ETV Bharat / business

45 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಕ್ಕೆ ಮುಂದಾದ ವೊಡಾಫೋನ್ ಐಡಿಯಾ

ಸಾಲ ಹಾಗೂ ಇಕ್ವಿಟಿ ಲಿಂಕ್ಡ್​ ಸಾಧನಗಳ ಮೂಲಕ ವೊಡಾಫೋನ್ ಐಡಿಯಾ 45 ಸಾವಿರ ಕೋಟಿ ರೂಪಾಯಿ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ.

Vodafone Idea
Vodafone Idea
author img

By ETV Bharat Karnataka Team

Published : Feb 28, 2024, 1:24 PM IST

ನವದೆಹಲಿ: ಈಕ್ವಿಟಿ ಮತ್ತು / ಅಥವಾ ಈಕ್ವಿಟಿ-ಲಿಂಕ್ಡ್ ಸಾಧನಗಳ ಸಂಯೋಜನೆಯ ಮೂಲಕ 20,000 ಕೋಟಿ ರೂ.ಗಳವರೆಗೆ ನಿಧಿ ಸಂಗ್ರಹಿಸಲು ವೊಡಾಫೋನ್ ಐಡಿಯಾ ನಿರ್ಧರಿಸಿದೆ. ಮಂಗಳವಾರ ನಡೆದ ವೊಡಾಫೋನ್ ಐಡಿಯಾ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ನಿಧಿ ಸಂಗ್ರಹಣೆಗೆ ಅನುಮೋದನೆ ನೀಡಲಾಗಿದೆ. ನಿಧಿ ಸಂಗ್ರಹವನ್ನು ಕಾರ್ಯಗತಗೊಳಿಸಲು ಬ್ಯಾಂಕರ್​ಗಳು ಮತ್ತು ಸಲಹೆಗಾರರು ಸೇರಿದಂತೆ ವಿವಿಧ ಮಧ್ಯವರ್ತಿಗಳನ್ನು ನೇಮಿಸಲು ಮಂಡಳಿಯು ಆಡಳಿತ ಮಂಡಳಿಗೆ ಅಧಿಕಾರ ನೀಡಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಗ್ಗೆ ಕಂಪನಿಯು ಏಪ್ರಿಲ್ 2 ರಂದು ತನ್ನ ಷೇರುದಾರರ ಸಭೆ ನಡೆಸಲಿದ್ದು, ಷೇರುದಾರರ ಅನುಮೋದನೆಯ ನಂತರ ಮುಂಬರುವ ತ್ರೈಮಾಸಿಕದಲ್ಲಿ ಈಕ್ವಿಟಿ ನಿಧಿ ಸಂಗ್ರಹವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಈ ಹಿಂದೆ ಬದ್ಧರಾಗಿರುವ ಪ್ರವರ್ತಕರು ಪ್ರಸ್ತಾವಿತ ಈಕ್ವಿಟಿ ಹೆಚ್ಚಳ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಇದಲ್ಲದೆ ಕಂಪನಿಯು ಸಾಲದ ಮೂಲಕ ನಿಧಿ ಸಂಗ್ರಹಣೆಗಾಗಿಯೂ ತನ್ನ ಸಾಲದಾತರೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಈಕ್ವಿಟಿ ಮತ್ತು ಸಾಲದ ಸಂಯೋಜನೆಯ ಮೂಲಕ, ಕಂಪನಿಯು ಸುಮಾರು 45,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಯೋಜಿಸಿದೆ. ಸದ್ಯ ಕಂಪನಿಯು 4,500 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಬ್ಯಾಂಕ್​ ಸಾಲ ಬಾಕಿ ಹೊಂದಿದೆ. ಈಕ್ವಿಟಿ ಮತ್ತು ಡೆಬ್ಟ್ ಫಂಡ್ ಸಂಗ್ರಹದಿಂದ ಬಂದ ಹಣವನ್ನು ಕಂಪನಿಯು ತನ್ನ 4 ಜಿ ವ್ಯಾಪ್ತಿಯ ಗಮನಾರ್ಹ ವಿಸ್ತರಣೆ, 5 ಜಿ ನೆಟ್ ವರ್ಕ್ ರೋಲ್ಔಟ್ ಮತ್ತು ಸಾಮರ್ಥ್ಯ ವಿಸ್ತರಣೆಗಳಿಗಾಗಿ ಬಳಸಲಿದೆ.

ಈ ಹೂಡಿಕೆಗಳು ಕಂಪನಿಯು ತನ್ನ ಸ್ಪರ್ಧಾತ್ಮಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಮತ್ತು ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆಗಳನ್ನು ನೀಡಲು ಸಹಾಯಕವಾಗಲಿದೆ. ಕಳೆದ 10 ತ್ರೈಮಾಸಿಕಗಳಲ್ಲಿ ಕಂಪನಿಯು ತನ್ನ 4 ಜಿ ಚಂದಾದಾರರ ಸಂಖ್ಯೆ ಮತ್ತು ಎಆರ್​ಪಿಯುಗಳನ್ನು ಸತತವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದೆ ಎಂದು ವೊಡಾಫೋನ್ ಐಡಿಯಾ ತಿಳಿಸಿದೆ.

ದೊಡ್ಡ ಪ್ರಮಾಣದಲ್ಲಿ ಬಳಕೆದಾರರನ್ನು ಕಳೆದುಕೊಳ್ಳುತ್ತಿರುವುದು ಪ್ರಸ್ತುತ ವೊಡಾಫೋನ್-ಐಡಿಯಾ ಮುಂದಿರುವ ಅತಿದೊಡ್ಡ ಸವಾಲಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಮಾಸಿಕ ಚಂದಾದಾರರ ವರದಿಗಳ ಪ್ರಕಾರ, ವೊಡಾಫೋನ್-ಐಡಿಯಾ ಚಂದಾದಾರರ ಸಂಖ್ಯೆ 2023 ರ ಡಿಸೆಂಬರ್ ಅಂತ್ಯದ ವೇಳೆಗೆ 223 ಮಿಲಿಯನ್ ಆಗಿದ್ದು, ಇದು ಒಂದು ವರ್ಷದ ಹಿಂದೆ ಇದ್ದ 241.3 ಮಿಲಿಯನ್​ಗೆ ಹೋಲಿಸಿದರೆ ಶೇಕಡಾ 7.5 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಕೊನೆಯ ತಿಂಗಳಲ್ಲಿ ವೊಡಾಫೋನ್ ಐಡಿಯಾ ತನ್ನ ಒಟ್ಟು ಬಳಕೆದಾರರ ಪೈಕಿ 1.37 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ.

ಇದಕ್ಕೆ ಹೋಲಿಸಿದರೆ ಕಳೆದ ವರ್ಷ ಡಿಸೆಂಬರ್​ನಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ ಟೆಲ್ ಕ್ರಮವಾಗಿ 3.99 ಮಿಲಿಯನ್ ಮತ್ತು 1.85 ಮಿಲಿಯನ್ ಹೊಸ ಚಂದಾದಾರರನ್ನು ಪಡೆದುಕೊಂಡಿವೆ. ವೊಡಾಫೋನ್-ಐಡಿಯಾದ ಎರಡು ಪ್ರಮುಖ ಪ್ರತಿಸ್ಪರ್ಧಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ ಟೆಲ್ ಕ್ರಮವಾಗಿ ಪ್ರಸ್ತುತ 459.8 ಮಿಲಿಯನ್ ಮತ್ತು 381.7 ಮಿಲಿಯನ್ ಚಂದಾದಾರರನ್ನು ಹೊಂದಿವೆ.

ಇದನ್ನೂ ಓದಿ : 2021ರ ನಂತರ ಪ್ರಥಮ ಬಾರಿಗೆ $57,000 ದಾಟಿದ ಬಿಟ್​ಕಾಯಿನ್ ಮೌಲ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.