ನವದೆಹಲಿ: ಕಳೆದ ಅವಧಿಯಲ್ಲಿ ಯಾವ ಬೆಳೆ ಹೆಚ್ಚು ಮತ್ತು ಯಾವ ಬೆಳೆ ಕಡಿಮೆ ಆಗಿದೆ ಎಂಬ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. 2023-24ರಲ್ಲಿ ದೇಶದಲ್ಲಿ ತರಕಾರಿ ಉತ್ಪಾದನೆಗಿಂತ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಿದೆ. ತರಕಾರಿಗಳ ಕುಸಿತ ಕಂಡಿದೆ ಎಂದು ಕೃಷಿ ಸಚಿವಾಲಯದ 2023-24ರ ಎರಡನೇ ಮುಂಗಡ ಅಂದಾಜು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರೆ ಸರ್ಕಾರಿ ಮೂಲಗಳಿಂದ ಈ ಅಂಕಿ ಅಂಶವನ್ನು ಸಂಗ್ರಹಿಸಲಾಗಿದೆ. ತರಕಾರಿ ಉತ್ಪಾದನೆಯಲ್ಲಿ ಅದರಲ್ಲೂ ಈರುಳ್ಳಿ ಮತ್ತು ಆಲೂಗಡ್ಡೆಯ ಇಳುವರಿ ಇಳಿಕೆಯಲ್ಲಿ ಹವಾಮಾನದ ಅಂಶಗಳು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ದೇಶದ ತೋಟಗಾರಿಕೆ ಉತ್ಪಾದನೆಯಲ್ಲಿ 2023-24ರಲ್ಲಿ 352.23 ಮಿಲಿಯನ್ ಟನ್ ಅಂದಾಜಿಸಲಾಗಿದೆ. ಇದು 2022-23ರಲ್ಲಿ ಅಂತಿಮ ಅಂದಾಜಿನ ಪ್ರಮಾಣದಲ್ಲಿ 32.51 ಲಕ್ಷ ಟನ್ ಇಳಿಕೆಯನ್ನು ಸೂಚಿಸಿದೆ.
ಹಣ್ಣು, ಜೇನು, ಹೂವು, ತೋಟಗಾರಿಕೆ ಬೆಳೆಗಳು, ಮಸಾಲೆ, ಸುವಾಸನೆ ಮತ್ತು ಔಷಧಿ ಸಸ್ಯಗಳ ಉತ್ಪಾದನೆ ಹೆಚ್ಚಾಗಿದ್ದು, ಇವುಗಳಿಗೆ ಹೋಲಿಕೆ ಮಾಡಿದಾಗ ತರಕಾರಿಗಳನ್ನು ಕಡಿಮೆ ಮಟ್ಟದಲ್ಲಿ ಬೆಳೆಯಲಾಗಿದೆ.
ಹಣ್ಣುಗಳ ಉತ್ಪಾದನೆಯು 112.63 ಮಿಲಿಯನ್ ಟನ್ಗಳಿಗೆ ಮುಟ್ಟುವ ನಿರೀಕ್ಷೆ ಇದೆ. ಅದರಲ್ಲೂ ಬಾಳೆ ಹಣ್ಣು, ನಿಂಬೆ, ಮಾವು ಮತ್ತು ದ್ರಾಕ್ಷಿ ಬೆಳೆ ಹೆಚ್ಚಳ ಕಂಡಿದೆ. ಮತ್ತೊಂದೆಡೆ 2022-23ಕ್ಕೆ ಹೋಲಿಕೆ ಮಾಡಿದಾಗ ಸೇಬು ಮತ್ತು ದಾಳಿಂಬೆ ಉತ್ಪಾದನೆ ಕಡಿಮೆಯಾಗಿದೆ.
ತರಕಾರಿಯು 204.96 ಮಿಲಿಯನ್ ಟನ್ ಉತ್ಪಾದನೆ ಕಂಡಿದೆ. ಅದರಲ್ಲಿ ಸೋರೆಕಾಯಿ, ಹಾಗಲಕಾಯಿ, ಎಲೆಕೋಸು, ಹೂಕೋಸ್, ಕುಂಬಳಕಾಯಿ, ಕ್ಯಾರೆಟ್, ಟೊಮೆಟೊ ಉತ್ಪಾದನೆ ನಿರೀಕ್ಷೆಗಿಂತ ಹೆಚ್ಚಿದೆ. ಅದರಲ್ಲಿ ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ ಮತ್ತಿತರ ತರಕಾರಿಗಳ ಉತ್ಪಾದನೆ ಇಳಿಕೆ ಕಂಡಿದೆ.
2023-24ರಲ್ಲಿ ಈರುಳ್ಳಿ ಉತ್ಪಾದನೆ 242.12 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದಲ್ಲಿ ಈರುಳ್ಳಿ 302.08 ಲಕ್ಷ ಟನ್ ಉತ್ಪಾದನೆಯಾಗಿದ್ದು, ಈ ಬಾರಿ 60 ಲಕ್ಷ ಟನ್ ಕಡಿಮೆಯಾಗಿದೆ.
ದೇಶದಲ್ಲಿ ಆಲೂಗಡ್ಡೆ ಉತ್ಪಾದನೆಯು 2023-24ರಲ್ಲಿ 5677.62 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ 34 ಲಕ್ಷ ಟನ್ ಇಳಿಕೆ ಕಂಡಿದೆ. ಆಲೂಗಡ್ಡೆ ಇಳಿಕೆಗೆ ಕಾರಣ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಇಳುವರಿ ಕಡಿಮೆಯಾಗಿರುವುದು.
2023-24ರಲ್ಲಿ ಟೊಮೆಟೊ ಉತ್ಪಾದನೆ 212.38 ಎಂದು ನಿರೀಕ್ಷಿಸಿದ್ದು, ಕಳೆದ ವರ್ಷ 204.25 ಟನ್ ಉತ್ಪಾದನೆಯಾಗಿದೆ. ಈ ಬಾರಿ ಶೇ 3.98ರಷ್ಟು ಲಕ್ಷ ಟನ್ ಹೆಚ್ಚಳವಾಗಿದೆ. (ಐಎಎನ್ಎಸ್)