ಬೆಂಗಳೂರು/ಮುಂಬೈ: ಷೇರು ಮಾರುಕಟ್ಟೆಯಲ್ಲಿನ ತಲ್ಲಣ, ಜಾಗತಿಕ ವಿದ್ಯಮಾನಗಳು, ಏರುತ್ತಿರುವ ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಬಂಗಾರ ಜನಸಾಮಾನ್ಯರ ಕೈಗೆಟುಕದಂತೆ ಮೇಲೆ ಹೋಗುತ್ತಿದೆ.
ಈ ಎಲ್ಲ ಮಾತುಗಳ ನಡುವೆ ಇಂದು ಚಿನ್ನ ಪ್ರಿಯರು ನಿಟ್ಟುಸಿರು ಬಿಡುವ ಸುದ್ದಿ ಬಂದಿದೆ. ಒಂದು ತೊಲಾ ಬಂಗಾರದ ಬೆಲೆಯಲ್ಲಿ ಸುಮಾರು 400 ರೂ. ಕಡಿಮೆ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಆಭರಣ ಚಿನ್ನಕ್ಕೆ 10 ಗ್ರಾಂಗೆ 66,750 ರೂ ಇದೆ. ಇದೇ ಬಂಗಾರದ ಬೆಲೆ ನಿನ್ನೆ ₹ 67,150 ಇತ್ತು.
ಇನ್ನು ಅಪರಂಜಿ ಚಿನ್ನ ಅಂದರೆ 24 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ ಇಂದು 72,820 ರೂ. ದರ ನಿಗದಿಯಾಗಿದೆ. ಇದೇ ನಿನ್ನೆ ₹ 73,250 ರೂಗೆ ಮಾರಾಟವಾಗಿತ್ತು. ಇಂದು 430 ರೂಪಾಯಿ ಬೆಲೆ ಕಡಿಮೆಯಾಗುವ ಮೂಲಕ ಆಭರಣ ಪ್ರಿಯರ ಖುಷಿಗೆ ಕಾರಣವಾಗಿದೆ.
ಇನ್ನು ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ಸ್ಟ್ಯಾಂಡರ್ಡ್ ಚಿನ್ನ (99.5) 71913 ರೂ ಹಾಗೂ ಶುದ್ಧ ಚಿನ್ನ (99.9) 72,202 ರೂನಲ್ಲಿ ವ್ಯವಹಾರ ನಡೆಸಿದವು. ಇನ್ನು ಪ್ರತಿ ಕೆಜಿ ಬೆಳ್ಳಿ 84,080 ರೂ.ನಂತೆ ವ್ಯವಹಾರ ನಡೆಸಿತು.