ETV Bharat / business

ಎಲೆಕ್ಟ್ರಾನಿಕ್ಸ್​ ಉದ್ಯಮದಲ್ಲಿ ಉದ್ಯೋಗ ನೇಮಕಾತಿ ಶೇ 154ರಷ್ಟು ಹೆಚ್ಚಳ: ಅಧ್ಯಯನ ವರದಿ - Indian Electronics Industry

author img

By ETV Bharat Karnataka Team

Published : Apr 18, 2024, 4:18 PM IST

ಭಾರತದ ಎಲೆಕ್ಟ್ರಾನಿಕ್ಸ್​ ಉದ್ಯಮದಲ್ಲಿನ ಉದ್ಯೋಗ ನೇಮಕಾತಿಯು ಶೇ 154ರಷ್ಟು ಹೆಚ್ಚಳವಾಗಿದೆ.

Indian electronics industry
Indian electronics industry

ನವದೆಹಲಿ: ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮವು ಕಳೆದ ಹಣಕಾಸು ವರ್ಷದಲ್ಲಿ (ಮಾರ್ಚ್ 2023ರಿಂದ ಈ ವರ್ಷದ ಮಾರ್ಚ್‌ವರೆಗೆ) ಉದ್ಯೋಗ ನೇಮಕಾತಿ ಮತ್ತು ಕೌಶಲ್ಯ ವೃದ್ಧಿಯಲ್ಲಿ ಶೇಕಡಾ 154ರಷ್ಟು ಭಾರಿ ಬೆಳವಣಿಗೆಯನ್ನು ಕಂಡಿದೆ ಮತ್ತು ಟೆಲಿಕಾಂ ವಲಯವು ಮುಖ್ಯವಾಗಿ ಉದ್ಯಮದ ಬೆಳವಣಿಗೆಗೆ ಕಾರಣವಾಗಿದೆ ಎಂದು ವರದಿಯೊಂದು ಗುರುವಾರ ತೋರಿಸಿದೆ.

ಟೆಲಿಕಾಂ ವಲಯದಲ್ಲಿ ಶೇಕಡಾ 64 ರಷ್ಟು ಉದ್ಯೋಗ ನೇಮಕಾತಿಗಳು ನಡೆದಿದ್ದು, ನಂತರದ ಸ್ಥಾನದಲ್ಲಿ ಲೈಟಿಂಗ್ ಮತ್ತು ಆಟೋಮೋಟಿವ್ ಕ್ಷೇತ್ರಗಳಿವೆ ಎಂದು ಮಾನವ ಸಂಪನ್ಮೂಲ ಪೂರೈಕೆದಾರ ಕಂಪನಿ ಕ್ವೆಸ್ ಕಾರ್ಪ್ ಲಿಮಿಟೆಡ್ ನಡೆಸಿದ ಸಂಶೋಧನೆ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ವಿವಿಧ ಹುದ್ದೆಗಳಿಗೆ ವಿಶೇಷವಾಗಿ ಉತ್ಪಾದನಾ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳ ನೇಮಕವಾಗಿದೆ.

ಯಾರ ಪಾಲು ಎಷ್ಟು?: ಆಪರೇಟರ್​ಗಳು, ಕ್ವಾಲಿಟಿ ನಿಯಂತ್ರಣ ಮತ್ತು ಟೆಸ್ಟಿಂಗ್​​ ಹುದ್ದೆಗಳಿಗೆ ಹೆಚ್ಚಾಗಿ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಉದ್ಯಮದಲ್ಲಿ ಒಟ್ಟಾರೆ ಮಹಿಳಾ ಉದ್ಯೋಗಿಗಳ ಪಾಲು ಶೇ 78ರಷ್ಟಿದೆ. ಭೌಗೋಳಿಕವಾಗಿ ನೋಡುವುದಾದರೆ- ಎಲೆಕ್ಟ್ರಾನಿಕ್ಸ್ ವಲಯದ ನೇಮಕಾತಿಯಲ್ಲಿ ತಮಿಳುನಾಡು ಶೇಕಡಾ 33 ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದರೆ ಕರ್ನಾಟಕ, ಉತ್ತರ ಪ್ರದೇಶ ಮತ್ತು ತೆಲಂಗಾಣ ನಂತರದ ಸ್ಥಾನಗಳಲ್ಲಿವೆ.

"ಭಾರತೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ಆವಿಷ್ಕಾರಗಳು ಮತ್ತು ಪರಿವರ್ತನೆಯ ಕಾರಣಗಳಿಂದ ಅಭಿವೃದ್ಧಿಯ ಪಥದಲ್ಲಿದೆ. 2025-2026 ರ ವೇಳೆಗೆ 1 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಉದ್ಯಮ ತಜ್ಞರು ಊಹಿಸಿದ್ದಾರೆ ಮತ್ತು ಮಾರುಕಟ್ಟೆ ಗಾತ್ರವು 2025 ರ ವೇಳೆಗೆ 400 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ" ಎಂದು ಕ್ವೆಸ್ ಕಾರ್ಪ್​ನ ವರ್ಕ್​ ಫೋರ್ಸ್ ಮ್ಯಾನೇಜ್​​ಮೆಂಟ್ ಅಧ್ಯಕ್ಷ ಲೋಹಿತ್ ಭಾಟಿಯಾ ಹೇಳಿದ್ದಾರೆ.

ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯಿಂದ ಮಾತ್ರವಲ್ಲದೆ ಸರ್ಕಾರದ ಉಪಕ್ರಮಗಳಾದ 'ಮೇಕ್ ಇನ್ ಇಂಡಿಯಾ' ಮತ್ತು ಉತ್ಪಾದನಾ-ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗಳು ಎಲೆಕ್ಟ್ರಾನಿಕ್ಸ್​ ವಲಯದ ಬೆಳವಣಿಗೆಗೆ ಕಾರಣವಾಗಿವೆ. ಇನ್ನು ಹಲವಾರು ಪೂರಕ ಅಂಶಗಳಿಂದಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತಿದೆ.

ಎಲೆಕ್ಟ್ರಾನಿಕ್ಸ್​ ಉದ್ಯಮದಲ್ಲಿ ಸಂಕೀರ್ಣವಾದ ಸಣ್ಣ ಉಪಕರಣಗಳನ್ನು ಜೋಡಿಸುವುದು ಮುಖ್ಯ ಕೆಲಸವಾಗಿದೆ. ಇಂಥ ಸಣ್ಣ ಭಾಗಗಳ ಜೋಡಣೆಯನ್ನು ನಿಖರವಾಗಿ ನಿರ್ವಹಿಸುವಲ್ಲಿ ಮಹಿಳೆಯರ ಕೌಶಲ್ಯ ಮತ್ತು ಸಣ್ಣ ಸಣ್ಣ ವಿಷಯಗಳಿಗೂ ಗಮನ ನೀಡುವ ಅವರ ಸಾಮರ್ಥ್ಯದ ಕಾರಣದಿಂದ ಮಹಿಳೆಯರನ್ನು ಹೆಚ್ಚಾಗಿ ಈ ಕೆಲಸಗಳಿಗೆ ನೇಮಿಸಿಕೊಳ್ಳಲಾಗುತ್ತಿದೆ.

ಎಲೆಕ್ಟ್ರಾನಿಕ್ ಎಂಜಿನಿಯರ್​ಗಳು, ಇನ್​ಸ್ಟ್ರುಮೆಂಟಲ್ ಎಂಜಿನಿಯರ್​ಗಳು ಮತ್ತು ಎಲೆಕ್ಟ್ರಾನಿಕ್ ಡಿಸೈನ್ ಎಂಜಿನಿಯರ್​ಗಳಂತಹ ಹಲವಾರು ಪ್ರಮುಖ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಪಾತ್ರಗಳಿಗೆ ಹುದ್ದೆಗಳಿಗೆ ತಿಂಗಳಿಗೆ ಸರಾಸರಿ 18,000 ರೂ.ಗಳಿಂದ 32,000 ರೂ.ಗಳವರೆಗೆ ವೇತನ ನೀಡಲಾಗುತ್ತಿದೆ.

ಇದನ್ನೂ ಓದಿ: ರಿಯಲ್​ ಮಿ C65 5G ಭಾರತದಲ್ಲಿ ಶೀಘ್ರ ಬಿಡುಗಡೆ: ಬೆಲೆ ಇಷ್ಟು ಕಡಿಮೆ..! - REALME C65 5G

ETV Bharat Logo

Copyright © 2024 Ushodaya Enterprises Pvt. Ltd., All Rights Reserved.