ETV Bharat / business

ಉತ್ತಮ ಮುಂಗಾರು; ಈ ವರ್ಷ 979 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ - monsson kharif crop sowing

author img

By ETV Bharat Karnataka Team

Published : Aug 13, 2024, 11:37 AM IST

ಕಳೆದ ವರ್ಷಕ್ಕಿಂತ ಈ ವರ್ಷ 13.5 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಹೆಚ್ಚುವರಿ ಬಿತ್ತನೆಯಾಗಿದ್ದು, ಇದು ಅಧಿಕ ಉತ್ಪಾದನೆಗೆ ಕಾರಣವಾಗಲಿದೆ.

due to better monsson kharif crop sowing this year has gone up to 979 9 lakh hectares
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ 979.9 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಮುಂಗಾರು​ ಬೆಳೆಗಳ ಬಿತ್ತನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 966.4 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ನಡೆಸಲಾಗಿತ್ತು ಎಂಬ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ದತ್ತಾಂಶ ತೋರಿಸಿದೆ.

ಕಳೆದ ವರ್ಷಕ್ಕಿಂತ ಈ ವರ್ಷ 13.5 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಹೆಚ್ಚುವರ ಬಿತ್ತನೆಯಾಗಿದ್ದು, ಇದು ಅಧಿಕ ಉತ್ಪಾದನೆಗೆ ಕಾರಣವಾಗಲಿದೆ. ಇದರಿಂದ ಕೃಷಿಯ ಆದಾಯವೂ ಹೆಚ್ಚಲಿದ್ದು, ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಸಹಾಯ ಮಾಡಲಿದೆ ಎನ್ನಲಾಗಿದೆ.

ಅಧಿಕೃತ ಅಂಕಿಸಂಖ್ಯೆಗಳು ತೋರಿಸುವಂತೆ, ಈ ವರ್ಷ ಭತ್ತವನ್ನು 331.78 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಹೆಚ್ಚಾಗಿದೆ. ಕಳೆದ ವರ್ಷ 318.16 ಲಕ್ಷ ಬಿತ್ತನೆ ನಡೆಸಲಾಗಿತ್ತು. ಈ ವರ್ಷ 117.43 ಲಕ್ಷ ಹೆಕ್ಟೇರ್​ನಲ್ಲಿ ಧಾನ್ಯಗಳ ಬಿತ್ತನೆ ಮಾಡಲಾಗಿತ್ತು, ಕಳೆದ ವರ್ಷ 110.80 ಲಕ್ಷ ಹೆಕ್ಟೇರ್​ನಲ್ಲಿ ಬೀಜ ಬಿತ್ತಲಾಗಿತ್ತು.

ಅದೇ ರೀತಿ, ಸಿರಿಧಾನ್ಯಗಳಾದ ಜೋಳ, ಬಂಜ್ರಾ, ರಾಗಿ ಬಿತ್ತನೆ ಕೂಡ ಈ ವರ್ಷ ಹೆಚ್ಚಿದ್ದು, 173.13 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 171.36 ಲಕ್ಷ ಹೆಕ್ಟೇರ್​ನಲ್ಲಿ ಬಳಕೆ ಮಾಡಲಾಗಿತ್ತು.

ಎಣ್ಣೆ ಬೀಜಗಳನ್ನು ಕಳೆದ 182.17 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಿದರೆ, ಈ ವರ್ಷ 183. 69 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ ಬಿತ್ತನೆ ಪ್ರದೇಶಗಳಲ್ಲಿ ಉತ್ತಮ ಮುಂಗಾರು​ ಮಳೆಯಾಗಿದ್ದು, ಬಿತ್ತನೆ ಕೂಡ ಉತ್ತಮವಾಗಿದ್ದು, ಅಧಿಕ ಪ್ರದೇಶದಲ್ಲಿ ಬಿತ್ತನೆ ಹೆಚ್ಚಳ ಕಂಡು ಬಂದಿದ್ದು, ದೇಶದ ಶೇ. 50ರಷ್ಟು ಭೂಮಿಯಲ್ಲಿ ಕೃಷಿ ಉತ್ತಮವಾಗಿದೆ.

ಈ ಬಾರಿ ಬಜೆಟ್​ನಲ್ಲಿ ಕೂಡ ಉತ್ಪಾದನೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು 1.52 ಲಕ್ಷ ಕೋಟಿ ನೀಡಲಾಗಿದೆ. ಈ ಕ್ರಮದ ಮೂಲಕ ಡಿಜಿಟಲ್​ ಸಾರ್ವಜನಿಕ ಮೂಲಸೌಕರ್ಯ ಒಳಗೊಂಡಂತೆ ಎಣ್ಣೆ ಬೀಜಗಳಿಗೆ ಆತ್ಮನಿರ್ಭರಾತ್​​ ಮತ್ತು ತರಕಾರಿ ಉತ್ಪಾದನೆಗೆ ದೊಡ್ಡ ಗಾತ್ರದ ಕ್ಲಸರ್​ ಸೇರಿದಂತೆ ಕೃಷಿ ವಲಯದಲ್ಲಿನ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.

ಸಾಸಿವೆ, ಕಡಲೆಕಾಯಿ, ಎಳ್ಳು, ಸೋಯಾಬೀನ್ ಮತ್ತು ಸೂರ್ಯಕಾಂತಿ ಮುಂತಾದ ಎಣ್ಣೆ ಬೀಜಗಳ ಉತ್ಪಾದನೆಗೆ ಆತ್ಮನಿರ್ಭರಾತ್​​ ಸಾಧಿಸುವ ಗುರಿ ಹೊಂದಿದ್ದು, ಈ ಮೂಲಕ ಅವುಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಬಲಕ್ಕೆ ಮುಂದಾಗಲಾಗಿದೆ.

ತರಕಾರಿಗಳ ಉತ್ಪಾದನೆ ಪ್ರಮುಖ ಬಳಕೆ ಕೇಂದ್ರದಲ್ಲಿ ಬೃಹತ್​ ಗಾತ್ರದ ಕ್ಲಸರ್​ ಅಭಿವೃದ್ಧಿ ಮಾಡಲಾಗಿದೆ. ತರಕಾರಿಗಳ ಸಂಗ್ರಹ, ಶೇಖರಣೆ ಮತ್ತು ಉತ್ಪನ್ನಗಳ ವಹಿವಾಟಿಗೆ ಪೂರೈಕೆ ಸರಪಳಿಗೆ ರೈತ ಉತ್ಪಾದನಾ ಸಂಘಟನೆ, ಸಹಕಾರ ಮತ್ತು ಸ್ಟಾರ್ಟ್​ಅಪ್​ಗಳ ಉತ್ತೇಜನೆ ನೀಡಲಾಗಿದೆ. (​ಐಎಎನ್​ಎಸ್​)

ಇದನ್ನೂ ಓದಿ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸಹಾಯಹಸ್ತ; ಹೃದಯ ಗೆದ್ದ ಆಟೋ ಚಾಲಕಿಯ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.