ನೀವು ಬೈಕ್ ಖರೀದಿಸಲು ಪ್ಲಾನ್ ಮಾಡಿತ್ತಿದ್ದೀರಾ? ಹಾಗಾದ್ರೆ ನಿಮಗೆ ಎರಡು ಆಯ್ಕೆಗಳಿವೆ. ಅವುಗಳೆಂದರೆ, 1- ಗೇರ್ ಹೊಂದಿರುವ ಬೈಕ್‌ಗಳು ಮತ್ತು 2- ಗೇರ್ ಇಲ್ಲದ ಬೈಕ್ಗಳಿವೆ. ನೀವು ಇಷ್ಟಪಡುವುದನ್ನು ಆಯ್ಕೆ ಮಾಡಬಹುದು. ಗೇರ್ ಹೊಂದಿರುವ ಬೈಕ್ ಖರೀದಿಸಲು ತರಬೇತಿ ಅಗತ್ಯವಿದೆ. ಒಂದೇ ರೀತಿಯ ಗೇರ್‌ಗಳಿಲ್ಲದ ಬೈಕ್‌ಗಳನ್ನು ಕಲಿಯುವುದು ತುಂಬಾ ಸುಲಭ. ಇವುಗಳ ಹೊರತಾಗಿ ದ್ವಿಚಕ್ರ ವಾಹನ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ಇನ್ನೂ ಕೆಲವು ಪ್ರಮುಖ ವಿಷಯಗಳಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬೈಕ್ ಖರೀದಿಸಲು ಪ್ರಮುಖ ಸಲಹೆಗಳು:
ಬ್ರಾಂಡ್ ಆಯ್ಕೆ: ದ್ವಿಚಕ್ರ ವಾಹನ ಖರೀದಿಗೆ ಸಾಕಷ್ಟು ಹಣ ವ್ಯಯವಾಗುತ್ತದೆ. ವಾಸ್ತವವಾಗಿ ಇದು ಕೆಲವು ವರ್ಷಗಳವರೆಗೆ ನಿಮಗೆ ಉತ್ತಮ ಸೇವೆ ಲಭಸುತ್ತದೆ. ಹಾಗಾಗಿ ಉತ್ತಮ ಬ್ರಾಂಡ್ ಬೈಕ್ ಆಯ್ಕೆ ಮಾಡುವುದು ಬಹಳ ಮುಖ್ಯ. ಏಕೆಂದರೆ, ಅವದ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಭಾರತದಲ್ಲಿ ಹೀರೋ ಮೋಟೋಕಾರ್ಪ್, ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಟಿವಿಎಸ್, ಮಹೀಂದ್ರಾ, ಕೈನೆಟಿಕ್, ಸುಜುಕಿ ಸೇರಿದಂತೆ ಹಲವು ಕಂಪನಿಗಳ ದ್ವಿಚಕ್ರ ವಾಹನಗಳು ಲಭ್ಯವಿವೆ. ಇವುಗಳಲ್ಲಿ, ಬೈಕ್‌ನ ಹೆಚ್ಚಿನ ಮರುಮಾರಾಟ ಮೌಲ್ಯವನ್ನು ಹೊಂದಿರುವ ಬ್ರ್ಯಾಂಡ್ ಅನ್ನು ಆಯ್ಕೆ ಮಾಡುವುದು ಮುಖ್ಯ.
ಬಜೆಟ್: ದ್ವಿಚಕ್ರ ವಾಹನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ಕನಿಷ್ಠ 60 ಸಾವಿರ ರೂ. ಇಲ್ಲದಿದ್ದರೆ ಹೊಸ ಬೈಕ್ ಖರೀದಿಸಲು ಸಾಧ್ಯವಿಲ್ಲ. ಜನಪ್ರಿಯ ಬ್ರಾಂಡ್ ಬೈಕ್‌ಗಳಾದ ಹೋಂಡಾ, ಟಿವಿಎಸ್, ಮಹೀಂದ್ರಾ ಇತ್ಯಾದಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಸುಲಭವಾಗಿ ಖರೀದಿಸಬಹುದು. ಬಜೆಟ್ ಅನ್ನು ನೀವು ಸ್ವಲ್ಪ ಹೆಚ್ಚು ವಿಸ್ತರಿಸಬಹುದಾದರೆ, ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಬಣ್ಣ ಆಯ್ಕೆಗಳೊಂದಿಗೆ ನಿಮ್ಮ ಆಯ್ಕೆಯ ಬೈಕ್ ಅನ್ನು ಆಯ್ಕೆ ಮಾಡಬಹುದು.
ಮೈಲೇಜ್: ಯಾವುದೇ ವಾಹನವನ್ನು ಖರೀದಿಸುವ ಮೊದಲು, ಅದು ನೀಡುವ ಮೈಲೇಜ್ ಅನ್ನು ಪರಿಶೀಲಿಸಬೇಕು. ಮೈಲೇಜ್ ಎಂದರೆ ವಾಹನವು ಒಂದು ಲೀಟರ್ ಇಂಧನದಲ್ಲಿ ಚಲಿಸಬಹುದಾದ ದೂರ. ಉತ್ತಮ ಬೈಕ್ ಸರಾಸರಿ 35kmpl ನಿಂದ 40kmpl ಮೈಲೇಜ್ ನೀಡುತ್ತದೆ. ಆದರೆ, ಹೆದ್ದಾರಿಗಳಲ್ಲಿ ನೀಡುವ ಮೈಲೇಜ್‌ಗೂ ಗ್ರಾಮೀಣ ಪ್ರದೇಶದ ಮೈಲೇಜ್‌ಗೂ ಬಹಳ ವ್ಯತ್ಯಾಸವಿದೆ ಎಂಬುದನ್ನು ನೀವು ಅರಿತುಕೊಳ್ಳಬೇಕು.
ಇದನ್ನೂ ಓದಿ: ವಿಭಿನ್ನ ಬ್ರ್ಯಾಂಡ್‌ಗಳ ಬೈಕ್ ಓಡಿಸುವ ಕ್ರೇಜ್ ನಿಮಗಿದೆಯೇ?: 5 ಬೆಸ್ಟ್ ಬೈಕ್ ರೆಂಟಲ್ ಆ್ಯಪ್‌ಗಳಿವು - Bike Rental Apps
ನಿಮಗೆ ಸೂಕ್ತವಾದ ಎತ್ತರದ ಬೈಕ್: ಬೈಕನ್ನು ನಿರ್ವಹಿಸಲು ಅದರ ಎತ್ತರವು ನಿಮಗೆ ಸೂಕ್ತವಾಗಿರಬೇಕು. ಆಗ ಮಾತ್ರ ಅಗತ್ಯವಿದ್ದರೆ ಅದನ್ನು ನಿಮ್ಮ ಪಾದಗಳಿಂದ ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ವಾಹನವು ನಿಮಗಿಂತ ಎತ್ತರವಾಗಿದ್ದರೆ ಅದನ್ನು ಚಲಾಯಿಸಲು ಸಹ ಕಷ್ಟವಾಗುತ್ತದೆ.
ತೂಕವೂ ಮುಖ್ಯ: ದ್ವಿಚಕ್ರ ವಾಹನದ ಎತ್ತರದ ಜೊತೆಗೆ, ಅದರ ತೂಕವೂ ಸಹ ನೀವು ನಿಭಾಯಿಸಬಲ್ಲದಾಗಿರಬೇಕು. ಇದಕ್ಕಾಗಿ ನೀವು ಬೈಕ್ ಅನ್ನು ಪರೀಕ್ಷಾರ್ಥ ಸವಾರಿಗಾಗಿ ಕೇಳಬಹುದು. ನೀವು ಆ ಬೈಕ್ ಅನ್ನು ನಿಭಾಯಿಸಬಹುದೇ? ಅಥವಾ ನಿಮಗೆ ಭಾರ ಎನಿಸಿದರೆ, ಕಡಿಮೆ ತೂಕದ ಬೈಕ್ ಆಯ್ಕೆ ಮಾಡಿ.
ಆಟೋ ಸ್ಟಾರ್ಟ್: ಈಗ ಅನೇಕ ಬೈಕ್‌ಗಳು ಗೇರ್ ಮತ್ತು ಗೇರ್‌ಲೆಸ್‌ನಲ್ಲಿ ಬರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅವುಗಳು ಸಾಂಪ್ರದಾಯಿಕ ಕಿಕ್-ಸ್ಟಾರ್ಟ್ ಆಯ್ಕೆ ಜೊತೆಗೆ ಸೆಲ್ಫ್- ಸ್ಟಾರ್ಟ್ ಅಥವಾ ಪುಶ್-ಸ್ಟಾರ್ಟ್ ಆಯ್ಕೆಗಳೊಂದಿಗೆ ಬರುತ್ತವೆ. ಸೆಲ್ಫ್- ಸ್ಟಾರ್ಟ್ನೊಂದಿಗೆ, ಎಂಜಿನ್ ಅನ್ನು ಪ್ರಾರಂಭಿಸಲು ಕೇವಲ ಒಂದು ಬಟನ್ ಅನ್ನು ಒತ್ತಬೇಕಾಗುತ್ತದೆ. ಅಂತಹ ಆಯ್ಕೆಗಳನ್ನು ಹೊಂದಿರುವ ಬೈಕುಗಳನ್ನು ಆಯ್ಕೆ ಮಾಡುವುದು ಉತ್ತಮ.
ಗ್ರಾಹಕರ ವಿಮರ್ಶೆ, ಆನ್-ರೋಡ್ ವಿಮರ್ಶೆ: ಬೈಕ್ ಖರೀದಿಸುವ ಮೊದಲು, ಗ್ರಾಹಕರ ವಿಮರ್ಶೆಗಳನ್ನು ಖಂಡಿತವಾಗಿ ಪರಿಶೀಲಿಸಬೇಕು. ಆಗ ಮಾತ್ರ ವಾಹನದ ಕಾರ್ಯಕ್ಷಮತೆ, ವೈಶಿಷ್ಟ್ಯಗಳು, ನೈಜ-ಸಮಯದ ಮೈಲೇಜ್ ಇತ್ಯಾದಿ ಮಾಹಿತಿ ನಿಮಗೆ ತಿಳಿಯುತ್ತದೆ. ಮತ್ತು ಶೋರೂಮ್ ಮಾರಾಟಗಾರ ನಿಮಗೆ ಹೇಳದ ಇತರ ಹಲವು ವಿಷಯಗಳು ಆನ್-ರೋಡ್ ವಿಮರ್ಶೆಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಸೇವಾ ಕೇಂದ್ರ: ಬೈಕ್ ಖರೀದಿಸುವಾಗ ಆಯಾ ಕಂಪನಿಯ ಸರ್ವೀಸ್ ಸೆಂಟರ್ಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಏಕೆಂದರೆ, ದುರದೃಷ್ಟವಶಾತ್ ಯಾವುದೇ ಅಪಘಾತದ ಸಂದರ್ಭದಲ್ಲಿ, ದ್ವಿಚಕ್ರ ವಾಹನವನ್ನು ದೂರದ ಸೇವೆ ಅಥವಾ ದುರಸ್ತಿ ಕೇಂದ್ರಕ್ಕೆ ಕೊಂಡೊಯ್ಯುವುದು ತುಂಬಾ ಕಷ್ಟ. ಅದಕ್ಕಾಗಿಯೇ ನಿಮ್ಮ ಅನುಕೂಲಕ್ಕಾಗಿ ಕಂಪನಿ ಅಥವಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸೇವಾ ಕೇಂದ್ರವು ನಿಮ್ಮ ಮನೆಯ ಸಮೀಪದಲ್ಲಿ ಇರಬೇಕು.
ನಿರ್ವಹಣಾ ವೆಚ್ಚಗಳು: ವಾಹನವನ್ನು ಖರೀದಿಸಿದ ನಂತರ, ಅದನ್ನು ಉತ್ತಮವಾಗಿ ನಿರ್ವಹಿಸಬೇಕು. ಇದಕ್ಕಾಗಿ ವಾಹನ ಖರೀದಿಸುವಾಗ ಉಚಿತ ಸರ್ವಿಸಿಂಗ್ ಬಗ್ಗೆ ತಿಳಿದುಕೊಳ್ಳಬೇಕು. ವಾಡಿಕೆಯ ಸೇವೆ ಮತ್ತು ಟೆಕ್-ಅಪ್‌ಗಳಿಗೆ ತಗಲುವ ವೆಚ್ಚಗಳ ಬಗ್ಗೆಯೂ ವಿಚಾರಿಸಬೇಕಾಗುತ್ತದೆ.
ಬಿಡಿಭಾಗಗಳ ಲಭ್ಯತೆ: ವಾಹನವನ್ನು ಖರೀದಿಸುವಾಗ, ಅದರ ಬಿಡಿಭಾಗಗಳ ಲಭ್ಯತೆಯ ಬಗ್ಗೆಯೂ ನೀವು ತಿಳಿದಿರಬೇಕು. ಕೆಲವು ಬ್ರಾಂಡ್‌ಗಳು ಅಥವಾ ತಯಾರಕರ ಬಿಡಿ ಭಾಗಗಳು ಸುಲಭವಾಗಿ ಲಭ್ಯವಿರುವುದಿಲ್ಲ. ಹೀಗಾಗಿ ಕಂಪನಿಯ ವಾಹನ ರಿಪೇರಿ ಮಾಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ದ್ವಿಚಕ್ರ ವಾಹನ ಖರೀದಿಸುವ ಮುನ್ನ ಬಿಡಿ ಭಾಗಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಮರು-ಮಾರಾಟದ ಮೌಲ್ಯ: ವಾಹನದ ಮರು-ಮಾರಾಟದ ಮೌಲ್ಯವು ಮುಖ್ಯವಾಗಿ ಅದರ ಬ್ರ್ಯಾಂಡ್ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಉತ್ತಮ ಬ್ರಾಂಡ್ ವಾಹನ ಖರೀದಿಸಿ. ಅಲ್ಲದೆ ಅದರ ಮರುಮಾರಾಟದ ಮೌಲ್ಯವು ಖರೀದಿಸಿದ ವರ್ಷವನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: ನಿಮ್ಮ ಬೈಕ್ ಕಡಿಮೆ ಮೈಲೇಜ್ ನೀಡುತ್ತಿದೆಯೇ? ಈ ಸರಳ ಉಪಾಯಗಳನ್ನು ಅನುಸರಿಸಿ - Bike Mileage Increase Tips