ETV Bharat / business

ಅದ್ಭುತ​! ಈ ಒಂದೇ ಒಂದು ಟಿಕೆಟ್​​ ಖರೀದಿಸಿದರೆ ಸಾಕು: 56 ದಿನಗಳ ಕಾಲ ರೈಲಿನಲ್ಲಿ ದೇಶ ಸುತ್ತಬಹುದು; ಟಿಕೆಟ್​ ದರ ಎಷ್ಟು ಗೊತ್ತಾ? - Circular Journey Ticket Advantages

author img

By ETV Bharat Karnataka Team

Published : Jun 24, 2024, 9:24 AM IST

Circular Journey Ticket Advantages: ಕೇವಲ ಈ ಒಂದು ಟಿಕೆಟ್​ ಖರೀದಿಸಿ 56 ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸಬಹುದಾದ ಪ್ಲಾನ್​ವೊಂದನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಯಾವುದು ಆ ಪ್ಲಾನ್​ ಮತ್ತು ದರ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಭಾರತೀಯ ರೈಲ್ವೆ
ಭಾರತೀಯ ರೈಲ್ವೆ (ETV Bharat)

ಪ್ರತಿದಿನ ಕೋಟ್ಯಂತರ ಜನರು ಭಾರತೀಯ ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ. ದೂರದ ಊರುಗಳಿಗೆ ಪ್ರಯಾಣಿಸಿಲು ಹೆಚ್ಚಿನ ಜನರು ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ ಕಡಿಮೆ ವೆಚ್ಚದೊಂದಿಗೆ ಹೆಚ್ಚಿನ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಆದಾಗ್ಯೂ, ರೈಲಿನಲ್ಲಿ ಪ್ರಯಾಣಿಸಬೇಕಾದಾಗ ನಾವು ನಿರ್ದಿಷ್ಟ ಸ್ಥಳ ಅಥವಾ ಊರುಗಳಿಗೆ ತೆರಳಲು ಟಿಕೆಟ್​ಗಳನ್ನು ಬುಕ್ ಮಾಡಿಕೊಳ್ಳುತ್ತೇವೆ ಅಥವಾ ಖರೀದಿಸುತ್ತೇವೆ.

ಒಂದು ವೇಳೆ ರೈಲಿನಲ್ಲೇ ಹೆಚ್ಚಿನ ಸ್ಥಳಗಳು ಅಥವಾ ಊರುಗಳಿಗೆ ಭೇಟಿ ನೀಡಲು ಬಯಸಿದರೆ, ಆಯಾ ಸ್ಟೇಷನ್​ಗಳಿಂದ ನಿರ್ದಿಷ್ಟ ಸ್ಥಳಗಳಿಗೆ ಟಿಕೆಟ್​ಗಳನ್ನು ಖರೀದಿಸಬೇಕಾಗುತ್ತದೆ. ಅಂದರೆ ಪ್ರವಾಸಿಗರು ಸ್ಟೇಷನ್​ಗಳಲ್ಲಿ ಇಳಿದು ಮತ್ತೆ ಅಲ್ಲಿಂದ ಟಿಕೆಟ್​ ಖರೀದಿ ಮಾಡುವುದು ಅಥವಾ ಮೊಬೈಲ್​ನಲ್ಲಿ ಬುಕ್​ ಮಾಡಿಕೊಳ್ಳಬೇಕಾಗುತ್ತದೆ. ಇದು ಕೊಂಚ ಶ್ರಮದ ಕೆಲಸ ಎಂದೆನಿಸುತ್ತದೆ. ಆದರೆ ಈ ಸಮಸ್ಯೆಗೂ ಪರಿಹಾರ ಇದೆ.

ಹೌದು ಭಾರತೀಯ ರೈಲ್ವೆ ಇಲಾಖೆಯೂ ರೈಲಿನಲ್ಲಿ ವಿವಿಧ ಊರುಗಳಿಗೆ ಸುಲಭವಾಗಿ ಪ್ರಯಾಣಿಸಲೆಂದೇ "ಸರ್ಕ್ಯೂಲರ್ ಜರ್ನಿ ಟಿಕೆಟ್" ಪ್ಲಾನ್​ ಅನ್ನು ಜಾರಿಗೆ ತಂದಿದೆ. ಒಮ್ಮೆ ನೀವು ಈ ಟಿಕೆಟ್​ ಖರೀದಿಸಿದರೇ ಸಾಕು, 56 ದಿನಗಳವರೆಗೆ ರೈಲಿನಲ್ಲಿ ದೇಶದ ಉದ್ದಗಲಕ್ಕೂ ಪ್ರಯಾಣಿಸಬಹುದಾಗಿದೆ. ಹಾಗಾದ್ರೆ ಏನಿದು ಟಿಕೆಟ್​? ಅದನ್ನು ಬುಕ್ ಮಾಡುವುದು ಹೇಗೆ? ಬೆಲೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಎಂಬ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಸುದ್ದಿಯಲ್ಲಿದೆ.

ಸರ್ಕ್ಯೂಲರ್ ಜರ್ನಿ ಟಿಕೆಟ್ ಅನ್ನು ಯಾವುದೇ ಕ್ಲಾಸ್​ ( ಉದಾ: ಎಸಿ, ಸ್ಲೀಪರ್​, ಸಾಮಾನ್ಯ ದರ್ಜೆ)ನಲ್ಲಿ ಖರೀದಿಸಬಹುದಾಗಿದೆ. ಈ ಟಿಕೆಟ್ ಗರಿಷ್ಠ 8 ಪ್ರಯಾಣಗಳನ್ನು ಒಳಗೊಂಡಿರಲಿದೆ. ಅಂದರೆ ನೀವು ಒಂದು ಸ್ಥಳದಿಂದ ಪ್ರಯಾಣವನ್ನು ಪ್ರಾಂಭಿಸಿದರೆ 56 ದಿನಗಳ ಕಾಲ ದೇಶದ ಯಾವುದೇ ಭಾಗಕ್ಕಾದರೂ ಭೇಟಿ ನೀಡಬಹುದಾಗಿದೆ. ಮತ್ತು ಹಿಂತಿರುಗಬಹುದಾಗಿದೆ. ಆದಾಗ್ಯೂ.. ನೀವು ನಡುವೆ ಇಳಿಯುವ ನಿಲ್ದಾಣಗಳ ಸಂಖ್ಯೆ 8 ಮೀರಬಾರದು ಎಂಬುದನ್ನು ನೆನಪಿನಲ್ಲಿಡಿ.

ಉದಾಹರಣೆಗೆ: ನೀವು ಬೆಂಗಳೂರಿನಿಂದ ನಿಂದ ತಿರುಪತಿ, ಹೈದರಾಬಾದ್‌ ಮತ್ತು ಚೆನ್ನೈಗೆ ಟಿಕೆಟ್ ತೆಗೆದುಕೊಂಡಿದ್ದೀರಿ ಎಂದು ಭಾವಿಸೋಣ. ನಂತರ ಬೆಂಗಳೂರಿನಿಂದ ಆರಂಭವಾದ ನಿಮ್ಮ ಪಯಣ ಹಲವು ನಿಲ್ದಾಣಗಳನ್ನು ದಾಟಿ ತಿರುಪತಿ ತಲುಪಲಿದೆ. ಬಳಿಕ ನೀವು ತಿರುಪತಿಯಲ್ಲಿ ಇಳಿದು.. ಕೆಲವು ದಿನ ಅಲ್ಲೇ ಉಳಿದು ಹತ್ತಿರದ ಸ್ಥಳಗಳನ್ನು ನೋಡಿ.. ಮತ್ತೆ ಹೈದರಾಬಾದ್​ಗೆ ರೈಲು ಹತ್ತಬಹುದು. ಹೈದರಾಬಾದ್​ ತಲುಪಿದ ಮೇಲೆ ಅಲ್ಲಿ ಸ್ವಲ್ಪ ದಿನ ಕಳೆಯಬಹುದು. ಅದಾದ ನಂತರ..ಚೆನ್ನೈಗೆ ಪ್ರಯಾಣ ಬೆಳೆಸಬಹುದು. ಅಲ್ಲಿ ಕೆಲವು ದಿನ ಇದ್ದು. ಆ ಮೇಲೆ ವಾಪಸ್ ಬೆಂಗಳೂರಿಗೆ ಪ್ರಯಾಣಿಸಬಹುದು. ಮೇಲಾಗಿ. ಬೆಂಗಳೂರಿಗೆ ಹಿಂತಿರುಗುವ ದಾರಿಯಲ್ಲಿ ಮಧ್ಯದಲ್ಲೇ ಇಳಿಯಬೇಕಾದರೆ.. ಅಲ್ಲಿಯೇ ಇಳಿಯಬಹುದು. ಅಲ್ಲದೆ, ಆ ಪ್ರದೇಶದಿಂದ ಮತ್ತೆ ಪ್ರಯಾಣವನ್ನು ಮುಂದುವರಿಸಬಹುದು. ಹೀಗೆ.. ಪ್ರಯಾಣದ ಸಮಯದಲ್ಲಿ ಒಟ್ಟು 8 ಸ್ಥಳಗಳಿಂದ ಇಳಿದು ಹತ್ತಲು ಅವಕಾಶ ಇರುತ್ತದೆ. ಜತೆಗೆ ನಿಮ್ಮ ಪ್ರಯಾಣವನ್ನು 56 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ಸರ್ಕ್ಯೂಲರ್ ಜರ್ನಿ ಟಿಕೆಟ್ ಬುಕ್ ಮಾಡುವುದು ಹೇಗೆ?

  • ಈ ಟಿಕೆಟ್‌ಗಳಿಗಾಗಿ ರೈಲ್ವೆ ವಿಭಾಗದ ವಾಣಿಜ್ಯ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು.
  • ಅವರು ನಿಮ್ಮ ರೈಲು ಪ್ರಯಾಣದ ಯೋಜನೆಯನ್ನು ಆಧರಿಸಿ ಟಿಕೆಟ್ ದರವನ್ನು ಲೆಕ್ಕ ಹಾಕುತ್ತಾರೆ ಮತ್ತು ನಿಲ್ದಾಣದ ವ್ಯವಸ್ಥಾಪಕರಿಗೆ ತಿಳಿಸುತ್ತಾರೆ.
  • ನಂತರ.. ನೀವು ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ನೀವು ಸರ್ಕ್ಯೂಲರ್ ಜರ್ನಿ ಟಿಕೆಟ್ ಖರೀದಿಸಬೇಕು. ಅಲ್ಲಿ ನಿಮ್ಮ ವಿರಾಮ ನಿಲ್ದಾಣಗಳನ್ನು ಸಹ ನೀವು ಆಯ್ಕೆ ಮಾಡಬಹುದು. ಅಷ್ಟೆ.. ನಿಮ್ಮ ಸರ್ಕ್ಯುಲರ್ ಜರ್ನಿ ಟಿಕೆಟ್ ನೀಡಲಾಗುತ್ತದೆ.

ಬೆಲೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

  • ಟಿಕೆಟ್‌ನ ಮಾನ್ಯತೆಯ ಅವಧಿ, ಪ್ರಯಾಣದ ದಿನಗಳು ಮತ್ತು ವಿರಾಮ ಪ್ರಯಾಣದ ದಿನಗಳನ್ನು ಗಣನೆಗೆ ತೆಗೆದುಕೊಂಡು ಟಿಕೆಟ್ ದರವನ್ನು ನಿರ್ಧರಿಸಲಾಗುತ್ತದೆ.
  • 400 ಕಿಮೀ ದೂರವನ್ನು 1 ದಿನ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ.. ಪ್ರಯಾಣವಿಲ್ಲದ ದಿನವನ್ನು 200 ಕಿಲೋಮೀಟರ್ ಎಂದು ಲೆಕ್ಕಹಾಕಲಾಗುತ್ತದೆ.
  • ಅಲ್ಲದೆ, ಹಿರಿಯ ನಾಗರಿಕರಿಗೆ ಕನಿಷ್ಠ 1000 ಕಿ.ಮೀ ದೂರ ಕ್ರಮಿಸಿದರೆ ಟಿಕೆಟ್ ದರದಲ್ಲೂ ಸಬ್ಸಿಡಿ ನೀಡಲಾಗುತ್ತದೆ.
  • ಅದೇ ರೀತಿ ಪುರುಷರಿಗೆ 40 ಪ್ರತಿಶತ ರಿಯಾಯಿತಿ ಮತ್ತು ಮಹಿಳೆಯರಿಗೆ 50 ಪ್ರತಿಶತ ರಿಯಾಯಿತಿ ಇರಲಿದೆ.
  • ಈ ಸರ್ಕ್ಯೂಲರ್​ ಟಿಕೆಟ್‌ನಲ್ಲಿ ಪ್ರಯಾಣಿಕರ ಸಹಿ ನಿಖರವಾಗಿರಬೇಕು.
  • ಸಾಮಾನ್ಯ ಟಿಕೆಟ್‌ಗೆ ಹೋಲಿಸಿದರೆ ಇದರ ಬೆಲೆ ಕಡಿಮೆ ಇರಲಿದೆ. ಪ್ರವಾಸಕ್ಕೆ ಹೋಗುವವರಿಗೆ ಈ ಟಿಕೆಟ್ ತುಂಬಾ ಉಪಯುಕ್ತವಾಗಿರಲಿದೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಬರಲಿವೆ ಕೈಗೆಟಕುವ ದರದಲ್ಲಿ 7 ಸೀಟರ್​​ ಕಾರುಗಳು: ಮುಂಬರುವ ತಿಂಗಳಲ್ಲೇ ಈ SUVಗಳು ಲಾಂಚ್​!? - UPCOMING 7 SEATER CARS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.