ಮುಂಬೈ: ಹಿಂದೂಗಳು ಸೇರಿದಂತೆ ಭಾರತೀಯರು ಪ್ರತಿ ವರ್ಷ ದೀಪಗಳ ಹಬ್ಬ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ಅಮಾವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದೀಪಾವಳಿಯು ಹೂಡಿಕೆ ಮತ್ತು ಖರೀದಿಗೆ ಅತ್ಯಂತ ಶುಭ ಸಮಯವಾಗಿದೆ.
ಷೇರುಪೇಟೆಯಲ್ಲಿ ಹೂಡಿಕೆ ಮತ್ತು ವ್ಯಾಪಾರ ಮಾಡುವವರಿಗೆ ದೀಪಾವಳಿಯ ದಿನದಂದು ಒಂದು ಗಂಟೆ ವಿಶೇಷ ಅವಧಿಯ ವ್ಯವಹಾರದ ಅವಧಿಯನ್ನು ಇರಿಸಲಾಗುತ್ತದೆ. ಸಾಮಾನ್ಯವಾಗಿ ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ದೀಪಾವಳಿ ದಿನದಂದು ಷೇರು ಮಾರುಕಟ್ಟೆ ಕೂಡ ಬಂದ್ ಮಾಡಲಾಗುತ್ತದೆ. ಆದರೆ, ಹೂಡಿಕೆದಾರರಿಗೆ ಅನುಕೂಲವಾಗುವಂತೆ ಈ ಹಬ್ಬದ ದಿನ ಒಂದು ಗಂಟೆ ವಿಶೇಷ ವಹಿವಾಟು ನಡೆಸಲಾಗುವುದು. ಈ ವಹಿವಾಟು ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ನಡೆಯುತ್ತದೆ.
ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದು ಕೊಂಡು ಬರುತ್ತಿದೆ. ಈ ವಿಶೇಷ ಮೂರ್ಹತವೂ ಹೂಡಿಕೆದಾರರಿಗೆ ಅನುಕೂಲಕೂಲಕರ ವಾತಾವರಣ ಸೃಷ್ಟಿಸುತ್ತದೆ ಎಂಬ ನಂಬಿಕೆಯನ್ನು ಹೊಂದಲಾಗಿದೆ. ಈ ಒಂದು ಗಂಟೆ ಅವಧಿಯಲ್ಲಿ ವ್ಯಾಪಾರ ನಡೆಸುವುದರಿಂದ ವರ್ಷ ಪೂರ್ತಿ ಸಂಪತ್ತು ಮತ್ತು ಸಮೃದ್ದಿ ಹೆಚ್ಚುತ್ತದೆ ಎಂಬ ನಂಬಿಕೆ ಹಲವರದ್ದು. ಪ್ರತಿ ವರ್ಷ ನಡೆಯುವ ಈ ವಿಶೇಷ ಮುಹೂರ್ತದ ವಾಹಿವಾಟಿನ ಕುರಿತು ಷೇರುಪೇಟೆ ಸಮಯವನ್ನು ನಿಗದಿ ಮಾಡಿರುತ್ತದೆ.
ಭಾರತದಲ್ಲಿ ಮಾತ್ರ ಈ ವಿಶೇಷ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾತ್ರ ಈ ರೀತಿಯ ವಿಶಿಷ್ಟ ಸಂಪ್ರದಾಯವಿದ್ದು, ಬೇರೆಲ್ಲೂ ಇದನ್ನು ಕಾಣಲು ಸಾಧ್ಯವಿಲ್ಲ. ಸಂಪತ್ತಿನ ಸ್ವರೂಪಿಣಿಯಾಗಿರುವ ಲಕ್ಷ್ಮಿ ದೇವಿ ಆಶೀರ್ವಾದದ ಸಂಕೇತವಾಗಿ ಅನೇಕರು ಈ ದಿನ ಷೇರು ಖರೀದಿಸಲು ಬಯಸಯತ್ತಾರೆ.
ದೀಪಾವಳಿ ಮುಹೂರ್ತ, ಸಮಯ ಮತ್ತು ದಿನಾಂಕ: ಈ ವರ್ಷ ದೀಪಾವಳಿಯಲ್ಲಿ ಅಮಾವಾಸ್ಯೆ ತಿಥಿ ಗುರುವಾರ ಸಂಜೆ ಪ್ರಾರಂಭವಾಗಲಿದ್ದು, ಶನಿವಾರ ಸಂಜೆಗೆ ಮುಗಿಯಲಿದೆ. ಈ ಹಿನ್ನೆಲೆ ಅಕ್ಟೋಬರ್ 31 ಮತ್ತು ನವಂಬರ್ 1ರಂದು ಎರಡು ದಿನ ಆಚರಣೆ ಮಾಡಲಾಗುವುದು.
ಈ ವರ್ಷ ಶುಕ್ರವಾರದಂದು ದೀಪಾವಳಿಯ ರಜಾ ದಿನವಾಗಿ ಘೋಷಣೆ ಮಾಡಲಾಗುವುದು. ಇದೇ ಕಾರಣದಿಂದ ಗುರುವಾರ ಷೇರು ಮಾರುಕಟ್ಟೆ ಕಾರ್ಯ ನಿರ್ವಹಿಸಲಿದ್ದು, ಶುಕ್ರವಾರ ಹಬ್ಬದ ನಿಮಿತ್ತ ಮುಚ್ಚಲಿದೆ. ಈ ಹಿನ್ನೆಲೆ ಬಿಎಸ್ಸಿ ಮತ್ತು ಎನ್ಎಸ್ಇ ಶುಕ್ರವಾರದಂದು ಶುಭ ಮೂಹರ್ತದಲ್ಲಿ ಒಂದು ಗಂಟೆ ಕಾರ್ಯಾಚರಣೆ ಮಾಡಲಿದೆ.
ಶುಭ ಮುಹೂರ್ತದ ಸಮಯ: ಸಾಮಾನ್ಯವಾಗಿ ಒಂದು ಗಂಟೆಯ ಈ ವಿಶೇಷ ಮುಹೂರ್ತದ ಷೇರು ವಹಿವಾಟು ಸಂಜೆ ಇರುತ್ತದೆ. ಈ ವರ್ಷದ ಕೂಡ ಶುಕ್ರವಾರ ಸಂಜೆ 6 ರಿಂದ 7ರ ನಡುವೆ ಈ ಷೇರು ವಹಿವಾಟಿಗೆ ಅವಕಾಶ ನೀಡಲಾಗಿದೆ.
- ಪೂರ್ವ ಆರಂಭದ ಅವಧಿ - ಸಂಜೆ 5.45 ರಿಂದ 6
- ಮೂಹರ್ತ ಟ್ರೇಡಿಂಗ್ ಸಮಯ - ಸಂಜೆ 6 ರಿಂದ ಸಂಜೆ 7 ಗಂಟೆ
- ಮುಕ್ತಾಯದ ಅವಧಿ - ಸಂಜೆ 7.10 ರಿಂದ 7.20
ಬ್ಲಾಕ್ ಡೀಲ್ಸ್ ದೀಪಾವಳಿ ಮುಹೂರ್ತ ಟ್ರೇಡಿಂಗ್
- ಬ್ಲಾಕ್ ಡೀಲ್ ಅವಧಿ - ಸಂಜೆ 5.35 ರಿಂದ 5.45
- ಲಿಕ್ವಿಡ್ ಅವಧಿ ಹರಾಜಿನ ಕರೆ - ಸಂಜೆ 6.05ರಿಂದ ಸಂಜೆ 6.50
- ವಹಿವಾಟು ಸುಧಾರಣೆ ಕಟ್ ಆಫ್ ಸಮಯ ಸಂಜೆ 6 ರಿಂದ ಸಂಜೆ 7.30
ಇದನ್ನೂ ಓದಿ: ದೀಪಾವಳಿ ದಿನದಂದು ಬಂಗಾರದ ದರ ಎಷ್ಟಿದೆ?: ಇಳಿಕೆಯಾಗಿದೆಯಾ,ತುಟ್ಟಿಯಾಗಿದೆಯಾ? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ!