ETV Bharat / business

ಹಣದುಬ್ಬರ ನಿಯಂತ್ರಣದಲ್ಲಿಡುವುದು ಅತ್ಯಗತ್ಯ: RBI ಗವರ್ನರ್ ದಾಸ್ - RBI MONETARY POLICY

ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಅಗತ್ಯ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಆರ್​ಬಿಐ
ಆರ್​ಬಿಐ (IANS)
author img

By PTI

Published : Oct 9, 2024, 1:22 PM IST

ಮುಂಬೈ: 2024-25ರ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 4.5ರಷ್ಟಿರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮುನ್ಸೂಚನೆ ನೀಡಿದೆ. ಅಕ್ಟೋಬರ್ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿ ಮಾತನಾಡಿದ ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್, ದೇಶದಲ್ಲಿ ಬೆಲೆಗಳ ಪರಿಸ್ಥಿತಿಯನ್ನು ಸೂಕ್ಷವಾಗಿ ಗಮನಿಸುತ್ತ ಹಣದುಬ್ಬರವನ್ನು ನಿಯಂತ್ರಣದಲ್ಲಿಡಬೇಕಿದೆ ಎಂದು ಹೇಳಿದರು.

ಫ್ಲೆಕ್ಸಿಬಲ್ ಇನ್ ಫ್ಲೇಷನ್ ಟಾರ್ಗೆಟಿಂಗ್​​ಗೆ ಎಂಟು ವರ್ಷ: 2016 ರಲ್ಲಿ ಜಾರಿಯಾದ ಫ್ಲೆಕ್ಸಿಬಲ್ ಇನ್ ಫ್ಲೇಷನ್ ಟಾರ್ಗೆಟಿಂಗ್ (ಎಫ್ಐಟಿ) ಚೌಕಟ್ಟು 8 ವರ್ಷಗಳನ್ನು ಪೂರ್ಣಗೊಳಿಸಿದೆ ಮತ್ತು ಇದು ಭಾರತದಲ್ಲಿ 21 ನೇ ಶತಮಾನದಲ್ಲಿ ಸನುಷ್ಠಾನಗೊಂಡ ಪ್ರಮುಖ ರಚನಾತ್ಮಕ ಸುಧಾರಣೆಯಾಗಿದೆ ಎಂದು ಅವರು ತಿಳಿಸಿದರು. ಎಫ್ಐಟಿ ಅಡಿಯಲ್ಲಿ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಶೇಕಡಾ 4 ರಷ್ಟಿದೆ ಎಂದು ಆರ್​ಬಿಐ ಖಚಿತಪಡಿಸಿದೆ.

ಆರ್​ಬಿಐ ಬುಧವಾರ 2024-25ರ ಸಿಪಿಐ ಹಣದುಬ್ಬರದ ಮುನ್ಸೂಚನೆಯನ್ನು ಶೇಕಡಾ 4.5 ಕ್ಕೆ ಉಳಿಸಿಕೊಂಡಿದೆ. ಇದು ಎರಡನೇ ತ್ರೈಮಾಸಿಕದಲ್ಲಿ ಶೇ 4.1, ಮೂರನೇ ತ್ರೈಮಾಸಿಕದಲ್ಲಿ ಶೇ 4.8ರಷ್ಟು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 4.2 ರಷ್ಟಿರಲಿದೆ ಎಂದು ಅಂದಾಜು ಮಾಡಿದೆ.

ಸಿಪಿಐ ಹಣದುಬ್ಬರ 4.3ರಷ್ಟು ಇರುವ ಅಂದಾಜು: "2025-26ರ ಮೊದಲ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವು ಶೇಕಡಾ 4.3 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಈ ವಿಷಯದಲ್ಲಿ ಅಪಾಯಗಳು ಸಮತೋಲಿತವಾಗಿವೆ. 2023-24ರಲ್ಲಿ ಈರುಳ್ಳಿ, ಆಲೂಗಡ್ಡೆ ಮತ್ತು ಕಡಲೆ ಬೇಳೆ (ಕಡಲೆ) ಉತ್ಪಾದನೆಯಲ್ಲಿನ ಕೊರತೆಯ ದೀರ್ಘಕಾಲದ ಪರಿಣಾಮಗಳಿಂದಾಗಿ ಪ್ರತಿಕೂಲ ಮೂಲ ಪರಿಣಾಮಗಳು ಮತ್ತು ಆಹಾರ ಬೆಲೆ ಆವೇಗದಲ್ಲಿನ ಏರಿಕೆಯಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಸಿಪಿಐ ಹಣದುಬ್ಬರವು ದೊಡ್ಡ ಜಿಗಿತ ಕಾಣುವ ನಿರೀಕ್ಷೆಯಿದೆ" ಎಂದು ದಾಸ್ ಹೇಳಿದರು.

"ಆದಾಗ್ಯೂ ಉತ್ತಮ ಖಾರಿಫ್ ಫಸಲು, ಧಾನ್ಯಗಳ ಸಾಕಷ್ಟು ಬಫರ್ ದಾಸ್ತಾನು ಮತ್ತು ಮುಂಬರುವ ರಬಿ ಋತುವಿನಲ್ಲಿ ಉತ್ತಮ ಬೆಳೆಯಿಂದಾಗಿ ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರದ ಪಥವು ಅನುಕ್ರಮವಾಗಿ ಮಧ್ಯಮವಾಗಲಿದೆ ಎಂದು ಅವರು ಹೇಳಿದರು. ಅನಿರೀಕ್ಷಿತ ಹವಾಮಾನ ಘಟನೆಗಳು ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳು ಹಣದುಬ್ಬರ ಮೇಲ್ಮುಖವಾಗಲು ಕಾರಣವಾಗಬಹುದು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಅಕ್ಟೋಬರ್​ನಲ್ಲಿ ಅಸ್ಥಿರವಾಗಿವೆ" ಎಂದು ದಾಸ್ ನುಡಿದರು.

"ಖಾರಿಫ್ ಬಿತ್ತನೆಯಲ್ಲಿ ಹೆಚ್ಚಳ, ಸಾಕಷ್ಟು ಬಫರ್ ದಾಸ್ತಾನು ಮತ್ತು ರಾಬಿ ಬಿತ್ತನೆಗೆ ಅನುಕೂಲಕರವಾದ ಉತ್ತಮ ಮಣ್ಣಿನ ತೇವಾಂಶದ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದ ಕೊನೆಯಲ್ಲಿ ಆಹಾರ ಹಣದುಬ್ಬರದ ಒತ್ತಡಗಳು ಸ್ವಲ್ಪ ಕಡಿಮೆಯಾಗಬಹುದು" ಎಂದು ಗವರ್ನರ್​ ದಾಸ್ ಮಾಹಿತಿ ನೀಡಿದರು.

ಇದನ್ನೂ ಓದಿ : 15 ವರ್ಷಕ್ಕೂ ಹಳೆಯ 11 ಲಕ್ಷ ವಾಹನ ಗುಜರಿಯಾದರೆ ವಾಹನೋದ್ಯಮಕ್ಕೆ ಉತ್ತೇಜನ: ಐಸಿಆರ್​ಎ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.