Gold Rate Today April 27, 2024 : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ ರೂ.74,451 ಆಗಿದ್ದರೆ, ಶನಿವಾರ ರೂ.168 ಏರಿಕೆಯಾಗಿ ರೂ.74,619 ಆಗಿದೆ. ಶುಕ್ರವಾರ ಪ್ರತಿ ಕೆ.ಜಿ ಬೆಳ್ಳಿಯ ಬೆಲೆ ರೂ.83,585 ರಷ್ಟಿದ್ದರೆ, ಶನಿವಾರದ ವೇಳೆಗೆ ರೂ.190 ಇಳಿಕೆಯಾಗಿ ರೂ.83,395 ಗೆ ತಲುಪಿತ್ತು.
- ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 72,930 ರೂ. ಆಗಿದ್ರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ 84,000 ರೂ.ವರೆಗೆ ಮಾರಾಟವಾಗುತ್ತಿದೆ.
- ಬೆಳಗಾವಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 72,930 ರೂ. ಆಗಿದ್ರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ 84,000 ರೂ.ಗೆ ಮಾರಾಟವಾಗುತ್ತಿದೆ.
- ದಾವಣಗೆರೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 72,930 ರೂ. ಆಗಿದ್ರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ 84,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿರುವತ್ತವೆ.
ಸ್ಪಾಟ್ ಚಿನ್ನದ ಬೆಲೆ? : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಬಹುತೇಕ ಸ್ಥಿರವಾಗಿದೆ. ಶುಕ್ರವಾರ, ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,333 ಡಾಲರ್‌ಗಳಷ್ಟಿತ್ತು, ಆದರೆ ಶನಿವಾರದ ವೇಳೆಗೆ ಅದು 4 ಡಾಲರ್‌ಗಳಷ್ಟು ಏರಿಕೆಯಾಗಿ 2,337 ಡಾಲರ್‌ಗೆ ತಲುಪಿತು. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 27.25 ಡಾಲರ್ ಆಗಿದೆ.
ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ? : ಕ್ರಿಪ್ಟೋ ಕರೆನ್ಸಿ ವಹಿವಾಟು ಶನಿವಾರದಂದು ನಷ್ಟದಲ್ಲಿ ಮುಂದುವರೆದಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಎಷ್ಟಿವೆ ಅಂದ್ರೆ?
ಕ್ರಿಪ್ಟೋಕರೆನ್ಸಿ | ಪ್ರಸ್ತುತ ದರ |
ಬಿಟ್ಕಾಯಿನ್ | ರೂ.52,56,407 |
ಎಥೆರಿಯಮ್ | ರೂ.2,55,000 |
ಟೆಥರ್ | ರೂ.79.80 |
ಬೈನಾನ್ಸ್ ಕಾಯಿನ್ | ರೂ.47,000 |
ಸೋಲೋನಾ | ರೂ.11,335 |
ಪೆಟ್ರೋಲ್, ಡೀಸೆಲ್ ಬೆಲೆ! : ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಂಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಆದ್ರೆ, ಡೀಸೆಲ್ ಬೆಲೆ 85.93 ರೂ.ಗೆ ಮಾರಾಟವಾಗುತ್ತಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಡೀಸೆಲ್ ಬೆಲೆ 95.63 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.