ETV Bharat / business

ನಿವೃತ್ತಿವರೆಗೂ ಕಾಯಲೇಬೇಕಿಲ್ಲ,ನೀವು 50ಕ್ಕೆ ಪಡೆಯಬಹುದು ಪಿಂಚಣಿ: EPSನ ಹೊಸ ನಿಯಮ ನಿಮಗೆ ಗೊತ್ತಾ? - What say EPS rules - WHAT SAY EPS RULES

Know EPS Pension Rules: ನೀವು ಇಪಿಎಫ್ ಖಾತೆದಾರರೇ? ಹಾಗಾದರೆ ಈ ಸುದ್ದಿ ನಿಮಗಾಗಿ. ಇಪಿಎಫ್ ಗ್ರಾಹಕರು 58 ವರ್ಷ ಪೂರೈಸಿದ ನಂತರ ಪಿಂಚಣಿ ಪಡೆಯುವುದು ಸಹಜ. ಆದರೆ, ನೀವು ಬಯಸಿದರೆ 50 ವರ್ಷಗಳಲ್ಲೇ ನಿಮ್ಮ ಪಿಂಚಣಿ ಪಡೆದುಕೊಳ್ಳಬಹುದು. ಅದು ಹೇಗೆ ಅಂತಿರಾ? ಆ ಬಗ್ಗೆ ತಿಳಿಸಿಕೊಡ್ತೇವೆ, ಈ ಸುದ್ದಿ ಸಂಪೂರ್ಣವಾಗಿ ಓದಿ.

eps-rules-no-need-to-wait-till-age-58-epfo-members-can-withdraw-early-pension
ನಿವೃತ್ತಿವರೆಗೂ ಕಾಯಲೇಬೇಕಿಲ್ಲ,ನೀವು 50ಕ್ಕೆ ಪಡೆಯಬಹುದು ಪಿಂಚಣಿ: ಈ ಇಪಿಎಸ್​ನ ಹೊಸ ನಿಯಮ ನಿಮಗೆ ಗೊತ್ತಾ? (ETV Bharat)
author img

By ETV Bharat Karnataka Team

Published : Sep 5, 2024, 5:37 PM IST

What say EPS rules?: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ EPFO ನವೆಂಬರ್ 1995 ರಲ್ಲಿ 'ನೌಕರರ ಪಿಂಚಣಿ ಯೋಜನೆ 95' (EPS 95) ಯೋಜನೆಯನ್ನು ಪ್ರಾರಂಭಿಸಿತು. ಇದನ್ನು ಮುಖ್ಯವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಜಾರಿಗೆ ತರಲಾಗಿತ್ತು. ಇಪಿಎಸ್ ಯೋಜನೆಗೆ ಸೇರಿದವರು 58 ವರ್ಷಗಳನ್ನು ಪೂರೈಸಿದ ನಂತರ ಪಿಂಚಣಿ ಪಡೆಯುತ್ತಾರೆ. ಒಮ್ಮೆ 10 ವರ್ಷಗಳ ಕಾಲ ನೀವು ಇಪಿಎಫ್​​​​​​​​​​​ ಖಾತೆ ಹಣ ಹಾಕಿದ್ದರೆ. 58 ವರ್ಷ ಪೂರ್ಣವಾದ ಬಳಿಕ ನಿಮಗೆ ಪಿಂಚಣಿ ಹಣ ಬರುತ್ತಿತ್ತು. ಆದರೆ, ಈಗ ನೀವು ಬಯಸಿದರೆ 50 ನಲ್ಲಿ ಪಿಂಚಣಿ ಪಡೆಯಲು ಅವಕಾಶವಿದೆ. ಅದು ಹೇಗೆ? ಅನ್ನೋದನ್ನು ನಾವು ಈ ಸುದ್ದಿಯಲ್ಲಿ ತಿಳಿಸಿಕೊಡುತ್ತೇವೆ

ಒಬ್ಬ ವ್ಯಕ್ತಿಯು ಕೆಲಸಕ್ಕೆ ಸೇರಿದ ನಂತರ ಇಪಿಎಫ್ ಖಾತೆಯನ್ನು ತೆರೆಯಬಹುದು. ಉದ್ಯೋಗಿಯ ಮೂಲ ವೇತನದ 12 ಪ್ರತಿಶತ + ತುಟ್ಟಿಭತ್ಯೆಯನ್ನು ಇಪಿಎಫ್ ಖಾತೆಯಲ್ಲಿ ಮಾಲೀಕತ್ವದ ಪಾಲು ಆಗಿ ಠೇವಣಿ ಮಾಡಲಾಗುತ್ತದೆ. ಉದ್ಯೋಗಿ ಕೂಡ ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ಉದ್ಯೋಗಿ ಪಾವತಿಸಿದ ಮೊತ್ತವನ್ನು ಭವಿಷ್ಯ ನಿಧಿಗೆ ಜಮಾ ಮಾಡಲಾಗುತ್ತದೆ. ಆದರೆ, ಇಪಿಎಫ್‌ಒ ನಿಯಮಗಳ ಪ್ರಕಾರ, ಉದ್ಯೋಗದಾತ ಪಾವತಿಸಿದ ಶೇಕಡ 12 ರಷ್ಟು ಕೊಡುಗೆಯಲ್ಲಿ 3.67 ಪ್ರತಿಶತವನ್ನು ಭವಿಷ್ಯ ನಿಧಿಗೆ ಜಮಾ ಮಾಡಲಾಗುತ್ತದೆ. ಉಳಿದ 8.33 ಶೇಕಡಾ ನೌಕರರ ಪಿಂಚಣಿ ಯೋಜನೆಗೆ ಹೋಗುತ್ತದೆ. ನೀವು ನಿವೃತ್ತರಾದ ನಂತರ ನೀವು ಈ ಇಪಿಎಸ್ ಕಾರ್ಪಸ್‌ನಿಂದ ಪಿಂಚಣಿ ಪಡೆಯುತ್ತೀರಿ.

ಷರತ್ತುಗಳು ಅನ್ವಯ: ಇಪಿಎಸ್ ಅಡಿ ಪಿಂಚಣಿ ಪಡೆಯಲು, ನೀವು ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿರಬೇಕು. ಆಗ ಮಾತ್ರ ನೀವು ಕನಿಷ್ಠ ಪಿಂಚಣಿ ಪಡೆಯಲು ಅರ್ಹರಾಗುತ್ತೀರಿ. ಈಗಿರುವ ನಿಯಮಗಳ ಪ್ರಕಾರ ಒಬ್ಬ ಉದ್ಯೋಗಿಗೆ ಕನಿಷ್ಠ 1000 ರೂ.ನಿಂದ ಗರಿಷ್ಠ 7500 ರೂ.ವರೆಗೆ ಪಿಂಚಣಿ ಪಡೆಯಬಹುದು.

ಪಿಂಚಣಿ ಲೆಕ್ಕಾಚಾರ ಹೇಗೆ?: ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿ ಇಪಿಎಫ್ ಆರಂಭಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ. ಆದರೆ, ಉದ್ಯೋಗಿಯ ವಯಸ್ಸು 50-58 ವರ್ಷಗಳ ನಡುವೆ ಇರಬೇಕು. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಿಂಚಣಿ ಪಡೆಯಲು ಸಾಧ್ಯವಿಲ್ಲ.

ಇಲ್ಲಿ ನೆನಪಿಡುವ ಅಂಶವೇನು? ನೀವು 58 ವರ್ಷಕ್ಕಿಂತ ಮೊದಲು ಪಿಂಚಣಿ ತೆಗೆದುಕೊಳ್ಳಲು ಯೋಜಿಸಿದರೆ, ನಿಮ್ಮ ಪಿಂಚಣಿ ಪ್ರತಿ ವರ್ಷ 4 ಪ್ರತಿಶತದಷ್ಟು ಕಡಿಮೆಯಾಗುತ್ತದೆ. ಉದಾಹರಣೆಗೆ, ನೀವು 57 ನೇ ವಯಸ್ಸಿನಲ್ಲಿ ಪಿಂಚಣಿ ತೆಗೆದುಕೊಂಡರೆ, ಪಿಂಚಣಿ ಶೇಕಡಾ 4 ರಷ್ಟು ಕಡಿಮೆಯಾಗುತ್ತದೆ. ಅಂದರೆ, ನೀವು 56 ನೇ ವಯಸ್ಸಿನಲ್ಲಿ ಪಿಂಚಣಿ ತೆಗೆದುಕೊಂಡರೆ, ಪಿಂಚಣಿ ಶೇ 4 + 4 ರಷ್ಟು ಕಡಿಮೆಯಾಗುತ್ತದೆ.

ನೀವು 60 ವರ್ಷ ವಯಸ್ಸಿನ ನಂತರ ಪಿಂಚಣಿ ತೆಗೆದುಕೊಳ್ಳಲು ನಿರ್ಧರಿಸಿದರೆ, ನಿಮ್ಮ ಪಿಂಚಣಿಯು ವರ್ಷಕ್ಕೆ 4 ಪ್ರತಿಶತದಷ್ಟು ಹೆಚ್ಚಾಗುತ್ತದೆ.

ಇಪಿಎಸ್ ಪಿಂಚಣಿಯ ವಿಧಗಳು: ಇಪಿಎಸ್ ಯೋಜನೆಯಲ್ಲಿ ಹಲವು ರೀತಿಯ ಪಿಂಚಣಿಗಳಿವೆ. ಅವುಗಳೆಂದರೆ:

  • ವಿಧವಾ ಪಿಂಚಣಿ
  • ಮಕ್ಕಳ ಪಿಂಚಣಿ
  • ಅನಾಥ ಪಿಂಚಣಿ

ಇಪಿಎಫ್ ಚಂದಾದಾರರ ಮರಣದ ಸಂದರ್ಭದಲ್ಲಿ, ಅವರ ಪತ್ನಿಗೆ ವಿಧವಾ ಪಿಂಚಣಿ ನೀಡಲಾಗುತ್ತದೆ. ಮಕ್ಕಳ ಪಿಂಚಣಿಯನ್ನು ಅವರ ಮಕ್ಕಳಿಗೆ ನೀಡಲಾಗುತ್ತದೆ. ಚಂದಾದಾರರು ಮತ್ತು ಅವರ ಪತ್ನಿ ಇಬ್ಬರೂ ಸತ್ತರೆ, ಅವರ ಮಕ್ಕಳು ಅನಾಥ ಪಿಂಚಣಿ ಪಡೆಯುತ್ತಾರೆ.

How To Check Your EPS Amount? - ನಿಮ್ಮ ಇಪಿಎಸ್ ಮೊತ್ತವನ್ನು ಪರಿಶೀಲಿಸುವುದು ಹೇಗೆ?:

  • ಮೊದಲು ನೀವು EPFO ​​ಅಧಿಕೃತ ವೆಬ್‌ಸೈಟ್ ತೆರೆಯಬೇಕು.
  • ಸೇವೆಗಳ ವಿಭಾಗಕ್ಕೆ ಹೋಗಿ ಮತ್ತು ಡ್ರಾಪ್‌ಡೌನ್ ಮೆನುವಿನಲ್ಲಿ ಉದ್ಯೋಗಿಗಳಿಗಾಗಿ ಇರುವ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಸದಸ್ಯರ ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ, UAN ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ.
  • ನಂತರ ಪಾಸ್‌ಬುಕ್ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ 'ಸದಸ್ಯ ಐಡಿ' ಆಯ್ಕೆಮಾಡಿ.
  • ಪಾಸ್‌ಬುಕ್ ಅವಲೋಕನದಲ್ಲಿ ನಿಮ್ಮ ಇಪಿಎಸ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನೀವು ತಕ್ಷಣ ನೋಡುತ್ತೀರಿ.
  • ನೀವು ಬಯಸಿದರೆ ನೀವು ಅದನ್ನು PDF ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನು ಓದಿ: 2,350 ಕೋಟಿ ರೂ. ನಷ್ಟ ದಾಖಲಿಸಿದ ಸ್ವಿಗ್ಗಿ: ಆದಾಯ ಶೇ 36ರಷ್ಟು ಏರಿಕೆ - Swiggy net loss

ETV Bharat Logo

Copyright © 2025 Ushodaya Enterprises Pvt. Ltd., All Rights Reserved.