ETV Bharat / business

ನೀವು ನಿಮ್ಮ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು: ಆದಾಯ ತೆರಿಗೆ ನಿಯಮ ಏನು ಹೇಳುತ್ತೆ? - Gold Storage Limit In India

How Much Gold Can You Keep At Home: ಭಾರತೀಯರು ಚಿನ್ನ ಎಂದರೆ ಅತಿ ಹೆಚ್ಚು ಇಷ್ಟಪಡುತ್ತಾರೆ. ನೀವು ಮನೆಯಲ್ಲಿ ಎಷ್ಟು ಚಿನ್ನವನ್ನು ಇಡಬಹುದು. ತೆರಿಗೆ ಮುಕ್ತವಾಗಿ ನಾವು ನಮ್ಮ ಮನೆಯಲ್ಲಿ ಎಷ್ಟು ಚಿನ್ನವನ್ನು ಸಂಗ್ರಹಿಸಬಹುದು? ಆದಾಯ ತೆರಿಗೆ ಇಲಾಖೆ ನಿಯಮ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

Tax On Physical Gold  Gold Storage Limit In India  income tax rules  Gold
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jun 17, 2024, 8:08 AM IST

How Much Gold Can You Keep At Home: ಚಿನ್ನವು ಅತ್ಯಂತ ಜನಪ್ರಿಯ ಲೋಹಗಳಲ್ಲಿ ಒಂದಾಗಿದೆ. ಚಿನ್ನವನ್ನು ಆಭರಣಗಳ ಮೂಲಕ ಬಳಸಲಾಗುತ್ತದೆ. ಜೊತೆಗೆ ಹೂಡಿಕೆಯಾಗಿಯೂ ಬಳಸಲಾಗುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಬುಹತೇಕ ಎಲ್ಲ ಭಾರತೀಯರಿಗೂ ಚಿನ್ನ ಅಂದ್ರ ಅಚ್ಚಮೆಚ್ಚು. ಅದರಲ್ಲೂ ಹುಡುಗಿಯರಿಗೆ ಚಿನ್ನ ಅಂದ್ರೆ ತುಂಬಾ ಪ್ರೀತಿ. ಅಕ್ಷಯ ತೃತೀಯದಂತಹ ಹಬ್ಬಗಳಿಂದ ಹಿಡಿದು ಮದುವೆಗಳವರೆಗೆ ಯಾವುದೇ ಸಂದರ್ಭದಲ್ಲಿ ಬಂಗಾರಕ್ಕೆ ಭಾರಿ ಬೇಡಿಕೆ ಇರುತ್ತದೆ. ಆದರೆ, ನಮ್ಮ ಮನೆಯಲ್ಲಿ ಸಂಗ್ರಹಿಸಬಹುದಾದ ಗರಿಷ್ಠ ಪ್ರಮಾಣದ ಚಿನ್ನ ಎಷ್ಟು? ಆದಾಯ ತೆರಿಗೆ ಇಲಾಖೆ ನಿಯಮ ಏನು ಹೇಳುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ಭಾರತದಲ್ಲಿ ಚಿನ್ನದ ಶೇಖರಣಾ ಮಿತಿ: ಸಾಮಾನ್ಯವಾಗಿ ನಾವು ನಮ್ಮ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು. ಆದರೆ, ಆದಾಯ ತೆರಿಗೆ ಇಲಾಖೆಯು ಆಭರಣ ಖರೀದಿಸಲು ಅಥವಾ ಚಿನ್ನದ ಹೂಡಿಕೆಗಳನ್ನು ಮಾಡಲು ನೀವು ಹೇಗೆ ಆದಾಯವನ್ನು ಗಳಿಸಿದ್ದೀರಿ ಎಂಬುದನ್ನು ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ, ಆದಾಯ ತೆರಿಗೆ ಇಲಾಖೆ ಸಂಬಂಧಪಟ್ಟವರಿಗೆ ತೆರಿಗೆ ವಿಧಿಸುತ್ತದೆ.

ತೆರಿಗೆ ಕಟ್ಟದೇ ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು?: ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಾರ, ವಿವಾಹಿತ ಮಹಿಳೆಯರು 500 ಗ್ರಾಂ ಮತ್ತು ಅವಿವಾಹಿತ ಹುಡುಗಿಯರು 250 ಗ್ರಾಂ ಇಟ್ಟುಕೊಳ್ಳಬಹುದು. ಅದೇ ಪುರುಷರ ವಿಷಯಕ್ಕೆ ಬಂದರೆ, ಅವರು ವಿವಾಹವಾಗಲಿ ಅಥವಾ ಇಲ್ಲದಿರಲಿ ಯಾವುದೇ ಸಾಕ್ಷ್ಯವನ್ನು ತೋರಿಸದೇ 100 ಗ್ರಾಂ ಚಿನ್ನವನ್ನು ಸಂಗ್ರಹಿಸಬಹುದು.

ಚಿನ್ನದ ಹೂಡಿಕೆಗೆ ಎಷ್ಟು ತೆರಿಗೆ ಪಾವತಿಸಬೇಕು?: ಚಿನ್ನವನ್ನು ಎರಡು ರೀತಿಯಲ್ಲಿ ಖರೀದಿಸಲಾಗುತ್ತದೆ, ವೈಯಕ್ತಿಕ ಬಳಕೆಗಾಗಿ ಮತ್ತು ಹೂಡಿಕೆಗಾಗಿ. ಆದರೆ, ಚಿನ್ನದ ಖರೀದಿ ಮೇಲೆ ನೇರ ತೆರಿಗೆ ಇರುವುದಿಲ್ಲ. ಚಿನ್ನದ ಮೇಲೆ ಪರೋಕ್ಷ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಚಿನ್ನದ ಬಿಸ್ಕತ್, ನಾಣ್ಯಗಳು ಮತ್ತು ಆಭರಣಗಳ ಖರೀದಿಗೆ ಶೇಕಡಾ 3 ರವರೆಗೆ GST ಪಾವತಿಸಬೇಕಾಗುತ್ತದೆ. ಅದೇ ತಯಾರಿಕೆ ಮತ್ತು ಕಮಿಷನ್ ಶುಲ್ಕದಲ್ಲಿ ಶೇಕಡಾ 5 ರವರೆಗೆ GST ಪಾವತಿಸಬೇಕಾಗುತ್ತದೆ.

ನೀವು ವಿದೇಶದಿಂದ ಚಿನ್ನವನ್ನು ಆಮದು ಮಾಡಿಕೊಂಡರೆ, ಕಸ್ಟಮ್ಸ್ ಸುಂಕ, ಕೃಷಿ ಮೂಲಸೌಕರ್ಯ, ಅಭಿವೃದ್ಧಿ ಸೆಸ್ ಮತ್ತು ಜಿಎಸ್‌ಟಿ ರೂಪದಲ್ಲಿ ಹೆಚ್ಚು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಚಿನ್ನದ ಬಗ್ಗೆ ಮಾಹಿತಿಯನ್ನು ತೋರಿಸಬೇಕು. ತೆರಿಗೆದಾರರ ಆದಾಯವು ₹50 ಲಕ್ಷಕ್ಕಿಂತ ಹೆಚ್ಚಿದ್ದರೆ, ಅವರು ಐಟಿಆರ್‌ನಲ್ಲಿ ದೇಶೀಯ ಆಸ್ತಿಗಳ ಅಡಿಯಲ್ಲಿ ಚಿನ್ನದ ಹಿಡುವಳಿಗಳ ವಿವರಗಳನ್ನು ತೋರಿಸಬೇಕು.

ಚಿನ್ನ ಮಾರಾಟಕ್ಕೆ ತೆರಿಗೆ ಇದೆಯೇ?: ಹಿಡುವಳಿ ಅವಧಿಯ ನಂತರ ಚಿನ್ನದ (ಭೌತಿಕ ಚಿನ್ನದ) ಮಾರಾಟದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಚಿನ್ನವನ್ನು ಖರೀದಿಸಿದ 3 ವರ್ಷಗಳೊಳಗೆ ಮಾರಾಟ ಮಾಡಿದರೆ, ಅಲ್ಪಾವಧಿಯ ಬಂಡವಾಳ ಲಾಭದ ಅಡಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮೂರು ವರ್ಷಗಳ ನಂತರ ಗಟ್ಟಿ ಚಿನ್ನವನ್ನು ಮಾರಾಟ ಮಾಡಿದರೆ, ದೀರ್ಘಾವಧಿಯ ಬಂಡವಾಳ ಲಾಭದ ಅಡಿ ಸೂಚ್ಯಂಕದ ಲಾಭದೊಂದಿಗೆ 20 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಡಿಜಿಟಲ್ ಚಿನ್ನದ ಮೇಲಿನ ತೆರಿಗೆ?: ಡಿಜಿಟಲ್ ಚಿನ್ನದ ಮೇಲೆ ವಿವಿಧ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದರೆ, ಅಲ್ಪಾವಧಿಯ ಲಾಭದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಡಿಜಿಟಲ್ ಚಿನ್ನವನ್ನು 3 ವರ್ಷಗಳ ನಂತರ ಮಾರಾಟ ಮಾಡಿದರೆ, ದೀರ್ಘಾವಧಿಯ ಬಂಡವಾಳ ಲಾಭದ ಅಡಿಯಲ್ಲಿ ಸೂಚ್ಯಂಕದ ಪ್ರಯೋಜನದೊಂದಿಗೆ 20 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತದೆ.

ಏನಿದು ಸಾವರಿನ್ ಗೋಲ್ಡ್ ಬಾಂಡ್ಸ್​?: ನಷ್ಟದ ಭಯವಿಲ್ಲದೆ ಹೂಡಿಕೆ ಮಾಡಲು ಬಯಸುವವರಿಗೆ ಸಾವರಿನ್ ಗೋಲ್ಡ್ ಬಾಂಡ್‌ಗಳು (ಎಸ್‌ಜಿಬಿ) ಉತ್ತಮ ಆಯ್ಕೆಯಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ.

  • ಗರಿಷ್ಠ ಹೂಡಿಕೆ: ನೀವು ವರ್ಷಕ್ಕೆ ಗರಿಷ್ಠ 4 ಕೆಜಿ ವರೆಗೆ ಚಿನ್ನದಲ್ಲಿ ಹೂಡಿಕೆ ಮಾಡಬಹುದು.
  • ಬಡ್ಡಿ: ಬಡ್ಡಿ ದರವು ವಾರ್ಷಿಕ 2.5 ಪ್ರತಿಶತ. ಆದರೆ, ಇದು ತೆರಿಗೆಗೆ ಒಳಪಡುತ್ತದೆ.
  • ತೆರಿಗೆ ವಿನಾಯಿತಿ: ಮೆಚ್ಯೂರಿಟಿ (8 ವರ್ಷಗಳು) ತನಕ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಮಾರಾಟ ಮಾಡದೇ ಇಟ್ಟುಕೊಳ್ಳುವುದರಿಂದ, ನಿಮ್ಮ ಹೂಡಿಕೆಯ ಮೇಲೆ ನಿಮಗೆ ತೆರಿಗೆ ವಿಧಿಸಲಾಗುವುದಿಲ್ಲ.
  • GST: ಸಾವರಿನ್ ಗೋಲ್ಡ್ ಬಾಂಡ್‌ಗಳ ಮೇಲೆ ಯಾವುದೇ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

ಚಿನ್ನದ ಇಟಿಎಫ್‌ಗಳು ಮತ್ತು ಮ್ಯೂಚುಯಲ್ ಫಂಡ್‌ಗಳು: ಆದಾಯ ತೆರಿಗೆ ಇಲಾಖೆಯು ಚಿನ್ನದ ಇಟಿಎಫ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಭೌತಿಕ ಚಿನ್ನ ಎಂದು ಪರಿಗಣಿಸುತ್ತದೆ. ಆದ್ದರಿಂದ ಇವುಗಳನ್ನು 3 ವರ್ಷಗಳ ನಂತರ ಮಾರಾಟ ಮಾಡಿದರೆ, ದೀರ್ಘಾವಧಿಯ ಬಂಡವಾಳ ಲಾಭದ ಅಡಿಯಲ್ಲಿ 20 ಪ್ರತಿಶತದವರೆಗೆ ತೆರಿಗೆ ವಿಧಿಸಲಾಗುತ್ತದೆ.

ಇದನ್ನೂ ಓದಿ: ​​PF ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಪ್ರಮುಖ ನಿರ್ಧಾರ ಕೈಗೊಂಡ EPFO, ಏನದು ಗೊತ್ತಾ? - EPFO Advance Facility

ETV Bharat Logo

Copyright © 2024 Ushodaya Enterprises Pvt. Ltd., All Rights Reserved.