ETV Bharat / business

21 ಸಾವಿರ ಕೋಟಿ ರೂ.ಗೆ ತಲುಪಿದ ಭಾರತದ ಯುದ್ಧ ಶಸ್ತ್ರಾಸ್ತ್ರ ರಫ್ತು: 10 ವರ್ಷಗಳಲ್ಲಿ 30 ಪಟ್ಟು ಹೆಚ್ಚಳ - India Defence Exports - INDIA DEFENCE EXPORTS

ಭಾರತದ ಯುದ್ಧ ಶಸ್ತ್ರಾಸ್ತ್ರಗಳ ರಫ್ತು ಮೌಲ್ಯ 21 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ.

ಭಾರತ ತಯಾರಿಸಿದ ಯುದ್ಧ ಶಸ್ತ್ರಾಸ್ತ್ರಗಳು
ಭಾರತ ತಯಾರಿಸಿದ ಯುದ್ಧ ಶಸ್ತ್ರಾಸ್ತ್ರಗಳು (IANS)
author img

By ETV Bharat Karnataka Team

Published : Jul 14, 2024, 2:40 PM IST

ನವದೆಹಲಿ : 2013-14ರ ಆರ್ಥಿಕ ವರ್ಷದಲ್ಲಿ ಕೇವಲ 686 ಕೋಟಿ ರೂ.ಗಳಷ್ಟಿದ್ದ ಭಾರತದ ರಕ್ಷಣಾ ಸಾಧನಗಳ ರಫ್ತು ಕಳೆದ 10 ವರ್ಷಗಳಲ್ಲಿ 30 ಪಟ್ಟು ಏರಿಕೆಯಾಗಿದ್ದು, 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 21,083 ಕೋಟಿ ರೂ.ಗೆ ತಲುಪಿದೆ. ಇದು ಭಾರತೀಯ ರಕ್ಷಣಾ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ರಕ್ಷಣಾ ಶಸ್ತ್ರಾಸ್ತ್ರಗಳ ರಫ್ತು ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಾದ್ಯಂತ 85 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸುವುದರೊಂದಿಗೆ, ಭಾರತದ ರಕ್ಷಣಾ ಉದ್ಯಮವು ವಿನ್ಯಾಸ ಮತ್ತು ಅಭಿವೃದ್ಧಿಯ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಪ್ರಸ್ತುತ ಭಾರತದ ಸುಮಾರು 100 ಸಂಸ್ಥೆಗಳು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಸಾಧನಗಳ ರಫ್ತಿಗೆ ಉತ್ತೇಜನ ನೀಡಲು ಸರ್ಕಾರವು ಕಳೆದ 10 ವರ್ಷಗಳಲ್ಲಿ 'ಮೇಕ್ ಇನ್ ಇಂಡಿಯಾ' ನಂತಹ ಹಲವಾರು ನೀತಿ ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಆರ್ಥಿಕ ಸುಧಾರಣೆಗಳನ್ನು ಹೊರತಂದಿದೆ. ರಫ್ತು ಕಾರ್ಯವಿಧಾನಗಳನ್ನು ಸರಳೀಕರಿಸಲಾಗಿದೆ ಮತ್ತು ಎಂಡ್-ಟು-ಎಂಡ್ ಆನ್ ಲೈನ್ ರಫ್ತು ಅಧಿಕಾರದೊಂದಿಗೆ ವಿಳಂಬ ಕಡಿಮೆ ಮಾಡಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಉದ್ಯಮ ಸ್ನೇಹಿಯನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ಇದಲ್ಲದೆ, ಆತ್ಮನಿರ್ಭರ ಭಾರತ್ ಉಪಕ್ರಮಗಳು ದೇಶದಲ್ಲಿ ರಕ್ಷಣಾ ಉಪಕರಣಗಳ ಸ್ಥಳೀಯ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ದೇಶಕ್ಕೆ ಸಹಾಯ ಮಾಡಿವೆ. ಆ ಮೂಲಕ ದೀರ್ಘಾವಧಿಯಲ್ಲಿ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಲಾರ್ಸೆನ್ ಆಂಡ್ ಟೂಬ್ರೊ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಭಾರತ್ ಫೋರ್ಜ್ ನಂತಹ ಕಂಪನಿಗಳು ಪ್ರಮುಖ ಕಂಪನಿಗಳಾಗಿ ಹೊರಹೊಮ್ಮುವುದರೊಂದಿಗೆ ಖಾಸಗಿ ವಲಯವು ರಕ್ಷಣಾ ಉಪಕರಣಗಳ ಅಗ್ರ ಪೂರೈಕೆದಾರನಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

2023-24ರಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ಒಟ್ಟು ಮೌಲ್ಯದಲ್ಲಿ, ಸುಮಾರು 79.2 ಪ್ರತಿಶತದಷ್ಟು ಡಿಪಿಎಸ್​ಯುಗಳು / ಇತರ ಪಿಎಸ್​ಯುಗಳು ಮತ್ತು 20.8 ಶೇಕಡಾ ಖಾಸಗಿ ವಲಯಗಳು ಕೊಡುಗೆ ನೀಡಿವೆ. ಸಂಪೂರ್ಣ ಮೌಲ್ಯದ ದೃಷ್ಟಿಯಿಂದ, ಡಿಪಿಎಸ್​ಯುಗಳು / ಪಿಎಸ್​ಯುಗಳು ಮತ್ತು ಖಾಸಗಿ ವಲಯವು ರಕ್ಷಣಾ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿದೆ.

ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನಲ್ಲಿ ಕ್ಷಿಪಣಿಗಳು, ರಾಡಾರ್​ಗಳು, ನೌಕಾ ವ್ಯವಸ್ಥೆಗಳು, ಹೆಲಿಕಾಪ್ಟರ್​ಗಳು ಮತ್ತು ಕಣ್ಗಾವಲು ಉಪಕರಣಗಳು ಸೇರಿವೆ. ರಫ್ತು ಮಾರುಕಟ್ಟೆಗೆ ಪೂರೈಸಲಾಗುವ ಸುಧಾರಿತ ನೌಕಾ ವ್ಯವಸ್ಥೆಗಳ ದೇಶೀಯ ಉತ್ಪಾದನೆಯಲ್ಲಿ ಭಾರತ ಗಣನೀಯ ಪ್ರಗತಿ ಸಾಧಿಸಿದೆ. ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯಂತಹ ಸುಧಾರಿತ ವಾಹಕಗಳು ಈ ವಿಭಾಗದಲ್ಲಿನ ಸಾಧನೆಯನ್ನು ಎತ್ತಿ ತೋರಿಸುತ್ತವೆ. ವೇಗವಾಗಿ ದಾಳಿ ನಡೆಸುವ ನೌಕಾ ಹಡಗು, ಕಡಲಾಚೆಯ ಗಸ್ತು ಹಡಗುಗಳು ಮತ್ತು ವಿವಿಧ ಕಡಲ ಶಸ್ತ್ರಾಸ್ತ್ರ ವ್ಯವಸ್ಥೆಗಳು ರಫ್ತು ಮಾಡಲಾಗುತ್ತಿರುವ ಇತರ ಉತ್ಪನ್ನಗಳಲ್ಲಿ ಸೇರಿವೆ. ರಷ್ಯಾದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳ ರಫ್ತು ಮತ್ತೊಂದು ಪ್ರಮುಖ ಸಾಧನೆಯಾಗಿದೆ. ಫಿಲಿಪೈನ್ಸ್​ನಂಥ್ ದೇಶಗಳು ಇತ್ತೀಚೆಗೆ ಈ ವ್ಯವಸ್ಥೆಯನ್ನು ಭಾರತದಿಂದ ಖರೀದಿಸಿವೆ.

ಇದನ್ನೂ ಓದಿ : 5.74 ಲಕ್ಷ ಕೋಟಿಗೆ ತಲುಪಿದ ನೇರ ತೆರಿಗೆ ಸಂಗ್ರಹ: ಶೇ 19.5ರಷ್ಟು ಹೆಚ್ಚಳ - Direct tax collections

ETV Bharat Logo

Copyright © 2024 Ushodaya Enterprises Pvt. Ltd., All Rights Reserved.