ETV Bharat / business

ಸತತ ನಾಲ್ಕನೇ ಬಾರಿಗೂ ಏರಿಕೆ: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಭಾರಿ ಹೆಚ್ಚಳ - GAS CYLINDER PRICE HIKE

ಸತತ ನಾಲ್ಕನೇ ಬಾರಿಗೆ ವಾಣಿಜ್ಯ ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಈ ಬಾರಿ 62 ರೂಪಾಯಿಗಳನ್ನು ಏರಿಕೆ ಮಾಡಿವೆ.

COMMERCIAL CYLINDER PRICE TODAY  CYLINDER PRICE HIKE TODAY  GAS PRICE HIKE LPG  NOVEMBER GAS CYLINDER PRICE
ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಭಾರೀ ಹೆಚ್ಚಳ (ANI)
author img

By ETV Bharat Karnataka Team

Published : Nov 1, 2024, 12:33 PM IST

Gas Cylinder Price Hike Today: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಸತತ ನಾಲ್ಕನೇ ಬಾರಿಗೆ ಹೆಚ್ಚಿಸುತ್ತಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 62 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅಲ್ಲದೆ, 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಬೆಲೆಯನ್ನು ಸಹ ರೂ.15 ಹೆಚ್ಚಿಸಲಾಗಿದೆ. ಹೊಸ ಬೆಲೆಗಳು ಇಂದಿನಿಂದ (ನವೆಂಬರ್ 1) ಜಾರಿಗೆ ಬರಲಿದೆ. ಇದೇ ವೇಳೆ ಗೃಹಬಳಕೆಗೆ ಬಳಸುವ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ವಾಣಿಜ್ಯ ಗ್ಯಾಸ್​ ಸಿಲಿಂಡರ್​ ಬೆಲೆ ಹೆಚ್ಚಳ: ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ರೂ.62 ಏರಿಕೆಯಾಗಿದ್ದು, ರೂ.1802.50 ಆಗಿದೆ. ಕೋಲ್ಕತ್ತಾದಲ್ಲಿ ರೂ.1911.50 ಮತ್ತು ಮುಂಬೈನಲ್ಲಿ ರೂ.1754.50 ತಲುಪಿದೆ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ ಸತತ ನಾಲ್ಕನೇ ಬಾರಿ ಏರಿಕೆಯಾಗಿದೆ. ಆಗಸ್ಟ್ ನಲ್ಲಿ ರೂ.6.5, ಸೆಪ್ಟೆಂಬರ್ ನಲ್ಲಿ ರೂ.39 ಮತ್ತು ಅಕ್ಟೋಬರ್ ನಲ್ಲಿ ರೂ.48.5. ಇದೀಗ 62 ರೂಪಾಯಿ ಏರಿಕೆ ಮಾಡಿರುವುದು ಗಮನಾರ್ಹ.

ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಿಲ್ಲ: ತೈಲ ಕಂಪನಿಗಳು ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 803 ರೂ. ಉಜ್ವಲ ಫಲಾನುಭವಿಗಳಿಗೆ ರೂ.603ಕ್ಕೆ ಮಾತ್ರ ಸಿಗಲಿದೆ. ಮುಂಬೈನಲ್ಲಿ ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆ ರೂ.802.50, ಚೆನ್ನೈ ರೂ.818.50 ಮತ್ತು ಹೈದರಾಬಾದ್ ರೂ.855 ಆಗಿದೆ.

ಗ್ಯಾಸ್ ಸಿಲಿಂಡರ್ ಬೆಲೆ ನಿರ್ಧರಿಸುವುದು ಯಾರು?: ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ವಾಣಿಜ್ಯ ಗ್ಯಾಸ್ ಸಿಲಿಂಡರ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಗಳನ್ನು ಪ್ರಕಟಿಸುತ್ತವೆ. ಇನ್ನು ಕಳೆದ 20 ತಿಂಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

LPG ಸಿಲಿಂಡರ್ ಬೆಲೆಗಳನ್ನು ಹೇಗೆ ಮತ್ತು ಎಲ್ಲಿ ಪರಿಶೀಲಿಸಬೇಕು?: LPG ಸಿಲಿಂಡರ್‌ಗಳ ನಿಜವಾದ ಬೆಲೆಗಳನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು https://iocl.com/prices-of-petroleum-products ನಲ್ಲಿ ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ವೆಬ್‌ಸೈಟ್‌ನಲ್ಲಿ, ಎಲ್‌ಪಿಜಿ ಬೆಲೆಗಳ ಹೊರತಾಗಿ, ನೀವು ಜೆಟ್ ಇಂಧನ, ಆಟೋ ಗ್ಯಾಸ್, ಸೀಮೆಎಣ್ಣೆ ಇತ್ಯಾದಿಗಳ ಬೆಲೆಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ.

ಓದಿ: ಪಾರ್ಕಿಂಗ್​ ಸ್ಥಳಕ್ಕಾಗಿ ನಡೆದ ಗಲಾಟೆ, ನೆರೆಹೊರೆಯವರ ಮೇಲೆ ಗುಂಡಿನ ದಾಳಿ ಮಾಡಿದ ನಿವೃತ್ತ ಸೈನಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.