ನವದೆಹಲಿ: ಹವಾಮಾನ ಬದಲಾವಣೆಯ ನಕಾರಾತ್ಮಕ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿ ಅಳವಡಿಕೆಗೆ ಭಾರತ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ನಡೆಸಿದೆ. ಅದರಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಒಂದಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 1.8 ಗಿಗಾವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಿದ್ದು, ಕಳೆದ ಅಂಕಿ- ಅಂಶಗಳಿಗೆ ಹೋಲಿಕೆ ಮಾಡಿದಾಗ ದುಪ್ಪಟ್ಟು ಏರಿಕೆ ಕಂಡಿದೆ.
ಈ ಕುರಿತು ಅಮೆರಿಕ ಮೂಲದ ಸಂಶೋಧಕ ಘಟಕ ಮೆರ್ಕೊಮ್ ಕಾಪಿಟಲ್ ವರದಿ ಮಾಡಿದೆ. ಈ ಸಂಸ್ಥೆ ಪ್ರಕಾರ, 2023ರ ನಾಲ್ಕನೇ ತ್ರೈಮಾಸಿಕದಲ್ಲಿ 909.3 ಮೆಗಾವ್ಯಾಟ್ನಿಂದ ಸೋಲಾರ್ ಪ್ಯಾನಲ್ ಅಳವಡಿಕೆಯಲ್ಲಿ ದುಪ್ಪಟ್ಟು ಏರಿಕೆ ಕಂಡಿದೆ.
ತೆರೆದ ಪ್ರದೇಶದ ಸೋಲಾರ್ ಅಳವಡಿಕೆ ಎಂಬುದು ಗ್ರಾಹಕರಿಗೆ ಹಸಿರು ಶಕ್ತಿ ಪೂರೈಕೆಗಾಗಿ ತೆರೆದ ಪ್ರದೇಶಲ್ಲಿ ಸೋಲಾರ್ ಪವರ್ ಘಟಕ ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುವುದು. ತೆರೆದ ಪ್ರವೇಶದ ಸೋಲಾರ್ ಯೋಜನೆ ಉದ್ಯಮಕ್ಕೆ ಅವಕಾಶ ನೀಡುತ್ತದೆ. ಜೊತೆಗೆ ಗ್ರಾಹಕರು ತಮ್ಮ ಪ್ರದೇಶದಲ್ಲಿ ಸೌರ ಯೋಜನೆ ಮೂಲಕ ನವೀಕರಿಸಬಹುದಾದ ಶಕ್ತಿಯನ್ನು ಪಡೆಯಬಹುದಾಗಿದೆ.
ಮಾರ್ಚ್ವರೆಗೆ ಈ ಸೋಲಾರ್ ಯೋಜನೆಯ ಸಾಮರ್ಥ್ಯವು 14.3 ಗಿಗಾ ವ್ಯಾಟ್ ಇದೆ ಎಂದು ವರದಿ ತಿಳಿಸಿದೆ. 'ಮರ್ಕಾಮ್ ಇಂಡಿಯಾ ಸೋಲಾರ್ ಓಪನ್ ಆಕ್ಸೆಸ್ ಮಾರ್ಕೆಟ್' ಎಂಬ ಶೀರ್ಷಿಕೆ ಅಡಿ ಈ ವರದಿ ಪ್ರಕಟಿಸಲಾಗಿದೆ.
ಮೆರ್ಕಾಮ್ ಇಂಡಿಯಾದಲ್ಲಿನ ನಿರ್ವಹಣಾ ನಿರ್ದೇಶಕರಾದ ಪ್ರಿಯಾ ಸಂಜಯ್, ಹಸಿರು ಶಕ್ತಿ ಮುಕ್ತ ಲಭ್ಯತೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಸೌರ ಯೋಜನೆ ಮುಂಚೂಣಿಯಲ್ಲಿದೆ. ಹಣಕಾಸಿನ ಉಳಿತಾಯ ಮತ್ತು ಉಪಕ್ರಮಗಳು ಈ ನವೀಕರಣ ಶಕ್ತಿ ಅಳವಡಿಕೆಯಲ್ಲಿ ಪ್ರಮುಖವಾಗಿವೆ. ಭಾರತದ ಪಳೆಯುಳಿಕೇತರ ಇಂಧನದ ಗುರಿ ಸಾಧಿಸುವಲ್ಲಿ ಇದು ಸಹಾಯ ಮಾಡಲಿದೆ.
ಈ ಮುಕ್ತ ಸೋಲಾರ್ ಯೋಜನೆಯಲ್ಲಿ ರಾಜಸ್ಥಾನ ಪ್ರಥಮ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ ಎಂದು ತ್ರೈಮಾಸಿಕ ವರದಿಯಲ್ಲಿ ತಿಳಿಸಿದೆ.
ಭಾರತ 2030ರ 500 ಗಿಗಾ ವ್ಯಾಟ್ ಪಳೆಯುಳಿಕೆ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಗುರಿ ಮುಟ್ಟುವ ಪ್ರಯತ್ನ ನಡೆಸಿದೆ. ಶಕ್ತಿಯ ಅಳವಡಿಕೆ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಪವನ ಶಕ್ತಿಯಲ್ಲಿ ನಾಲ್ಕನೇ ಸ್ಥಾನವನ್ನು ಭಾರತ ಹೊಂದಿದ್ದರೆ, ಸೌರ ಶಕ್ತಿ ಸಾಮರ್ಥ್ಯದಲ್ಲಿ 5ನೇ ಸ್ಥಾನದಲ್ಲಿದೆ. (ಐಎಎನ್ಎಸ್)
ಇದನ್ನೂ ಓದಿ: ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳಲು ರೈತರಿಗೆ ಶೇ.80ರಷ್ಟು ಸಬ್ಸಿಡಿ: ಆ್ಯಪ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ