ETV Bharat / business

ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲಾರಂಭಿಸಿದ KAPS-4 ಪರಮಾಣು ವಿದ್ಯುತ್​ ಘಟಕ - Nuclear Power Plant

author img

By PTI

Published : Aug 21, 2024, 4:01 PM IST

ಕಕ್ರಾಪರ್​ನಲ್ಲಿನ ಎರಡನೇ 700 ಮೆಗಾವ್ಯಾಟ್​ ಸಾಮರ್ಥ್ಯದ ರಿಯಾಕ್ಟರ್​ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲಾರಂಭಿಸಿದೆ.

KAPS-4 ಪರಮಾಣು ವಿದ್ಯುತ್​ ಘಟಕ
KAPS-4 ಪರಮಾಣು ವಿದ್ಯುತ್​ ಘಟಕ (IANS)

ನವದೆಹಲಿ: ಗುಜರಾತಿನ ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರದಲ್ಲಿನ (ಕೆಎಪಿಎಸ್), ಭಾರತದಲ್ಲಿಯೇ ತಯಾರಾದ ಎರಡನೇ 700 ಮೆಗಾವ್ಯಾಟ್ ಪರಮಾಣು ವಿದ್ಯುತ್ ರಿಯಾಕ್ಟರ್ ಬುಧವಾರ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲಾರಂಭಿಸಿದೆ ಎಂದು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.

ಕೆಎಪಿಎಸ್​ನ 4ನೇ ಘಟಕವು 700 ಮೆಗಾವ್ಯಾಟ್​ನಷ್ಟು ಪೂರ್ಣ ಪ್ರಮಾಣದ ವಿದ್ಯುತ್​ ಉತ್ಪಾದನೆಯನ್ನು ಆರಂಭಿಸುವ ಮೊದಲು ಶೇಕಡಾ 90 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್​ಪಿಸಿಐಎಲ್ ತಿಳಿಸಿದೆ.

ಕೆಎಪಿಎಸ್ -3 ರ ಅವಳಿ ಘಟಕಗಳು ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿದ ನಂತರ ಈಗ ಕೆಎಪಿಎಸ್ -4ನೇ ಘಟಕ ಕೂಡ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲಾರಂಭಿಸಿರುವುದು ದೇಶೀಯ 700 ಮೆಗಾವ್ಯಾಟ್ ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ (ಪಿಎಚ್​ಡಬ್ಲ್ಯೂಆರ್) ವಿನ್ಯಾಸದ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಎನ್​ಪಿಸಿಐಎಲ್ ಹೇಳಿದೆ.

ಕೆಎಪಿಎಸ್ -4ನೇ ಘಟಕವು ಕಳೆದ ವರ್ಷ ಡಿಸೆಂಬರ್ 17 ರಂದು ಮೊದಲ ನಿರ್ಣಾಯಕ ಹಂತವನ್ನು (criticality) ಸಾಧಿಸಿತ್ತು ಮತ್ತು ಮಾರ್ಚ್ 31 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಭಾರತವು ಇದೇ ವಿನ್ಯಾಸದ ಇನ್ನೂ ಹದಿನಾಲ್ಕು 700 ಮೆಗಾವ್ಯಾಟ್ ಪರಮಾಣು ವಿದ್ಯುತ್ ರಿಯಾಕ್ಟರ್ ಗಳನ್ನು ನಿರ್ಮಿಸುತ್ತಿದೆ. ಇವು 2031 ರಿಂದ 32 ರ ವೇಳೆಗೆ ಹಂತ ಹಂತವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಎನ್​ಪಿಸಿಐಎಲ್ ಪ್ರಸ್ತುತ ಒಟ್ಟು 8180 ಮೆಗಾವ್ಯಾಟ್ ಸಾಮರ್ಥ್ಯದ 24 ರಿಯಾಕ್ಟರ್​ಗಳನ್ನು ನಿರ್ವಹಿಸುತ್ತಿದೆ ಮತ್ತು ಇದರ ಒಟ್ಟಾರೆ 6800 ಮೆಗಾವ್ಯಾಟ್ ಸಾಮರ್ಥ್ಯದ ಎಂಟು ಘಟಕಗಳು ನಿರ್ಮಾಣ ಹಂತದಲ್ಲಿವೆ.

ಇದಲ್ಲದೆ, ಒಟ್ಟು 7000 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೂ 10 ರಿಯಾಕ್ಟರ್ ಗಳು ಯೋಜನಾ ಪೂರ್ವ ಹಂತದಲ್ಲಿವೆ. ಇವು ಹಂತಹಂತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇವು 2031 - 32 ರ ವೇಳೆಗೆ ದೇಶದ ಸ್ಥಾಪಿತ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 22,480 ಮೆಗಾವ್ಯಾಟ್​ಗೆ ಹೆಚ್ಚಿಸಲಿವೆ ಎಂದು ಎನ್​ಪಿಸಿಐಎಲ್ ತಿಳಿಸಿದೆ.

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​ಪಿಸಿಐಎಲ್) ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ (ಡಿಎಇ) ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಸೆಪ್ಟೆಂಬರ್ 1987 ರಲ್ಲಿ ಕಂಪನಿಗಳ ಕಾಯ್ದೆ, 1956 ರ ಅಡಿಯಲ್ಲಿ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಇದನ್ನು ನೋಂದಾಯಿಸಲಾಗಿದೆ.

ಇದನ್ನೂ ಓದಿ : ಹೊಸೂರಿನ ಟಾಟಾ ಐಫೋನ್​ ಕಾರ್ಖಾನೆ 2024ರ ವರ್ಷಾಂತ್ಯಕ್ಕೆ ಆರಂಭ ಸಾಧ್ಯತೆ: 50 ಸಾವಿರ ಜನರಿಗೆ ಉದ್ಯೋಗ - Hosur Tata iPhone Factory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.