ETV Bharat / business

ಐಟಿ ರಿಟರ್ನ್ಸ್ ಫೈಲ್ ಮಾಡಬೇಕೇ? ಈ ದಾಖಲೆಗಳಿವೆಯೇ ನಿಮ್ಮ ಬಳಿ? ಬರ್ತಿದೆ ಡೆಡ್‌ಲೈನ್‌ - ITR Filing - ITR FILING

Documents Required To File ITR: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಜುಲೈ 31 ರವರೆಗೆ ಕಾಲಾವಕಾಶವಿದೆ. ಐಟಿಆರ್ ಸಲ್ಲಿಸುವ ವಿಧಾನ ಜನರು ಪಡೆಯುವ ಆದಾಯವನ್ನು ಅವಲಂಬಿಸಿ ಭಿನ್ನವಾಗಿರುತ್ತದೆ. ಇದಕ್ಕಾಗಿ, ವಿವಿಧ ರೀತಿಯ ದಾಖಲೆಗಳನ್ನು ಸಲ್ಲಿಸಬೇಕು. ಈಗ ಪ್ರತಿಯೊಬ್ಬ ತೆರಿಗೆದಾರ ಸಲ್ಲಿಸಬೇಕಾದ ಸಾಮಾನ್ಯ ದಾಖಲೆಗಳ ಬಗ್ಗೆ ತಿಳಿಯೋಣ.

ITR  IT RETURNS  PAN CARD  AADHAAR CARD
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : May 26, 2024, 10:14 AM IST

ವ್ಯಕ್ತಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಜುಲೈ 31 ಕೊನೆಯ ದಿನ. ಆದರೆ, ಕೇಂದ್ರ ಸರ್ಕಾರ ಈ ಗಡುವು ವಿಸ್ತರಿಸುವುದೇ ಎಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಐಟಿಆರ್ ಫೈಲಿಂಗ್‌ಗಾಗಿ, ಉದ್ಯೋಗದಿಂದ ಸಂಬಳದ ದಾಖಲೆಗಳು, ವ್ಯವಹಾರ ಆದಾಯವನ್ನು ವಿವರಿಸುವ ಬ್ಯಾಂಕ್ ಸ್ಟೇಟ್​ಮೆಂಟ್ಸ್​ ಮತ್ತು ಹಿಂದಿನ ತೆರಿಗೆ ರಿಟರ್ನ್‌ಗಳಂತಹ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ವಿವಿಧ ಹೂಡಿಕೆಗಳ ಮೂಲಕ ಸಂಗ್ರಹವಾದ ಆದಾಯದ ವಿವರಗಳನ್ನೂ ಸಹ ಸಲ್ಲಿಸಬೇಕಾಗುತ್ತದೆ. ಆದಾಯದ ಪ್ರಕಾರವನ್ನು ಅವಲಂಬಿಸಿ ಐಟಿಆರ್​ ಸಲ್ಲಿಸುವ ವಿಧಾನವು ವಿಭಿನ್ನವಾಗಿರುತ್ತದೆ. ಐಟಿಆರ್ ಸಲ್ಲಿಸಲು ಪ್ರತಿಯೊಬ್ಬ ವ್ಯಕ್ತಿಯು ವಿವಿಧ ರೀತಿಯ ದಾಖಲೆಗಳನ್ನು ಒದಗಿಸಬೇಕು. ಪ್ರತಿಯೊಬ್ಬ ತೆರಿಗೆದಾರರು ಸಲ್ಲಿಸಬೇಕಾದ ಕೆಲವು ಸಾಮಾನ್ಯ ದಾಖಲೆಗಳು ಹೀಗಿವೆ.

  1. ಪ್ಯಾನ್ (PAN) ಕಾರ್ಡ್: ಐಟಿಆರ್ ಸಲ್ಲಿಸಲು ಪ್ಯಾನ್ ಕಾರ್ಡ್ ಕಡ್ಡಾಯ. ಮೂಲದಲ್ಲಿ ತೆರಿಗೆ ಕಡಿತದಲ್ಲಿ (TDS) ವಿನಾಯಿತಿಗಳನ್ನು ಪಡೆಯಲು PAN ಸಲ್ಲಿಸಬೇಕು. ಆದಾಯ ತೆರಿಗೆ ಮರುಪಾವತಿಗಾಗಿ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಫಾರ್ಮ್ 26AS, ಫಾರ್ಮ್ 16 ಮತ್ತು ಫಾರ್ಮ್ 12BB ಸಲ್ಲಿಸುವಾಗ PAN ಸಹ ಲಗತ್ತಿಸಬೇಕು. ತೆರಿಗೆದಾರರು ಪ್ಯಾನ್ ಬದಲಿಗೆ ಆಧಾರ್ ಸಂಖ್ಯೆ ಬಳಸಿಕೊಂಡು ಐಟಿಆರ್ ಸಲ್ಲಿಸಬಹುದು.
  2. ಆಧಾರ್ ಕಾರ್ಡ್: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139AA ಪ್ರಕಾರ, ಐಟಿ ರಿಟರ್ನ್ಸ್ ಸಲ್ಲಿಸುವಾಗ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಸಹ ಒದಗಿಸಬೇಕು. ಆಧಾರ್ ಕಾರ್ಡ್ ಇಲ್ಲದಿದ್ದರೆ, ಅದಕ್ಕೆ ಅರ್ಜಿ ಸಲ್ಲಿಸಿದ ಐಡಿ ಸಂಖ್ಯೆಯನ್ನು ಐಟಿ ರಿಟರ್ನ್ಸ್‌ನಲ್ಲಿ ನಮೂದಿಸಬೇಕು. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಈ ಕಾರಣದಿಂದಾಗಿ, ನಮ್ಮ ಫೋನ್‌ಗೆ ಬರುವ OTP ಅನ್ನು ನಮೂದಿಸುವ ಮೂಲಕ ಆನ್‌ಲೈನ್‌ನಲ್ಲಿ ITR ಪರಿಶೀಲನೆ ಪ್ರಕ್ರಿಯೆಯನ್ನು ಅತ್ಯಂತ ಸುಲಭವಾಗಿ ಪೂರ್ಣಗೊಳಿಸಬಹುದು.
  3. ಫಾರ್ಮ್ 16: ಫಾರ್ಮ್ 16 ಎಂಬುದು ಕಂಪನಿಯು ಉದ್ಯೋಗಿಗಳ ಪರವಾಗಿ ಆದಾಯ ತೆರಿಗೆ ಇಲಾಖೆಗೆ ವಾರ್ಷಿಕವಾಗಿ ಸಲ್ಲಿಸುವ ದಾಖಲೆ. ಇದು ಉದ್ಯೋಗಿಯ ವೇತನ ಮಾಹಿತಿ ಮತ್ತು ಸಂಬಳದಿಂದ ಕಡಿತಗೊಳಿಸಲಾದ ಟಿಡಿಎಸ್​ನ ವಿವರ ಒಳಗೊಂಡಿರುತ್ತದೆ. ಫಾರ್ಮ್ 16 ಎರಡು ಭಾಗಗಳನ್ನು ಹೊಂದಿದೆ. ಇದರ ಭಾಗ-A ಎಂಬುದು ಆ ಆರ್ಥಿಕ ವರ್ಷಕ್ಕೆ ಉದ್ಯೋಗಿಯ ಸಂಬಳದಿಂದ ಕಂಪನಿಯು ಕಡಿತಗೊಳಿಸಿದ ತೆರಿಗೆಯ ವಿವರ ಒಳಗೊಂಡಿದೆ. ಕಂಪನಿಯ ಪ್ಯಾನ್ ಸಂಖ್ಯೆ ಮತ್ತು TAN ಸಂಖ್ಯೆಯ ವಿವರಗಳು ಇದರಲ್ಲಿ ಇರುತ್ತವೆ. ಭಾಗ-B ಎಂಬುದು ನೌಕರನ ಒಟ್ಟು ಸಂಬಳದ ವಿವರಗಳು, ವಿವಿಧ ಭತ್ಯೆಗಳಿಂದ ವಿನಾಯಿತಿಗಳ ಮಾಹಿತಿ ಮತ್ತು ಉದ್ಯೋಗಿಗೆ ಒದಗಿಸಲಾದ ಹೆಚ್ಚುವರಿ ಪ್ರಯೋಜನಗಳ ವಿವರ ಒಳಗೊಂಡಿದೆ. ನೀವು ಕಂಪನಿಯಿಂದ ಫಾರ್ಮ್ 16 ಅನ್ನು ಸ್ವೀಕರಿಸದಿದ್ದರೂ, ನೀವು ಐಟಿಆರ್ ಸಲ್ಲಿಸಬಹುದು.
  4. ಫಾರ್ಮ್ 26AS: ಫಾರ್ಮ್ 26AS ನಿಮ್ಮ ಆದಾಯ/ಸಂಬಳದಿಂದ ಕಡಿತಗೊಳಿಸಲಾದ ತೆರಿಗೆಗಳ ವಿವರಗಳನ್ನು ಒಳಗೊಂಡಿದೆ. ಆ ಹಣಕಾಸು ವರ್ಷಕ್ಕೆ ನೀವು ಪಾವತಿಸಿದ ತೆರಿಗೆ ಮಾಹಿತಿ ಮತ್ತು ತೆರಿಗೆ ಮರುಪಾವತಿಗಳು ಫಾರ್ಮ್ 26AS ನಲ್ಲಿವೆ. ವಿವಿಧ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಪರವಾಗಿ ಸ್ವೀಕರಿಸಿದ ತೆರಿಗೆಗಳ ಎಲ್ಲಾ ವಿವರಗಳನ್ನು ಈ ಫಾರ್ಮ್ ಒಳಗೊಂಡಿದೆ. ಈ ನಮೂನೆಯು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
  5. ವಿಭಾಗ 80C ಹೂಡಿಕೆ ದಾಖಲೆಗಳು: ಪಬ್ಲಿಕ್ ಪ್ರಾವಿಡೆಂಟ್ ಫಂಡ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು, ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್‌ಗಳು (ಯುಲಿಪ್ಸ್), ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ಗಳು, ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಪಾಲಿಸಿಗಳ ಅಡಿಯಲ್ಲಿ ಮಾಡಿದ ಹೂಡಿಕೆಗಳು ಐಟಿ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಪಡೆದಿವೆ. ನೀವು ತೆರಿಗೆ ವಿನಾಯಿತಿ ಪಡೆಯಲು ಬಯಸಿದರೆ ಈ ಹೂಡಿಕೆಗಳಿಗೆ ಸಂಬಂಧಿಸಿದ ಎಲ್ಲಾ ರಸೀದಿಗಳನ್ನು ಐಟಿ ಇಲಾಖೆಗೆ ಸಲ್ಲಿಸಬೇಕು. ಇಂತಹ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ವರ್ಷಗಳವರೆಗೆ ಸಂರಕ್ಷಿಸಬೇಕು.
  6. ಇತರ ದಾಖಲೆಗಳು: ITR ಸಲ್ಲಿಸುವಾಗ ನೀವು ಲಗತ್ತಿಸಬೇಕಾದ ಇತರ ದಾಖಲೆಗಳೆಂದರೆ, ನೀವು ಭವಿಷ್ಯ ನಿಧಿ (PF), ನಿಮ್ಮ ಮಗುವಿನ ಶಾಲಾ ಬೋಧನಾ ಶುಲ್ಕ, ಜೀವ ವಿಮಾ ಪ್ರೀಮಿಯಂ ಪಾವತಿ, ವಿವಿಧ ವಹಿವಾಟುಗಳಿಗೆ ಪಾವತಿಸಿದ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕಗಳ ವಿವರಗಳು. ಇವುಗಳಿಂದ ನೀವು ತೆರಿಗೆ ವಿನಾಯಿತಿ ಪಡೆಯುತ್ತೀರಿ. ಗೃಹ ಸಾಲದ ಮೇಲಿನ ಅಸಲು ಮರುಪಾವತಿ, ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ/ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ, ಸೆಕ್ಷನ್ 80C ಅಡಿಯಲ್ಲಿ ಕ್ಲೈಮ್ ಮಾಡಬಹುದಾದ ಗರಿಷ್ಠ ಮೊತ್ತ ರೂ.1.5 ಲಕ್ಷವಾಗಿದ್ದರೂ ಸಹ, ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ಮೂಲಕ ತೆರಿಗೆ ಉಳಿಸಬಹುದು.
  7. ಬ್ಯಾಂಕ್ ಖಾತೆಗಳ ವಿವರಗಳು: ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳನ್ನು ITR ನಲ್ಲಿ ನಮೂದಿಸಬೇಕು. ಬ್ಯಾಂಕ್ ಹೆಸರು, ಖಾತೆ ಸಂಖ್ಯೆ, IFSC ಕೋಡ್‌ಗಳನ್ನು ಒದಗಿಸಿ. ಆದರೆ ಅವುಗಳಲ್ಲಿ ಯಾವುದಾದರೂ ಒಂದು ಬ್ಯಾಂಕ್ ಖಾತೆಯನ್ನು ತೆರಿಗೆ ಮರುಪಾವತಿಗಾಗಿ ಪ್ರಾಥಮಿಕ ಖಾತೆ ಎಂದು ನಮೂದಿಸಬೇಕು. ಆದಾಯ ಮಾಹಿತಿ ಮತ್ತು ವಹಿವಾಟುಗಳನ್ನು ಪರಿಶೀಲಿಸಲು ಐಟಿ ಇಲಾಖೆಗೆ ಬ್ಯಾಂಕ್ ಮಾಹಿತಿ ಬಹಳ ಮುಖ್ಯ.
  8. ವಾರ್ಷಿಕ ಮಾಹಿತಿ ವರದಿ: ವಾರ್ಷಿಕ ಮಾಹಿತಿ ಸ್ಟೇಟ್​ಮೆಂಟ್​ (Annual Information Statement-AIS) ಫಾರ್ಮ್ 26AS ನಲ್ಲಿ ತೆರಿಗೆದಾರರಿಗೆ ಒದಗಿಸಲಾದ ವಿವರವಾದ ಮಾಹಿತಿಯಾಗಿದೆ. ಎಐಎಸ್ ಮಾಹಿತಿಯನ್ನು ಪರಿಶೀಲಿಸುವ ಮತ್ತು ಐಟಿ ಇಲಾಖೆಗೆ ಪ್ರತಿಕ್ರಿಯೆ ನೀಡುವ ಸೌಲಭ್ಯವೂ ಇರುತ್ತದೆ. ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್), ಹಣಕಾಸು ವಹಿವಾಟಿನ ಸ್ಟೇಟ್​ಮೆಂಟ್​ (ಎಸ್‌ಎಫ್‌ಟಿ) ನಂತಹ ವಿಭಾಗಗಳಿಗೆ ತೆರಿಗೆದಾರರ ಪ್ರಸ್ತಾವನೆಗಳು ಮತ್ತು ಐಟಿ ಇಲಾಖೆಯು ಮೌಲ್ಯಮಾಪನ ಮಾಡಿದ ಮತ್ತು ಅಂತಿಮಗೊಳಿಸಿದ ತೆರಿಗೆ ಅಂಕಿಅಂಶಗಳ ವಿವರಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಎಐಎಸ್‌ನಲ್ಲಿ ಸೇರಿಸಲಾಗಿದೆ.
  9. ತೆರಿಗೆದಾರರ ಮಾಹಿತಿ ಸಾರಾಂಶ: ತೆರಿಗೆದಾರರ ಮಾಹಿತಿ ಸಾರಾಂಶ (TIS) ವರ್ಗದ ಪ್ರಕಾರ ತೆರಿಗೆದಾರರ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ಇದರಲ್ಲಿ ವೇತನ, ಬಡ್ಡಿ, ಲಾಭಾಂಶ ಹೀಗೆ ವಿವಿಧ ವರ್ಗಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಮತ್ತು ಅರ್ಥಪೂರ್ಣವಾಗಿ ಸೇರಿಸಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ, ಭವಿಷ್ಯದ ತೆರಿಗೆ ಪಾವತಿದಾರನು ತನ್ನ ಐಟಿಆರ್ ಅನ್ನು ಸುಲಭವಾಗಿ ಸಲ್ಲಿಸಲು ಸಾಧ್ಯವಾಗುತ್ತದೆ.
  10. ಗೃಹ ಸಾಲದ ವಿವರಗಳು: ಒಬ್ಬರು ಗೃಹ ಸಾಲವನ್ನು ತೆಗೆದುಕೊಂಡಿದ್ದರೆ, ಸಂಬಂಧಿತ EMI ಅನ್ನು ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಈ ಪಾವತಿಯಿಂದ ನಿಜವಾಗಿ ಎಷ್ಟು ಕಡಿತಗೊಂಡಿದೆ? ಬಡ್ಡಿ ಕಡಿತಗೊಳಿಸಿದ್ದು ಎಷ್ಟು? ಮಾಹಿತಿ ಸ್ಪಷ್ಟವಾಗಿದೆ. ಅದಕ್ಕಾಗಿಯೇ ನೀವು ಐಟಿಆರ್ ಸಲ್ಲಿಸುವಾಗ ಹೋಮ್ ಲೋನ್ ಪಾವತಿ ಸ್ಟೇಟ್​ಮೆಂಟ್​ ಅನ್ನು ಸಲ್ಲಿಸುವ ಮೂಲಕ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಬ್ಯಾಂಕ್‌ಗಳಿಂದ ಗೃಹ ಸಾಲ ಪಡೆಯುವ ಉದ್ದೇಶ ಹೊಂದಿರುವವರು ಹಿಂದಿನ ಹಣಕಾಸು ವರ್ಷದ ಸ್ಟೇಟ್​ಮೆಂಟ್​ಗಳನ್ನು ಐಟಿಆರ್‌ನೊಂದಿಗೆ ಲಗತ್ತಿಸಬೇಕು.
  11. ಷೇರುಗಳು, ಸ್ವತ್ತುಗಳು: ಅನೇಕ ಜನರು ಷೇರುಗಳು, ಭದ್ರತೆಗಳು ಮತ್ತು ಆಸ್ತಿಗಳನ್ನು ಹೊಂದಿದ್ದಾರೆ. ಕೆಲವರು ಅವುಗಳನ್ನು ಮಾರಾಟ ಮಾಡುವಾಗ ಬಂಡವಾಳ ಲಾಭವನ್ನು ಪಡೆಯುತ್ತಾರೆ. ಇತರರು ಬಂಡವಾಳ ನಷ್ಟವನ್ನು ಅನುಭವಿಸುತ್ತಾರೆ. ಈ ಮಾಹಿತಿಯನ್ನು ಪರಿಶೀಲಿಸಲು ಬ್ರೋಕರ್‌ನಿಂದ ಸ್ಟೇಟ್​ಮೆಂಟ್​ಗಳನ್ನು ಪಡೆಯಬೇಕು. ಆಸ್ತಿ ಮಾರಾಟ ಪತ್ರಗಳಂತಹ ದಾಖಲೆಗಳನ್ನು ಪಡೆಯಬೇಕು. ಅವುಗಳನ್ನು ಐಟಿಆರ್‌ನಲ್ಲಿ ಲಗತ್ತಿಸಬೇಕು.
  12. ಡಿವಿಡೆಂಡ್ ಆದಾಯ: ಅನೇಕ ಜನರು ಷೇರುಗಳು ಮತ್ತು ಮ್ಯೂಚುವಲ್ ಫಂಡ್​​ಗಳನ್ನು ಹೊಂದಿದ್ದಾರೆ. ಅವುಗಳ ಮೇಲೆ ಯಾವುದೇ ಡಿವಿಡೆಂಡ್ ಆದಾಯವನ್ನು ಪಡೆದರೆ, ಸಂಬಂಧಿತ ದಾಖಲೆಗಳನ್ನು ITR ನೊಂದಿಗೆ ಲಗತ್ತಿಸಬೇಕು. ಈ ನಿಟ್ಟಿನಲ್ಲಿ, ಬ್ರೋಕರ್‌ಗಳು ನೀಡಿದ ರಸೀದಿಗಳು ಮತ್ತು ಡಿಮ್ಯಾಟ್ ಖಾತೆ ಸ್ಟೇಟ್​ಗಳನ್ನು ಐಟಿಆರ್ ಫೈಲಿಂಗ್‌ನಲ್ಲಿ ಲಗತ್ತಿಸಬೇಕು.

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಬ್ಯಾಂಕ್​​​​​​​​​​ಗಳಿಗೆ 10 ರಜೆ: ನಿಮ್ಮ ವ್ಯವಹಾರಗಳಿದ್ದರೆ ಈಗಲೇ ಮುಗಿಸಿಕೊಳ್ಳಿ: ಈ ದಿನಗಳಂದು ಹಣದ ವಹಿವಾಟನ್ನು ಹೀಗೆ ಮಾಡಿ! - Bank Holidays In June 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.