ETV Bharat / business

ಮಹಾರಾಷ್ಟ್ರ: ಲಡ್ಕಿ ಬಹಿನ್ ಮೊತ್ತ 3,000ಕ್ಕೆ ಏರಿಕೆ - ಬೊಕ್ಕಸಕ್ಕೆ 4.6 ಲಕ್ಷ ಕೋಟಿ ಹೆಚ್ಚುವರಿ ಹೊರೆ - Ladki Bahin Scheme

ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಲಡ್ಕಿ ಬಹಿನ್ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ನೀಡಲಾಗುವ ಮೊತ್ತವನ್ನು ದುಪ್ಪಟ್ಟು ಮಾಡುವುದಾಗಿ ಸಿಎಂ ಶಿಂದೆ ಘೋಷಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ (IANS)
author img

By ETV Bharat Karnataka Team

Published : Aug 19, 2024, 7:56 PM IST

ಮುಂಬೈ: ಪ್ರತಿತಿಂಗಳು ಮಹಿಳೆಯರಿಗೆ ನಗದು ಹಣವನ್ನು ವರ್ಗಾಯಿಸುವ ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ನೀಡಲಾಗುವ ಮೊತ್ತವನ್ನು 1500 ರೂಪಾಯಿಗಳಿಂದ 3000 ರೂಪಾಯಿಗಳಿಗೆ ಸರ್ಕಾರ ಹೆಚ್ಚಿಸಿದೆ. ಇದಕ್ಕಾಗಿ ಮುಂದಿನ 5 ವರ್ಷಗಳ ಅವಧಿಗೆ ಸರ್ಕಾರದ ಬೊಕ್ಕಸದ ಮೇಲೆ 4.6 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶನಿವಾರ ಪುಣೆಯಲ್ಲಿ ಲಡ್ಕಿ ಬಹಿನ್ ಯೋಜನೆಯನ್ನು ಔಪಚಾರಿಕವಾಗಿ ಪ್ರಾರಂಭಿಸಿದ ನಂತರ ಮಹಾಯುತಿ ಸರ್ಕಾರ ಆಂತರಿಕವಾಗಿ ಈ ಅಂದಾಜುಗಳನ್ನು ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ಆರ್ಥಿಕ ನೆರವನ್ನು ತಿಂಗಳಿಗೆ 3,000 ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ಶಿಂದೆ ಘೋಷಿಸಿದರು. ಅಲ್ಲದೆ ಈ ಯೋಜನೆಯನ್ನು ಜಾರಿಗೊಳಿಸುವ ರೂಪುರೇಷೆಗಳನ್ನು ತಯಾರಿಸುವಂತೆ ಇಬ್ಬರು ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ (ಪ್ರಸ್ತುತ ಹಣಕಾಸು ಮತ್ತು ಯೋಜನಾ ಸಚಿವ) ಅವರಿಗೆ ಇದೇ ಸಂದರ್ಭದಲ್ಲಿ ಸಿಎಂ ಶಿಂದೆ ಸೂಚಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, 2024-25ರ ವಾರ್ಷಿಕ ಬಜೆಟ್ ಮಂಡಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸುಮಾರು 1 ಲಕ್ಷ ಕೋಟಿ ರೂ.ಗಳ ಲಡ್ಕಿ ಬಹಿನ್ ಯೋಜನೆ ಸೇರಿದಂತೆ ಹಲವಾರು ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು. 2024-25ನೇ ಸಾಲಿಗೆ ಲಡ್ಕಿ ಬಹಿನ್ ಯೋಜನೆಗಾಗಿ 46,000 ಕೋಟಿ ರೂ. ಅನುದಾನ ಮೀಸಲಿಡುವುದಾಗಿ ಅವರು ಘೋಷಿಸಿದರು. ಆದರೆ ಈ ಆರ್ಥಿಕ ನೆರವನ್ನು ತಿಂಗಳಿಗೆ 3,000 ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದರೆ, ಮುಂದಿನ ಐದು ವರ್ಷಗಳವರೆಗೆ ಅದರ ಅನುಷ್ಠಾನಕ್ಕಾಗಿ ಸರ್ಕಾರವು ವಾರ್ಷಿಕವಾಗಿ 92,000 ಕೋಟಿ ರೂ.ಗಳ ಹೊರೆಯನ್ನು ಹೊರಬೇಕಾಗುತ್ತದೆ.

2024-25ರಲ್ಲಿ 1.10 ಲಕ್ಷ ಕೋಟಿ ರೂ.ಗಳ ವಿತ್ತೀಯ ಕೊರತೆ ಮತ್ತು 20,051 ಕೋಟಿ ರೂ.ಗಳ ಆದಾಯ ಕೊರತೆಯ ಪ್ರಸ್ತುತ ಸನ್ನಿವೇಶದಲ್ಲಿ ಸಿಎಂ ಶಿಂಧೆ ಅವರ ಘೋಷಣೆ ಮತ್ತು ನಂತರದ ರಾಜ್ಯ ಸರ್ಕಾರದ ಹೊರೆಯನ್ನು ನೋಡಬೇಕಾಗಿದೆ. ಇದಲ್ಲದೆ, ರಾಜ್ಯದ ಸಾರ್ವಜನಿಕ ಸಾಲವು 2023-24ರಲ್ಲಿ 7.11 ಲಕ್ಷ ಕೋಟಿ ರೂ.ಗಳಿಂದ 2024-25ರಲ್ಲಿ ದಾಖಲೆಯ 7.82 ಲಕ್ಷ ಕೋಟಿ ರೂ.ಗೆ ಏರುವ ನಿರೀಕ್ಷೆಯಿದೆ.

ರಾಜ್ಯ ಸರ್ಕಾರದ ಹೆಚ್ಚುವರಿ ವೆಚ್ಚವು ರಾಜ್ಯದ ಹಣಕಾಸಿನ ಮೇಲೆ ಒತ್ತಡ ಹೇರಲಿದೆ ಮತ್ತು 2024-25ರಲ್ಲಿ ಶೇಕಡಾ 2.6 ಎಂದು ಅಂದಾಜಿಸಲಾದ ವಿತ್ತೀಯ ಕೊರತೆಯು ಒಟ್ಟು ರಾಜ್ಯ ದೇಶೀಯ ಉತ್ಪನ್ನದ ಶೇಕಡಾ 3ರ ಮಿತಿಯನ್ನು ದಾಟುವ ಎಲ್ಲಾ ಸಾಧ್ಯತೆಗಳಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪರಿಷ್ಕೃತ ಅಂದಾಜಿನ ಪ್ರಕಾರ, 2023-24ರಲ್ಲಿ ರಾಜ್ಯದ ವಿತ್ತೀಯ ಕೊರತೆ ಜಿಎಸ್ ಡಿಪಿಯ ಶೇಕಡಾ 2.8 ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ. ಇದು ಬಜೆಟ್ ಅಂದಾಜಿಗಿಂತ (ಶೇ 2.5) ಹೆಚ್ಚಾಗಿದೆ. 2026-27ರ ವೇಳೆಗೆ ವಿತ್ತೀಯ ಕೊರತೆಯನ್ನು ಜಿಎಸ್​ಡಿಪಿಯ ಶೇಕಡಾ 2.3 ಕ್ಕೆ ಇಳಿಸುವ ನಿರೀಕ್ಷೆಯಿದೆ.

ಆದಾಗ್ಯೂ, ವಿತ್ತೀಯ ಕೊರತೆಯನ್ನು ಶೇಕಡಾ 3 ರ ಜಿಎಸ್​ಡಿಪಿ ಮಿತಿಯೊಳಗೆ ಇರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2024-25ರಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯದ 3,35,811 ಕೋಟಿ ರೂ.ಗಳ ಪ್ರಸ್ತಾವಿತ ಅಂದಾಜುಗಳ ಬಗ್ಗೆ ಸರ್ಕಾರ ಸಾಕಷ್ಟು ಭರವಸೆ ಹೊಂದಿದೆ ಎಂದು ಅವರು ಹೇಳಿದರು. ಇದರಲ್ಲಿ 1,55,756 ಕೋಟಿ ರೂ.ಗಳ ಸಂಗ್ರಹದೊಂದಿಗೆ ರಾಜ್ಯವು ಅತಿದೊಡ್ಡ ಜಿಎಸ್​ಟಿ ಸಂಗ್ರಹಿಸುವ ರಾಜ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಧಿಕಾರಿಯ ಪ್ರಕಾರ, 2024-25ರ ಮಹಾರಾಷ್ಟ್ರದ ಜಿಎಸ್​ಡಿಪಿ (ಪ್ರಸ್ತುತ ಬೆಲೆಗಳಲ್ಲಿ) 42,67,771 ಕೋಟಿ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ. ಇದು 2023-24 ರ ಪರಿಷ್ಕೃತ ಅಂದಾಜುಗಳಿಗಿಂತ ಶೇಕಡಾ 5.5 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಜಾಗತಿಕ ಉದ್ಯೋಗ ನೇಮಕಾತಿ ಶೇ 7.3ರಷ್ಟು ಹೆಚ್ಚಳ: ಭಾರತ, ಯುಎಸ್​ ಮುಂಚೂಣಿಯಲ್ಲಿ - Global Job Postings

ETV Bharat Logo

Copyright © 2024 Ushodaya Enterprises Pvt. Ltd., All Rights Reserved.