ETV Bharat / state

ಎಲೆಕ್ಟ್ರಿಕಲ್ ಶೋ ರೂಂನಲ್ಲಿ ಬೆಂಕಿ ಅವಘಡ: ಯುವತಿ ಸಜೀವ ದಹನ - SALES GIRL BURNT

ಬೆಂಗಳೂರಿನ ಡಾ. ರಾಜ್​ ಕುಮಾರ್​ ರಸ್ತೆಯಲ್ಲಿರುವ ಮೈ ಇವಿ ಸ್ಕೂಟರ್​ ಶೋ ರೂಂನಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದೆ. ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಜೀವವಾಗಿ ದಹನವಾಗಿದ್ದಾರೆ.

fire-accident-at-electric-showroom
ಎಲೆಕ್ಟ್ರಿಕಲ್ ಶೋ ರೂಂನಲ್ಲಿ ಬೆಂಕಿ ಅವಘಡ (ETV Bharat)
author img

By ETV Bharat Karnataka Team

Published : Nov 19, 2024, 8:23 PM IST

Updated : Nov 19, 2024, 10:54 PM IST

ಬೆಂಗಳೂರು : ರಾಜಾಜಿನಗರದ ರಾಜ್‌ಕುಮಾ‌ರ್ ರಸ್ತೆಯಲ್ಲಿರುವ ಮೈಇಎ ಎಲೆಕ್ಟ್ರಿಕಲ್ ಬೈಕ್ ಶೋ ರೂಮ್‌ನಲ್ಲಿ ಮಂಗಳವಾರ ಸಂಜೆ 5.30 ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಕೆನ್ನಾಲಿಗೆಗೆ ಯುವತಿಯೊಬ್ಬರು ಸಜೀವ ದಹನವಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪ್ರಿಯಾ (20) ಭೀಕರ ಅಗ್ನಿಜ್ವಾಲೆಯಲ್ಲಿ ಆಹುತಿಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಪ್ರಿಯಾ ಸಿಲುಕಿಕೊಂಡು ಹೊರಬರಲಾರದೆ ಸಾವನ್ನಪ್ಪಿದ್ದಾರೆ. ಸದ್ಯ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಿಕಲ್ ಶೋ ರೂಂನಲ್ಲಿ ಬೆಂಕಿ ಅವಘಡ (ETV Bharat)

ಶೋ ರೂಮ್‌ನಲ್ಲಿ ನೋಡ ನೋಡುತ್ತಲೇ ಬೆಂಕಿ ಧಗಧಗನೇ ಹೊತ್ತಿ ಉರಿದಿದೆ. ಅಲ್ಲಿದ್ದ ಎಲೆಕ್ಟ್ರಿಕ್ ಬೈಕ್‌ಗಳು ಸುಟ್ಟುಕರಕಲಾಗಿವೆ. ಈ ವೇಳೆ ಶೋ ರೂಮ್‌ನಲ್ಲಿದ್ದ 40ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ 4 ಅಗ್ನಿಶಾಮಕ ವಾಹನಗಳು ಬಂದಿದ್ದು, ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವಘಡದಿಂದ ಡಾ. ರಾಜ್ ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ, ರಾಜಾಜಿನಗರ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಅಷ್ಟರಲ್ಲಿ ಪೊಲೀಸರು ವಾಹನ ಸವಾರರನ್ನು ಮುಂದಕ್ಕೆ ಕಳುಹಿಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು. ಎಲೆಕ್ಟ್ರಿಕಲ್ ಬೈಕ್ ಶೋ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಶೋ ರೂಂನಲ್ಲಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿನ ತನಿಖೆಯಿಂದ ತಿಳಿದು ಬರಬೇಕಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

fire
ಪ್ರಿಯಾ (ETV Bharat)

ಯುವತಿ ತಂದೆಯ ಆಕ್ರಂದನ : ತನ್ನ ಮಗಳು ಬೆಂಕಿಗಾಹುತಿಯಾದ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾ ತಂದೆ ಆರ್ಮುಗಂ, ''ನ. 20ರಂದು ನನ್ನ ಮಗಳ ಹುಟ್ಟುಹಬ್ಬವಿತ್ತು. ಅವಳಿಗೆ ಬಟ್ಟೆ ತರಿಸಿಟ್ಟಿದ್ದೇನೆ. ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಿದ್ದಳು. ಪ್ರತಿದಿನ 7.30 ರೊಳಗೆ ಮನೆಯಲ್ಲಿರುತ್ತಿದ್ದಳು. ನನ್ನ ಮಗಳು ಇದೇ ಶೋ ರೂಂನಲ್ಲಿ ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ನನ್ನ ಸ್ನೇಹಿತ ಶೋ ರೂಂ ಬಳಿ ಬರಲು ತಿಳಿಸಿದ್ದ. ಬಂದಾಗಲೇ ವಿಷಯ ಗೊತ್ತಾಗಿದೆ. ನನ್ನ ಮಗಳು ಎಲ್ಲಿದ್ದಾಳೆ?'' ಎಂದು ಕಣ್ಣೀರಿಟ್ಟಿದ್ದಾರೆ.

''ಎಲೆಕ್ಟ್ರಿಕಲ್ ಬೈಕ್ ಶೋ ರೂಂನಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳು ಕಂಡುಬಂದಿಲ್ಲ. ಹಾಗಾಗಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. 25ಕ್ಕೂ ಹೆಚ್ಚು ಎಲೆಕ್ಟ್ರಿಕಲ್ ಬೈಕ್‌ಗಳು ಸುಟ್ಟುಕರಕಲಾಗಿವೆ. ಈ ಕುರಿತು ತನಿಖೆ ನಂತರ ನಿಖರ ಕಾರಣ ತಿಳಿಯಲಿದೆ'' ಎಂದು ಅಗ್ನಿಶಾಮಕ ದಳ ಉಪನಿರ್ದೇಶಕ ಯೂನಿಸ್ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು, ಪ್ರಯಾಣಿಕರು ಪಾರು - Car Caught Fire

Last Updated : Nov 19, 2024, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.