆಗೆ ಎಫ್‌ಐಐ ಭಾರತದ ಮಾಧ್ಯಮಿಕ ಮಾರುಕಟ್ಟೆಗಳಲ್ಲಿ 102,000 ಕೋಟಿ ರೂ ನಿವ್ವಳವಾಗಿ ಮಾರಾಟ ಮಾಡಿದ್ದು, ಪ್ರಾಥಮಿಕ ಮಾರುಕಟ್ಟೆಗಳಲ್ಲಿ 17,000 ಕೋಟಿ ರೂ ಹೂಡಿಕೆ ಮಾಡಿದೆ. ಎಫ್ಐಐನಿಂದ ಮಾರಾಟ ಜೋರಾಗಿದ್ದು, ಇದು ತಿಂಗಳ ಕಡೆಯ ವಾರದಲ್ಲಿ ಮತ್ತಷ್ಟು ಚಂಚಲತೆ ಮುಂದುವರೆಯುವ ನಿರೀಕ್ಷೆ ಇದೆ.
ಅಮೆರಿಕದ 2024 ನವೆಂಬರ್ 5ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ರಾಜ್ಯಗಳಲ್ಲಿ ಮತಗಳ ವ್ಯತ್ಯಾಸವೂ ಪರಿಸ್ಥಿತಿಯನ್ನು ಮತ್ತಷ್ಟು ಡೋಲಾಯಾನ ಮಾಡಿದೆ. ಅಂತಿಮ ಫಲಿತಾಂಶ ಪ್ರಕಟವಾಗುವವರೆಗೂ ಈ ಡೋಲಾಯಮಾನ ಮುಂದುವರೆಯಲಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ವಲಯವಾರು ಸೂಚ್ಯಂಕಗಳಲ್ಲಿ, ನಿಫ್ಟಿ ಐಟಿ ಹೊರತುಪಡಿಸಿ ಎಲ್ಲಾ ಸೂಚ್ಯಂಕಗಳು ಲಾಭದೊಂದಿಗೆ ಆರಂಭಕಂಡಿವೆ. ಆರಂಭದಲ್ಲಿ 0.6ರಷ್ಟು ಕುಸಿತ ಕಂಡಿದ್ದ ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ 0.6ನೊಂದಿಗೆ ಮುನ್ನಡೆ ಸಾಧಿಸಿದೆ.
ನಿಫ್ಟಿ 50, ಐಸಿಐಸಿಐ ಬ್ಯಾಂಕ್ ಲಾಭದ ಪ್ರಮುಖರಾಗಿದ್ದಾರೆ. ನಿಫ್ಟಿ ಪ್ರಮುಖ ನಷ್ಟ ಹೊಂದಿದವರಲ್ಲಿ ಜೆಎಸ್‌ಡಬ್ಲ್ಯೂ ಪ್ರಮುಖವಾಗಿದೆ.
ತ್ರೈಮಾಸಿಕ ಫಲಿತಾಂಶ ಪ್ರಕಟವಾಗಲಿದ್ದು, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಅದಾನಿ ಪವರ್, ಸುಜ್ಲಾನ್ ಎನರ್ಜಿ, ಅಂಬುಜಾ ಸಿಮೆಂಟ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಜೆಎಸ್‌ಡಬ್ಲ್ಯೂ ಇನ್‌ಫ್ರಾ ಮತ್ತು ಇತರರು ಇಂದು ತಮ್ಮ ಎರಡನೇ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಲು ಸಿದ್ಧರಾಗಿದ್ದಾರೆ.
ಇತರ ಏಷ್ಯಾ ಮಾರುಕಟ್ಟೆಗಳಲ್ಲಿ ಜಪಾನ್‌ನ ನಿಕ್ಕಿ ಸೂಚ್ಯಂಕವು ಶೇಕಡಾ 1.43 ರಷ್ಟು ಏರಿಕೆ ಕಂಡರೆ, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ತೈವಾನ್‌ನ ತೂಕದ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಇಳಿಕೆ ಕಂಡವು. ದಕ್ಷಿಣ ಕೊರಿಯಾದ ಕೆಒಎಸ್ಪಿಐ ಸೂಚ್ಯಂಕವು 0.86 ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಆಪಲ್ ಹಿಂದಿಕ್ಕಿ ಪ್ರಪಂಚದ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದ ಎನ್ವಿಡಿಯಾ!