ETV Bharat / business

ಮೊದಲ ಬಾರಿಗೆ ಕಾರು ಖರೀದಿಸುತ್ತೀರಾ? ಈ ಟಾಪ್ 10 ಫೀಚರ್​ ತಿಳಿಯುವುದು ಒಳ್ಳೆಯದು! - Car Buying Guide

ಕುಟುಂಬಸಹಿತ ಆರಾಮಾಗಿ ಹಾಗು ಸುರಕ್ಷಿತವಾಗಿ ಪ್ರಯಾಣಿಸಲು ಮೊದಲ ಬಾರಿಗೆ ನೀವು ಕಾರು ಖರೀದಿಸಲು ಬಯಸುತ್ತಿದ್ದರೆ, ಈ ಟಾಪ್ 10 ಫೀಚರ್​ಗಳನ್ನು ತಿಳಿಯುವುದೊಳಿತು.

Car Buying Guide
ಕಾರು ಖರೀದಿ ಫೀಚರ್
author img

By ETV Bharat Karnataka Team

Published : Apr 26, 2024, 10:41 PM IST

ನೀವು ಕಾರು ಖರೀದಿಸಲು ಇಚ್ಛಿಸಿದ್ದರೆ ಮೊದಲು ಅದರ ಬಜೆಟ್, ಬಣ್ಣ, ವೈಶಿಷ್ಟ್ಯಗಳು ಇತ್ಯಾದಿಗಳ ಬಗ್ಗೆ ತಿಳಿದಿರಬೇಕು. ಆದರೆ ಅನೇಕರಿಗೆ ಕಾರು ಯಾವ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂಬ ಬಗ್ಗೆ ನಿಖರವಾಗಿ ಗೊತ್ತಿರಲ್ಲ. ಆದ್ದರಿಂದ ಪ್ರತಿ ಕಾರು ಖರೀದಿದಾರರು ಖಂಡಿತವಾಗಿ ಪರಿಶೀಲಿಸಬೇಕಾದ ಟಾಪ್-10 ರೈಡಿಂಗ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.

1. ಎಫ್​ಸಿಡಬ್ಲ್ಯೂ (FCW): ಎಫ್​ಸಿಡಬ್ಲ್ಯೂ ಎಂದರೆ, ಫಾರ್ವರ್ಡ್ ಡಿಕ್ಕಿ ಎಚ್ಚರಿಕೆ ವ್ಯವಸ್ಥೆ. ಇದನ್ನು ನಿಗ್ರಹ ಡಿಕ್ಕಿ ಎಚ್ಚರಿಕೆ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಅಪಘಾತದ ಅವಕಾಶವಿದ್ದರೆ, ಅದು ತಕ್ಷಣವೇ ಚಾಲಕನನ್ನು ದೃಷ್ಟಿ, ಧ್ವನಿ ಮತ್ತು ಸ್ಪರ್ಶದಿಂದ ಎಚ್ಚರಿಸುತ್ತದೆ. ಈ ವ್ಯವಸ್ಥೆಯು ಹಿಂಬದಿಯ ಅಪಘಾತಗಳನ್ನು ಸುಮಾರು ಶೇ.27ರಷ್ಟು ಕಡಿಮೆ ಮಾಡಿದೆ ಎಂದು ಗ್ರಾಹಕರ ವರದಿ ಹೇಳುತ್ತದೆ.

2. ಎಇಬಿ (AEB): ಎಇಬಿ ಎಂದರೆ, ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ. ಪ್ರತಿ ಕಾರು ಈ ವ್ಯವಸ್ಥೆ ಹೊಂದಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಪಘಾತದ ಯಾವುದೇ ಸೂಚನೆಯಿದ್ದರೆ, ಚಾಲಕನ ಸಹಾಯವಿಲ್ಲದೇ ಸ್ವಯಂಚಾಲಿತವಾಗಿ ಬ್ರೇಕ್‌ಗಳು ಬೀಳುತ್ತವೆ. ಇದಲ್ಲದೆ, ಚಾಲಕ ಸಾಕಷ್ಟು ಗಟ್ಟಿಯಾಗಿ ಬ್ರೇಕ್ ಮಾಡದಿದ್ದರೆ, ಇದು ತಾನೇ ಬ್ರೇಕಿಂಗ್ ಬಲವನ್ನು ಹೆಚ್ಚಿಸುತ್ತದೆ. ಎಇಬಿ ವ್ಯವಸ್ಥೆಯು ವಾಹನಗಳು, ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳನ್ನು ಪತ್ತೆ ಮಾಡುತ್ತದೆ. ಅಪಾಯಕಾರಿ ಪರಿಸ್ಥಿತಿ ಎದುರಾದಾಗ ಅಥವಾ ಚಾಲಕನಿಗೆ ಬ್ರೇಕ್ ಹಾಕಲು ಸಾಧ್ಯವಾಗದಿದ್ದಾಗ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶ.

3. ರಿಮೋಟ್ ಸ್ಟಾರ್ಟ್ ವೈಶಿಷ್ಟ್ಯ: ಈ ವ್ಯವಸ್ಥೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ನಾವು ಚಳಿಗಾಲದಲ್ಲಿ ಕಾರಿನೊಳಗೆ ಬಿಸಿ ಅಥವಾ ಬೇಸಿಗೆಯಲ್ಲಿ ತಂಪಾಗಿಸಲು ಬಯಸುತ್ತೇವೆ. ನಾವು ಕಾರಿನೊಳಗೆ ಪ್ರವೇಶಿಸುವ ಮೊದಲು ರಿಮೋಟ್ ಸ್ಟಾರ್ಟ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕು. ಇದು ಹವಾಮಾನಕ್ಕೆ ಅನುಗುಣವಾಗಿ ವಾಹನದ ಒಳಗಿನ ತಾಪಮಾನವನ್ನು ಸರಿಹೊಂದಿಸುತ್ತದೆ.

4. 360 ಡಿಗ್ರಿ ಕ್ಯಾಮೆರಾಗಳು: ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ವಾಹನಗಳಲ್ಲಿ ಕ್ಯಾಮೆರಾಗಳು ಸಾಮಾನ್ಯವಾಗಿದೆ. ಆದರೆ, 360 ಡಿಗ್ರಿ ಕ್ಯಾಮೆರಾಗಳು ಕಡಿಮೆ. ಪಾರ್ಕಿಂಗ್ ಮಾಡುವಾಗ ಇದು ತುಂಬಾ ಉಪಯುಕ್ತವಾಗಲಿದೆ. ಇದರಿಂದ ಸುತ್ತಮುತ್ತಲಿನ ಜನರು ಮತ್ತು ವಸ್ತುಗಳನ್ನು ಗುರುತಿಸಬಹುದು.

5. ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್: ರಾತ್ರಿ ಚಾಲನೆ ಮಾಡುವಾಗ ಆಟೋ ಡಿಮ್ಮಿಂಗ್ ರಿಯರ್​ ವ್ಯೂ ಮಿರರ್​ ವೈಶಿಷ್ಟ್ಯವಾಗಿದೆ. ಇದರಲ್ಲಿ ಫೋಟೋ ಸಂವೇದಕಗಳು ಬೆಳಕನ್ನು ಪತ್ತೆ ಹಚ್ಚುತ್ತವೆ ಮತ್ತು ಅದಕ್ಕೆ ವೋಲ್ಟೇಟ್​ಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತವೆ. ಕಾರಿನ ಮುಂಭಾಗದಿಂದ ಬರುವ ಲೈಟ್‌ಗಿಂತ ಹಿಂದಿನಿಂದ ಬರುವ ಬೆಳಕು ಹೆಚ್ಚು ಇದ್ದರೆ, ಈ ಹಿಂಬದಿಯ ಕನ್ನಡಿ ಮಂದವಾಗುತ್ತದೆ. ಇದರಿಂದಾಗಿ ನಮ್ಮ ಹಿಂದೆ ಬರುವ ವಾಹನಗಳನ್ನು ಸುಲಭವಾಗಿ ಗುರುತಿಸಬಹುದು.

6. ಸಿಟಿಂಗ್​: ಕಾರುಗಳು ಬಿಸಿಯಾದ, ತಂಪಾಗುವ ಮತ್ತು ಗಾಳಿಯಾಡುವ ಆಸನಗಳನ್ನು ಹೊಂದಿರಬೇಕು. ಋತುವಿನ ಆಧಾರದ ಮೇಲೆ ಪ್ರಯಾಣಿಕರಿಗೆ ಸೌಕರ್ಯ ಒದಗಿಸುತ್ತದೆ.

7. ಸ್ಟೀರಿಂಗ್ ವ್ಹೀಲ್ಸ್​: ಶೀತ ಪ್ರದೇಶಗಳಲ್ಲಿ ವಾಸಿಸುವವರು ಹೀಟೆಡ್​ ಸ್ಟೀರಿಂಗ್ ವ್ಹೀಲ್ಸ್​ ಹೊಂದಿರುವ ಕಾರನ್ನು ಪಡೆಯುವುದು ಉತ್ತಮ. ಇವುಗಳೊಂದಿಗೆ ನ್ಯಾವಿಗೇಷನ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ವೈಶಿಷ್ಟ್ಯಗಳನ್ನು ಸಹ ಖಚಿತಪಡಿಸಿಕೊಳ್ಳಬೇಕು.

8. ಆ್ಯಕ್ವಿವ್ ಆ್ಯಂಟಿ ರೋಲ್ ಬಾರ್: ಆ್ಯಕ್ಟಿವ್​ ಆ್ಯಂಟಿ ರೋಲ್ ಬಾರ್​ಗಳು ರೂಟ್ ತಿರುವುಗಳನ್ನು ತೆಗೆದುಕೊಳ್ಳುವಾಗ ಉಪಯುಕ್ತವಾಗಲಿವೆ ಹೆವಿ ಬಾಡಿ ವೆಹಿಕಲ್‌ಗಳು ಮತ್ತು ಹೈ-ರೈಡಿಂಗ್ ಎಸ್‌ಯುವಿಗಳಿಗೆ ಈ ವೈಶಿಷ್ಟ್ಯವು ತುಂಬಾ ಒಳ್ಳೆಯದು.

9. ಪವರ್ ಲಿಫ್ಟಿಂಗ್: ಪವರ್​​ ಲಿಫ್ಟಿಂಗ್ ಉತ್ತಮ ವೈಶಿಷ್ಟ್ಯ. ವಿಶೇಷವಾಗಿ ನಿಮ್ಮ ಕೈಯಲ್ಲಿ ಲಗೇಜ್ ಇದ್ದಾಗ, ಕಾರಿನ ಹಿಂದಿನ ಬಾಗಿಲನ್ನು ತೆರೆಯಲು ಇದನ್ನು ಬಳಸಬಹುದು. ಕೆಲವು ಕಾರುಗಳಲ್ಲಿ 'ಕೀ'ಯ ಮೇಲೆಯೇ ಬಟನ್ ಇರುತ್ತದೆ.

10. ಮತ್ತಷ್ಟು ಫೀಚರ್​ಗಳು: ಎಸಿಯಿಂದ ಡಿಸಿಗೆ ಶಕ್ತಿಯನ್ನು ಪರಿವರ್ತಿಸುವ ಪವರ್ ಇನ್​ವರ್ಟರ್, ವೈಫೈ ಹಾಟ್ ಸ್ಪಾಟ್, ಥರ್ಡ್​​ರೋ ಸೀಟ್​, ಬ್ಲೂಟೂತ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಟಾರ್ಕ್ ವೆಕ್ಟರಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಸಹ ಕಾರಿನಲ್ಲಿ ಖಾತ್ರಿಪಡಿಸಿಕೊಳ್ಳಬೇಕು. ಇದರಿಂದ ನೀವು ಕಾರಿನಲ್ಲಿ ಆರಾಮವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: BMW ಎಲೆಕ್ಟ್ರಿಕ್ ಕಾರು ಬಿಡುಗಡೆ: ಬೆಲೆ 1 ಕೋಟಿಗಿಂತ ಸ್ವಲ್ಪ ಜಾಸ್ತಿ! - BMW Electric Car

ETV Bharat Logo

Copyright © 2024 Ushodaya Enterprises Pvt. Ltd., All Rights Reserved.