ETV Bharat / business

ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ 5 ಪಟ್ಟು ಹೆಚ್ಚಳ: 8.62 ಕೋಟಿಗೆ ತಲುಪಿದ ಒಟ್ಟು ತೆರಿಗೆದಾರರ ಸಂಖ್ಯೆ - CROREPATI TAXPAYERS

ಕಳೆದ 10 ವರ್ಷಗಳಲ್ಲಿ ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಐದು ಪಟ್ಟು ಏರಿಕೆಯಾಗಿದೆ.

ಕೋಟ್ಯಧಿಪತಿ ತೆರಿಗೆದಾರರ ಪ್ರಮಾಣ 5 ಪಟ್ಟು ಹೆಚ್ಚಳ
ಕೋಟ್ಯಧಿಪತಿ ತೆರಿಗೆದಾರರ ಪ್ರಮಾಣ 5 ಪಟ್ಟು ಹೆಚ್ಚಳ (IANS)
author img

By ETV Bharat Karnataka Team

Published : Oct 27, 2024, 4:22 PM IST

ನವದೆಹಲಿ: 2014ಕ್ಕೆ ಹೋಲಿಸಿದರೆ 2024 ರ ಆದಾಯ ತೆರಿಗೆ ಮೌಲ್ಯಮಾಪನ ವರ್ಷ (ಎವೈ)ದಲ್ಲಿ ಭಾರತದಲ್ಲಿ ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಐದು ಪಟ್ಟು ಏರಿಕೆಯಾಗಿ 2.2 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್​ಬಿಐ) ಆರ್ಥಿಕ ವಿಭಾಗದ ಸಂಶೋಧನಾ ವರದಿಯ ಪ್ರಕಾರ, ಕಳೆದ 10 ಮೌಲ್ಯಮಾಪನ ವರ್ಷಗಳಲ್ಲಿ ಒಟ್ಟು ತೆರಿಗೆದಾರರ ಸಂಖ್ಯೆ 2.3 ಪಟ್ಟು ಏರಿಕೆಯಾಗಿ 8.62 ಕೋಟಿಗೆ ತಲುಪಿದ್ದು, 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗುಂಪಿನ ತೆರಿಗೆದಾರರ ಸಂಖ್ಯೆ ಗಮನಾರ್ಹ ಹೆಚ್ಚಳವಾಗಿದೆ.

ಭಾರತದಲ್ಲಿ ಮಧ್ಯಮ ವರ್ಗದ ಆದಾಯ ಶ್ರೇಣಿಯು 2014 ರಲ್ಲಿ ಇದ್ದ 1.5 - 5 ಲಕ್ಷ ರೂ.ಗಳಿಂದ 2024 ರಲ್ಲಿ 2.5 - 10 ಲಕ್ಷ ರೂ.ಗೆ ಬದಲಾಗಿದೆ ಎಂದು ಗ್ರಾನ್ಯುಲರ್ ವಿಶ್ಲೇಷಣೆ ಹೇಳಿದೆ. 2024ರಲ್ಲಿ ಸಲ್ಲಿಕೆಯಾದ ಒಟ್ಟು ಆದಾಯ ತೆರಿಗೆ ರಿಟರ್ನ್ಸ್ 7.3 ಕೋಟಿಯಿಂದ 8.6 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ ಒಟ್ಟು 6.89 ಕೋಟಿ ಅಥವಾ ಶೇಕಡಾ 79 ರಷ್ಟು ರಿಟರ್ನ್ಸ್ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ಸಲ್ಲಿಕೆಯಾಗಿವೆ.

2025ರ ಮೌಲ್ಯಮಾಪನ ವರ್ಷದಲ್ಲಿ 7.3 ಕೋಟಿ ಐಟಿಆರ್​ಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಲಾಗಿದ್ದು, ಮಾರ್ಚ್ 2025 ರವರೆಗೆ ಉಳಿದ ಹಣಕಾಸು ವರ್ಷದಲ್ಲಿ ಇನ್ನೂ 2.0 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಮೌಲ್ಯಮಾಪನ ವರ್ಷ 2025 ರಲ್ಲಿ, ನಿಗದಿತ ದಿನಾಂಕದ ನಂತರ ಸಲ್ಲಿಕೆಯಾಗುವ ಐಟಿ ರಿಟರ್ನ್​ಗಳ ಪಾಲು ಸುಮಾರು 18-19 ಪ್ರತಿಶತಕ್ಕೆ ಇಳಿಯಬಹುದು.

"ಇದು ತೆರಿಗೆ ಪಾವತಿದಾರರಲ್ಲಿನ ಶಿಸ್ತನ್ನು ತೋರಿಸುತ್ತದೆ. ಇದು ತೆರಿಗೆದಾರರಿಗೆ ಯಾವುದೇ ತೊಂದರೆಯಾಗದಂತೆ ಡಿಜಿಟಲ್-ಹೆವಿ ಫೈಲಿಂಗ್, ಪರಿಶೀಲನೆ ಮತ್ತು ರಿಟರ್ನ್ ಆರ್ಕಿಟೆಕ್ಚರ್ ಗಳ ಮೂಲಕ ಐಟಿ ಫಾರ್ಮಗಳು ಮತ್ತು ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಿದ ಸಿಬಿಡಿಟಿಯ ನಿರಂತರ ಪ್ರಯತ್ನಗಳ ಫಲವಾಗಿದೆ" ಎಂದು ಎಸ್​ಬಿಐ ವರದಿ ತಿಳಿಸಿದೆ.

ಒಟ್ಟಾರೆಯಾಗಿ, 2015 ಕ್ಕೆ ಹೋಲಿಸಿದರೆ 2024 ರಲ್ಲಿ 5.1 ಕೋಟಿ ಹೆಚ್ಚು ಐಟಿಆರ್ಗಳನ್ನು ಸಲ್ಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಹೆಚ್ಚಳ ದಾಖಲಾಗಿದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಸಣ್ಣ ರಾಜ್ಯಗಳಾದ ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಕಳೆದ ಒಂಬತ್ತು ವರ್ಷಗಳಲ್ಲಿ ಐಟಿಆರ್​ನಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಹೆಚ್ಚಳವನ್ನು ದಾಖಲಿಸಿವೆ ಎಂದು ವರದಿ ತೋರಿಸಿದೆ.

ಇದನ್ನೂ ಓದಿ : ₹1.25 ಲಕ್ಷಕ್ಕೆ ತಲುಪಬಹುದು ಒಂದು ಕೆಜಿ ಬೆಳ್ಳಿ ದರ: ಸಮೀಕ್ಷಾ ವರದಿಯಲ್ಲಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.