ETV Bharat / bharat

ಯೂಟ್ಯೂಬ್​ ವೀಕ್ಷಣೆ ಹೆಚ್ಚಿಸಲು ಅಡ್ಡದಾರಿ ಹಿಡಿದ ವ್ಯಕ್ತಿ; ಅರಣ್ಯ ಇಲಾಖೆಯಿಂದ ಕೇಸ್​ ದಾಖಲು - forest dept Booked case on youtuber

author img

By PTI

Published : Aug 12, 2024, 12:37 PM IST

ಅಧಿಕ ವೀಕ್ಷಣೆ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಿಡಿಯೋ ಕಂಡ ಅರಣ್ಯಾಧಿಕಾರಿಗಳು ಇದೀಗ ಯೂಟ್ಯೂಬರ್​ ಮೇಲೆ ಪ್ರಕರಣ ದಾಖಲಿಸಿದ್ದಾರೆ

YouTuber Booked For Making Video Featuring Peacock Curry Recipe
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್​ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದ್ದು, ಇದರ ವೀಕ್ಷಣೆ ಹೆಚ್ಚಿಸಲು ಜನರು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಇದೇ ರೀತಿ ಮಾರ್ಗ ಅನುಸರಿಸಿದ ವ್ಯಕ್ತಿಯ ಮೇಲೆ ಇದೀಗ ಪ್ರಕರಣ ದಾಖಲಾಗಿದೆ.

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್​ಪಲ್ಲಿಯಲ್ಲಿ ಯೂಟ್ಯೂಬರ್​​ವೊಬ್ಬರು ವಿವಿಧ ಭಕ್ಷ್ಯಗಳನ್ನು ತಯಾರಿಸಿ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ಇತ್ತೀಚಿಗೆ ನವಿಲು ಸಾರು (ಕರಿ) ವಿಡಿಯೋವನ್ನು ಹಂಚಿಕೊಂಡಿದ್ದರು. ಅಧಿಕ ವೀಕ್ಷಣೆ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಿಡಿಯೋ ಕಂಡ ಅರಣ್ಯಾಧಿಕಾರಿಗಳು ಇದೀಗ ಯೂಟ್ಯೂಬರ್​ ಮೇಲೆ ಪ್ರಕರಣ ದಾಖಲಿಸಿದ್ದು, ಅದರ ಆಧಾರದ ಮೇಲೆ ತನಿಖೆಗೆ ಮುಂದಾಗಿದ್ದಾರೆ.

ಹೇಗೆ ನವಿಲಿನ ಸಾರು ಮಾಡುವುದು ಎಂಬ ವಿಡಿಯೋವನ್ನು ಹಂಚಿಕೊಂಡ ಸಂಬಂಧ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳ ತಂಡ ತಂಗಲ್ಲಪಲ್ಲಿ ಗ್ರಾಮದ ಆತನ ಮನೆಗೆ ಭೇಟಿ ನೀಡಿ, ಅಲ್ಲಿನ ಮಾಂಸದ ಸಾರನ್ನು ವಶಕ್ಕೆ ಪಡೆದಿದ್ದಾರೆ. ಈ ಮಾಂಸದ ಸಾರಿನ ಮಾದರಿಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದು, ಈ ಸಂಬಂಧ ತನಿಖೆಗೆ ಮುಂದಾಗಿದ್ದಾರೆ.

ಪ್ರಾಣಿ ಹಕ್ಕು ಸಂಘಟನೆಗಳು ಈ ವಿಡಿಯೋ ಸಂಬಂಧ ಧ್ವನಿ ಎತ್ತಿದ್ದು, ಇದಾದ ಬಳಿಕ ಈ ವಿಡಿಯೋವನ್ನು ಯೂಟ್ಯೂಬ್​ನಿಂದ ತೆಗೆಯಲಾಗಿದೆ. 1963ರಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲಾಗಿ ಗುರುತಿಸಲಾಗಿದ್ದು, ಅದನ್ನು ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ವಿಧಿ1ರ ಅಡಿಯಲ್ಲಿ ಸಂರಕ್ಷಿತ ಸ್ಥಾನಮಾನವನ್ನು ನೀಡಲಾಗಿದೆ. ಜೊತೆಗೆ ಸೆಕ್ಷನ್​ 51(1-ಅ) ಅನುಸಾರ ನವಿಲನ್ನು ಕೊಲ್ಲುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದ್ದು, ಈ ತಪ್ಪನ್ನು ಎಸಗಿದವರಿಗೆ 7 ವರ್ಷಗಳ ಶಿಕ್ಷೆ ಜೊತೆಗೆ 10 ಸಾವಿರಕ್ಕೆ ಕಡಿಮೆಯಿಲ್ಲದಂತೆ ದಂಡವನ್ನು ವಿಧಿಸಬಹುದಾಗಿದೆ.

ಇದನ್ನೂ ಓದಿ: ಕಾರು -​​ ಲಾರಿ ಅಪಘಾತ: ಐವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.