ಟೋಕಿಯೊ: ಬಡ್ಡಿ ದರ ಏರಿಕೆ ಮಾಡಿದ ಬಳಿಕ ಶೇ 12.4 ರಷ್ಟು ಕುಸಿತ ಕಂಡಿದ್ದ ಜಪಾನ್ನ ಬೆಂಚ್ ಮಾರ್ಕ್ ನಿಕ್ಕಿ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಶೇ 10.5ರಷ್ಟು ಏರಿಕೆ ಕಂಡಿದೆ. ವ್ಯಾಪಾರ ಪ್ರಾರಂಭವಾದ ಸುಮಾರು ಒಂದು ಗಂಟೆಯ ನಂತರ ಸೂಚ್ಯಂಕವು 3,252.22 ಅಂಶಗಳು ಏರುವ ಮೂಲಕ 34,744.97 ಕ್ಕೆ ಹೆಚ್ಚಳ ಕಂಡಿತು. ಟೋಕಿಯೊದಲ್ಲಿ ಸೋಮವಾರದ ಮಹಾಪತನದ ನಂತರ ವಾಲ್ ಸ್ಟ್ರೀಟ್‌ನಲ್ಲಿನ ತೀವ್ರ ನಷ್ಟ ಕಂಡು ಬಂತು. ಇದು ಇಡೀ ವಿಶ್ವದ ಷೇರುಮಾರುಕಟ್ಟೆಗಳ ಮೇಲೆ ಭಾರಿ ಪ್ರಭಾವ ಬೀರಿತು. ನಿಕ್ಕಿ ಈಗ ಒಂದು ವರ್ಷದ ಹಿಂದೆ ಇದ್ದ ಮಟ್ಟದ ಹತ್ತಿರದಲ್ಲಿದೆ.
ವಿಶ್ವದ ಎಲ್ಲ ಮಾರುಕಟ್ಟೆಗಳು ನಿನ್ನೆ ಭಾರಿ ಕುಸಿತ ಕಂಡಿದ್ದವು. ಇಂದು ಜಪಾನ್ನ ನಿಕ್ಕಿ ಶೇ 10.5 ರಷ್ಟು ಚೇತರಿಕೆ ಕಾಣುವ ಮೂಲಕ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೆ, ಅಮೆರಿಕ ಷೇರು ಮಾರುಕಟ್ಟೆಗಳು ಇಂದು ಕೂಡಾ ಕೆಂಪು ಬಣ್ಣದಲ್ಲೇ ವಹಿವಾಟು ಮುಗಿಸಿವೆ.
ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರುಪೇಟೆಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದವು. ನಿಫ್ಟಿ 600ಕ್ಕೂ ಹೆಚ್ಚು ಹಾಗೂ ಬಿಎಸ್ಸಿ 2200ಕ್ಕೂ ಹೆಚ್ಚು ಅಂಕಗಳ ಕುಸಿತ ಕಾಣುವ ಮೂಲಕ ಷೇರುದಾರರಿಗೆ ಸುಮಾರು 16 ಲಕ್ಷ ಕೋಟಿ ರೂಪಾಯಿಯ ದೊಡ್ಡ ಮಟ್ಟದ ನಷ್ಟವನ್ನುಂಟು ಮಾಡಿತ್ತು.
ಈ ನಡುವೆ ಗಿಫ್ಟ್ ನಿಫ್ಟಿ ಇಂದಿನ ವಹಿವಾಟಿನಲ್ಲಿ 156 ಅಂಕಗಳ ಪಾಸಿಟಿವ್ ವಹಿವಾಟು ನಡೆಸುತ್ತಿದ್ದು, ಇದು ಇಂದು ಮಾರುಕಟ್ಟೆಗಳು ಕುಸಿತದಿಂದ ಮೇಲೇಳುವ ಸೂಚನೆಯನ್ನು ನೀಡಿದೆ.
ಇದನ್ನು ಓದಿ: ಷೇರು ಮಾರುಕಟ್ಟೆ ಮಹಾಪತನ: ₹16 ಲಕ್ಷ ಕೋಟಿ ನಷ್ಟ, ಕುಸಿತಕ್ಕೆ 5 ಪ್ರಮುಖ ಕಾರಣಗಳು - Share Market