ETV Bharat / business

ಜಾಗತಿಕ ಪಾಸ್​​ಪೋರ್ಟ್​ ಸೂಚ್ಯಂಕದಲ್ಲಿ ಏರಿಕೆ ಕಂಡ ಭಾರತ; 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶ - Indians visa free entry - INDIANS VISA FREE ENTRY

ಯುಕೆ ಮೂಲಕ ಹೆನ್ಲೆ ಪಾಸ್​ಪೋರ್ಟ್​​ ಸೂಚ್ಯಂಕ ಇತ್ತೀಚಿಗೆ ನೀಡಿದ ರ್ಯಾಂಕಿಂಗ್​ ಪಟ್ಟಿಯಲ್ಲಿ ಭಾರತದ ಪಾಸ್​​ಪೋರ್ಟ್​​ ಸ್ಥಾನ ಸುಧಾರಣೆ ಕಂಡಿದೆ.

Indians visa free entry to 58 countries including popular destinations
ಭಾರತೀಯ ಪಾಸ್​ಪೋರ್ಟ್​​ (ಐಎಎನ್​ಎಸ್​)
author img

By ETV Bharat Karnataka Team

Published : Jul 24, 2024, 3:53 PM IST

ನವದೆಹಲಿ: ಜಾಗತಿಕ ಪಾಸ್​ಪೋರ್ಟ್​ ಸೂಚ್ಯಂಕದಲ್ಲಿ ಭಾರತವೂ 82ನೇ ಸ್ಥಾನದಲ್ಲಿದ್ದು, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ 58 ದೇಶಗಳಿಗೆ ಭಾರತೀಯರು ವೀಸಾ ಮುಕ್ತ ಪ್ರವೇಶವನ್ನು ಮಾಡಬಹುದಾಗಿದೆ.

ಯುಕೆ ಮೂಲಕ ಹೆನ್ಲೆ ಪಾಸ್​ಪೋರ್ಟ್​​ ಸೂಚ್ಯಂಕ ಇತ್ತೀಚಿಗೆ ನೀಡಿದ ರ್ಯಾಂಕಿಂಗ್​ ಪಟ್ಟಿಯಲ್ಲಿ ಭಾರತದ ಪಾಸ್​​ಪೋರ್ಟ್​​ ಸ್ಥಾನ ಸುಧಾರಣೆ ಕಂಡಿದೆ. ಈ ರ್ಯಾಂಕಿಂಗ್​ ಅನ್ನು ಇಂಟರ್​ನ್ಯಾಷನಲ್​ ಏರ್​​ ಟ್ರಾನ್ಸ್​ಪೋರ್ಟ್​​ ಅಸೋಸಿಯೇಷನ್​ (ಐಎಟಿಎ) ದತ್ತಾಂಶದ ಆಧಾರದ ಮೇಲೆ ನೀಡಲಾಗುತ್ತದೆ.

ಹೆನ್ಲೆ ಪಾಸ್​ಪೋರ್ಟ್​ ಸೂಚ್ಯಂಕವು ದೇಶಗಳ ಜಾಗತಿಕ ರ್ಯಾಂಕಿಂಗ್​ ಆಗಿದೆ. ಇದು ಆ ದೇಶಗಳ ನಾಗರಿಕರಿಗೆ ಸಾಮಾನ್ಯ ಪಾಸ್​ಪೋರ್ಟ್​​ ಮೂಲಕ ಸಂಚರಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ.

ಈ ಪಾಸ್​ಪೋರ್ಟ್​​ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿ ಸಿಂಗಾಪೂರ್​ ಇದೆ. ಇತ್ತೀಚಿನ ಸ್ಥಾನಗಳ ಪಟ್ಟಿಯಲ್ಲಿ ವಿಶ್ವದ ಶಕ್ತಿಯುತ ಪಾಸ್​ಪೋರ್ಟ್​​ ಟೈಟಲ್​ ಅನ್ನು ಇದು ಪಡೆದಿದೆ. ನಗರ-ರಾಜ್ಯಗಳು ಕೂಡ ಹೊಸ ದಾಖಲೆಯನ್ನು ಇದರಲ್ಲಿ ಸ್ಕೋರ್​ ಮಾಡಿದೆ. ಇದರಿಂದಾಗಿ 227 ವಿಶ್ವದ ವೀಸಾ ಮುಕ್ತ ಸ್ಥಳಗಳಲ್ಲಿ 195 ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಫ್ರಾನ್ಸ್​​, ಜಪಾನ್​ ಮತ್ತು ಸ್ಪೇನ್​​ ಇದರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದು. ಇವೆರಡು 192 ತಾಣಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಹೊಂದಿವೆ.

ಆಸ್ಟ್ರೀಯಾ, ಫಿನ್ಲೆಂಡ್​, ಐರ್ಲೆಂಡ್​, ಲಕ್ಸೆಂಬರ್ಗ್​​, ನೆದರ್​​ಲ್ಯಾಂಡ್​ ಮತ್ತು ದಕ್ಷಿಣ ಕೊರಿಯಾ, ಸ್ವೀಡನ್​ ಸೇರಿದಂತೆ 191 ಪೂರ್ವ ವೀಸಾ ಇಲ್ಲದೆ ಪ್ರವೇಶ ಹೊಂದಿರುವ ಏಳು ರಾಷ್ಟ್ರಗಳ ಸಮೂಹವು ಈ ಸೂಚ್ಯಂಕದಲ್ಲಿ 3ನೇ ಸ್ಥಾನದಲ್ಲಿದೆ.

ವೀಸಾ ಮುಕ್ತ ಸ್ಕೋರ್​ನಲ್ಲಿ 190ನೇ ಸ್ಥಾನಕ್ಕೆ ಯುಕೆ ಕುಸಿದಿದ್ದರೂ, ಬೆಲ್ಜಿಯಂ, ಡೆನ್ಮಾರ್ಕ್​, ನ್ಯೂಜಿಲೆಂಡ್​​, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್​​ ನಾಲ್ಕು ಸ್ಥಳಗಳಿಗೆ ವೀಸಾ ಮುಕ್ತ ಸಂಚಾರ ಮಾಡಬಹುದಾಗಿದೆ.

ಮತ್ತೊಂದೆಡೆ ಅಮೆರಿಕ ಕಳೆದ ದಶಕದಲ್ಲೇ ಈ ಸೂಚ್ಯಂಕದಿಂದ ಕೆಳಗೆ ಇಳಿದಿದ್ದು, ಇದು 8ನೇ ಸ್ಥಾನಕ್ಕೆ ಕುಸಿದಿದೆ. ಇದು 186 ದೇಶಗಳಿಗೆ ವೀಸಾ ಇಲ್ಲದೆ ಸಂಚರಿಸುವ ಅವಕಾಶವನ್ನು ಹೊಂದಿದೆ.

ಐಎಟಿಎ ಪ್ರಕಾರ, 2024ರಲ್ಲಿ ಏರ್​ಲೈನ್ 39 ಮಿಲಿಯನ್​ ವಿಮಾನಗಳು 22 ಸಾವಿರ ಮಾರ್ಗಗಳಲ್ಲಿ 5 ಬಿಲಿಯನ್​ ಜನರನ್ನು ವಿಮಾನಸಂಸ್ಥೆಗಳು ಸಂಪರ್ಕಿಸಿವೆ. ವಿಮಾನ ಕಾರ್ಗೊ ಸೇವೆಗಳು 62 ಮಿಲಿಯನ್​ ಟನ್​ ಆಗಿದ್ದು, ಇದು 8.3 ಟ್ರಿಲಿಯನ್​ ಡಾಲರ್​ ವಹಿವಾಟನ್ನು ಹೊಂದಿದೆ.

ನಮ್ಮ ಉದ್ಯಮ ಈ ವರ್ಷ 1 ಟ್ರಿಲಿಯನ್​ ಡಾಲರ್​​ ಆದಾಯವನ್ನು ದಾಖಲಿಸುವ ನಿರೀಕ್ಷೆ ಇದೆ ಎಂದು ಐಎಟಿಎ ಡೈರೆಕ್ಟರ್​ ಜನರಲ್​ ವಿಲ್ಲಿ ವಾಲ್ಕ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಆದಾಯ ತೆರಿಗೆ ದಿನ: ರಾಷ್ಟ್ರ ನಿರ್ಮಾಣಕ್ಕೆ ಸಕಾಲಿಕ ತೆರಿಗೆ ಪಾವತಿ ಅವಶ್ಯಕ.. ಇಲ್ಲಿದೆ ತೆರಿಗೆಯ ಒಳ - ಹೊರಗಿನ ಸಂಪೂರ್ಣ ಮಾಹಿತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.