ETV Bharat / bharat

ಇಂದು ವಿಶ್ವ ಘೇಂಡಾಮೃಗ ದಿನ: ಒಂದು ಇಮೇಲ್​ನಿಂದ ಶುರುವಾಗಿತ್ತು ಈ ವಿಶೇಷ ದಿನಾಚರಣೆ! - World Rhino Day

author img

By ETV Bharat Karnataka Team

Published : 2 hours ago

ಘೇಂಡಾಮೃಗಗಳ ಸಂತತಿ ಅಳಿವಿನಂಚಿಗೆ ಸಾಗುತ್ತಿವೆ. ಇಡೀ ಪ್ರಪಂಚದಲ್ಲಿ ಎಷ್ಟು ಪ್ರಭೇದದ ಘೇಂಡಾಮೃಗಗಳಿವೆ, ಅಳಿದು ಉಳಿದಿರುವ ಘೇಂಡಾಮೃಗಗಳ ಸಂಖ್ಯೆ ಎಷ್ಟು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ.

Representational image
ಸಂಗ್ರಹ ಚಿತ್ರ (Getty Images)

ಹೈದರಾಬಾದ್: ಬೇಟೆ ಮತ್ತು ಕಾಡಿನ ವಿನಾಶಗಳಿಂದಾಗಿ ಘೇಂಡಾಮೃಗಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಘೇಂಡಾಮೃಗಗಳ ಸಂತತಿ ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನವಾದ ಕಾಡುಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಘೇಂಡಾಮೃಗ ದಿನವನ್ನು ಪ್ರತಿ ವರ್ಷ ಸೆಪ್ಟಂಬರ್ 22ರಂದು ಆಚರಿಸಲಾಗುತ್ತದೆ.

2011ರಿಂದ ಘೇಂಡಾಮೃಗ ತಜ್ಞರು ಸೆಪ್ಟೆಂಬರ್ 22ರಂದು ವಿಶ್ವ ಘೇಂಡಾಮೃಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ವಿಶ್ವ ಘೇಂಡಾಮೃಗ ದಿನದಂದು, ಅಂತಾರಾಷ್ಟ್ರೀಯ ಘೇಂಡಾಮೃಗ ಪ್ರತಿಷ್ಠಾನ ಐದು ಪ್ರಭೇದದ ಖಡ್ಗಮೃಗಗಳ ಸಂರಕ್ಷಣೆಗೆ ಈ ದಿನವನ್ನು ಆಚರಿಸುತ್ತಿದೆ.

ವಿಶ್ವ ಘೇಂಡಾಮೃಗ ದಿನವನ್ನು ಮೊದಲ ಬಾರಿಗೆ ಡಬ್ಲ್ಯುಡಬ್ಲ್ಯುಎಫ್ (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್) -ದಕ್ಷಿಣ ಆಫ್ರಿಕಾ 2010ರಲ್ಲಿ ಘೋಷಿಸಿತು. ಮುಂದಿನ ವರ್ಷ, ಆಫ್ರಿಕನ್ ಮತ್ತು ಏಷ್ಯಾದ ಖಡ್ಗಮೃಗಗಳೆರಡನ್ನೂ ಒಳಗೊಂಡ ವಿಶ್ವ ಘೇಂಡಾಮೃಗ ದಿನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಿತು.

ಈ ದಿನ ಪ್ರಾರಂಭವಾಗಿದ್ದು ಒಂದು ಇಮೇಲ್​ನಿಂದ!: 2011ರಲ್ಲಿ, ಲಿಸಾ ಜೇನ್ ಕ್ಯಾಂಪ್‌ಬೆಲ್ ಎಂಬ ಮಹಿಳೆ ಘೇಂಡಾಮೃಗ ಪ್ರೇಮಿಯಾದ ರಿಶ್ಜಾಗೆ ಮೇಲ್ ಬರೆದು ಪ್ರಪಂಚದಲ್ಲಿರುವ ಕನಿಷ್ಠ ಐದು ಪ್ರಭೇದದ ಘೇಂಡಾಮೃಗಗಳನ್ನು ಜೀವಂತವಾಗಿ ನೋಡುವ ಬಯಕೆ ವ್ಯಕ್ತಪಡಿಸಿದ್ದರು. ಇದು ಮುಂದೆ ವಿಶ್ವ ಘೇಂಡಾಮೃಗ ದಿನಕ್ಕೆ ನಾಂದಿಯಾಯಿತು ಮತ್ತು ವಿವಿಧ ದೇಶಗಳ ಜನರು ಪ್ರತಿವರ್ಷ ಈ ದಿನಾಂಕದಂದು ವಿಶ್ವ ಘೇಂಡಾಮೃಗ ದಿನಾಚರಿಸಲು ಪ್ರಾರಂಭಿಸಿದರು.

ಘೇಂಡಾಮೃಗ ಅಥವಾ ಖಡ್ಗಮೃಗದ ಕುಟುಂಬಗಳು:

ಸುಮಾತ್ರನ್ ಖಡ್ಗಮೃಗಗಳು: ಸುಮಾತ್ರನ್ ಖಡ್ಗಮೃಗಗಳು ಜೀವಂತವಿರುವ ಖಡ್ಗಮೃಗಗಳಲ್ಲಿ ಅತ್ಯಂತ ಚಿಕ್ಕದು ಮತ್ತು ಎರಡು ಕೊಂಬುಗಳನ್ನು ಹೊಂದಿರುವ ಏಕೈಕ ಏಷ್ಯನ್ ಖಡ್ಗಮೃಗವಾಗಿದೆ. ಸುಮಾತ್ರನ್ ಖಡ್ಗಮೃಗವು ಒಂದು ಕಾಲದಲ್ಲಿ ಮ್ಯಾನ್ಮಾರ್, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಚೀನಾದ ಮೂಲಕ ಭೂತಾನ್ ಮತ್ತು ಪೂರ್ವ ಭಾರತದ ಪೂರ್ವ ಹಿಮಾಲಯದ ತಪ್ಪಲಿನವರೆಗೆ ಸಂಚರಿಸುತ್ತಿದ್ದವು. ಪ್ರಸ್ತುತ ಈ ಪ್ರಭೇದವು ಇಂಡೋನೇಷ್ಯಾದ ಸುಮಾತ್ರಾ ಮತ್ತು ಬೊರ್ನಿಯೊ ದ್ವೀಪಗಳಲ್ಲಿ ಮಾತ್ರ ಉಳಿದಿದೆ.

ಕಪ್ಪು ಖಡ್ಗಮೃಗಗಳು: ಕಪ್ಪು ಮತ್ತು ಬಿಳಿ ಖಡ್ಗಮೃಗಗಳಲ್ಲಿ, ಕಪ್ಪು ಖಡ್ಗಮೃಗಗಳು ಆಫ್ರಿಕನ್ ಖಡ್ಗಮೃಗ ಪ್ರಭೇದಗಳಲ್ಲಿ ಚಿಕ್ಕದಾಗಿದೆ. ಕಪ್ಪು ಮತ್ತು ಬಿಳಿ ಖಡ್ಗಮೃಗಗಳನ್ನು ಅವುಗಳ ತುಟಿಗಳ ಆಕಾರದಿಂದ ಸುಲಭವಾಗಿ ಗುರುತಿಸಬಹುದು. ಸದ್ಯ 6 ಸಾವಿರಕ್ಕೂ ಕಪ್ಪು ಖಡ್ಗಮೃಗಗಳಿವೆ.

ಬಿಳಿ ಖಡ್ಗಮೃಗಗಳು: ಬಿಳಿ ಖಡ್ಗಮೃಗಗಳು ಎರಡನೇ ಅತಿದೊಡ್ಡ ಭೂ ಸಸ್ತನಿಗಳಾಗಿವೆ ಮತ್ತು ಅವುಗಳ ಹೆಸರು ಪಶ್ಚಿಮ ಜರ್ಮಾನಿಕ್ ಭಾಷೆಯ 'ವೈಟ್' ಎಂಬ ಪದದಿಂದ ಬಂದಿದೆ, 'ವೈಟ್' ಎಂದರೆ ಅಗಲ ಮತ್ತು ಪ್ರಾಣಿಗಳ ಬಾಯಿಯನ್ನು ಸೂಚಿಸುತ್ತದೆ.

ಜಾವನ್ ಖಡ್ಗಮೃಗಗಳು: ಐದು ಖಡ್ಗಮೃಗಗಳ ಪ್ರಭೇದದಲ್ಲಿ ಜಾವಾನ್ ಖಡ್ಗಮೃಗಗಳು ಅಳಿವಿನಂಚಿನಲ್ಲಿವೆ. ಇವು ಇಂಡೋನೇಷ್ಯಾದ ಜಾವಾದಲ್ಲಿನ ಉಜುಂಗ್ ಕುಲೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುತ್ತವೆ. ಜಾವಾನ್ ಖಡ್ಗಮೃಗಗಳು ಒಂದಾನೊಂದು ಕಾಲದಲ್ಲಿ ಈಶಾನ್ಯ ಭಾರತ ಮತ್ತು ಆಗ್ನೇಯ ಏಷ್ಯದಾದ್ಯಂತ ವಾಸಿಸುತ್ತಿದ್ದವು.

ಒಂದು ಕೊಂಬಿನ ಖಡ್ಗಮೃಗ: ಏಕ ಕೊಂಬಿನ ಖಡ್ಗಮೃಗ ಅಥವಾ 'ಭಾರತೀಯ ಘೇಂಡಾಮೃಗ' ಘೇಂಡಾಮೃಗ ಪ್ರಭೇದದಲ್ಲೇ ಅತ್ಯಂತ ದೊಡ್ಡದಾಗಿದೆ. ಒಂದು ಕಾಲದಲ್ಲಿ ಭಾರತೀಯ ಉಪಖಂಡದ ಇಡೀ ಉತ್ತರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಇವುಗಳ ಸಂಖ್ಯೆ ಬೇಟೆಯಿಂದ ಕುಸಿದಿದೆ. ಪ್ರಸ್ತುತ ಈಶಾನ್ಯ ಭಾರತ ಮತ್ತು ನೇಪಾಳದ ತೇರೈ ಹುಲ್ಲುಗಾವಲುಗಳಲ್ಲಿ ಸುಮಾರು 4 ಸಾವಿರ ಏಕ ಕೊಂಬಿನ ಘೇಂಡಾಮೃಗಗಳಿವೆ.

2024ರ ವರದಿಯಂತೆ ಘೇಂಡಾಮೃಗದ ಸ್ಥಿತಿಗತಿ: ಪ್ರತಿ ಸೆಪ್ಟಂಬರ್‌ನಲ್ಲಿ, ಇಂಟರ್ನ್ಯಾಷನಲ್ ರೈನೋ ಫೌಂಡೇಶನ್ (IRF) ತಮ್ಮ ವರದಿಯನ್ನು ಪ್ರಕಟಿಸುತ್ತದೆ. ಆಫ್ರಿಕಾ ಹಾಗೂ ಏಷ್ಯಾದಲ್ಲಿ ಉಳಿದಿರುವ ಐದು ಘೇಂಡಾಮೃಗಗಳ ಅಂದಾಜು ಸಂಖ್ಯೆ, ಪ್ರವೃತ್ತಿಗಳು, ಎಲ್ಲೆಲ್ಲಿವೆ, ಪ್ರಮುಖ ಸವಾಲುಗಳು ಮತ್ತು ಸಂರಕ್ಷಣೆ ಬೆಳವಣಿಗೆಗಳನ್ನು ಒಳಗೊಂಡಂತಹ ಸ್ಟೇಟ್​ ಆಫ್​ ದಿ ರೈನೋ ವರದಿ ಪ್ರಕಟಿಸುತ್ತದೆ.

2024ರ ವರದಿಯ ಮುಖ್ಯಾಂಶಗಳು:

  • ಎಲ್ಲ ಐದು ಪ್ರಭೇದಗಳನ್ನು ಒಟ್ಟುಗೂಡಿಸಿ, ಪ್ರಪಂಚದಲ್ಲಿ ಕೇವಲ 28,000 ಘೇಂಡಾಮೃಗಗಳು ಉಳಿದಿವೆ.
  • 2022ರಿಂದ 2023ರವರೆಗೆ ಆಫ್ರಿಕಾದಲ್ಲಿ ಘೇಂಡಾಮೃಗಗಳ ಬೇಟೆ ಶೇ 4ರಷ್ಟು ಹೆಚ್ಚಾಗಿದೆ. 2023 ರಲ್ಲಿ ಪ್ರತಿ 15 ಗಂಟೆಗಳಿಗೊಮ್ಮೆ ಎಂಬಂತೆ ಕನಿಷ್ಠ 586 ಆಫ್ರಿಕನ್ ಘೇಂಡಾಮೃಗಗಳನ್ನು ಬೇಟೆಯಾಡಲಾಗಿದೆ.
  • ಹಲವಾರು ಪ್ರದೇಶಗಳಲ್ಲಿ ಘೇಂಡಾಮೃಗಗಳ ಸಂಖ್ಯೆ ಅಭಿವೃದ್ಧಿ ಹೊಂದುತ್ತಿದ್ದರೆ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಹ್ಲುಹ್ಲುವೆ ಇಂಫೋಲೊಜಿ ಪಾರ್ಕ್‌ನಲ್ಲಿ ಭಾರಿ ಬೇಟೆಯಾಡುವಿಕೆಯಿಂದಾಗಿ ಒಟ್ಟು ಕಪ್ಪು ಘೇಂಡಾಮೃಗಗಳ ಸಂಖ್ಯೆ ಕಳೆದ ವರ್ಷದಲ್ಲಿ ಸ್ವಲ್ಪ ಕಡಿಮೆಯಾಗಿದೆ.
  • ಬೇಟೆ ಪ್ರಮಾಣ ಹೆಚ್ಚಾಗಿದ್ದರೂ ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಘೇಂಡಾಮೃಗಗಳ ಸಂಖ್ಯೆ ಹೆಚ್ಚುತ್ತಿದೆ.
  • ದೊಡ್ಡ ಒಂದು ಕೊಂಬಿನ ಘೇಂಡಾಮೃಗಗಳು ಸುಧಾರಿತ ಆವಾಸಸ್ಥಾನಗಳು ಮತ್ತು ವನ್ಯಜೀವಿ ಕಾರಿಡಾರ್‌ಗಳನ್ನು ಬಳಸಿಕೊಳ್ಳುತ್ತಿವೆ.
  • ವೇ ಕಂಬಾಸ್ ರಾಷ್ಟ್ರೀಯ ಉದ್ಯಾನವನದ ಸುಮಾತ್ರನ್ ಘೇಂಡಾಮೃಗ ಅಭಯಾರಣ್ಯದಲ್ಲಿ 2023ರ ಸೆಪ್ಟಂಬರ್​ ಹಾಗೂ ನವೆಂಬರ್​ನಲ್ಲಿ ಎರಡು ಘೇಂಡಾಮೃಗ ಮರಿಗಳು ಜನಿಸಿವೆ.
  • ಜುಲೈ 2023ರಿಂದ, ಇಂಡೋನೇಷ್ಯಾದ ಅಧಿಕಾರಿಗಳು ಜಾವಾನ್ ಘೇಂಡಾಮೃಗ ಬೇಟೆಯಾಡುವ ಗುಂಪುಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. 2019ರಿಂದ 2023ರವರೆಗೆ ಉಜುಂಗ್ ಕುಲೋನ್ ರಾಷ್ಟ್ರೀಯ ಉದ್ಯಾನದಲ್ಲಿ 26 ಘೇಂಡಾಮೃಗಗಳನ್ನು ಕೊಂದಿರುವುದಾಗಿ ಈ ಗುಂಪು ಒಪ್ಪಿಕೊಂಡಿದೆ.

ಘೇಂಡಾಮೃಗಗಳ ಏಕೆ ಮುಖ್ಯ?: ಖಡ್ಗಮೃಗಗಳ ಆವಾಸ ಸ್ಥಾನಗಳಲ್ಲಿ ಅಮೂಲ್ಯ ಸಸ್ಯಗಳು ಮತ್ತು ಪ್ರಾಣಿಗಳೊಂದಿಗೆ ಹಂಚಿಕೊಳ್ಳುತ್ತವೆ. ನಾವು ಹೆಚ್ಚು ಒಂದು ಕೊಂಬಿನ ಘೇಂಡಾಮೃಗಗಳನ್ನು ರಕ್ಷಿಸಿದಾಗ, ಇತರ ಪ್ರಭೇದದ ಪ್ರಾಣಿ, ಸಸ್ಯಗಳನ್ನು ರಕ್ಷಿಸಲು ಸಹಾಯ ಮಾಡಿದಂತಾಗುತ್ತದೆ. ಈ ಖಡ್ಗಮೃಗಗಳು ಕಂಡುಬರುವ ದೇಶಗಳು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿವೆ. ಇದು ಸ್ಥಳೀಯ ಪರಿಸರ ಸಮತೋಲನವನ್ನು ಪ್ರೇರೇಪಿಸುತ್ತದೆ. ಅದಲ್ಲದೆ ಘೇಂಡಾಮೃಗ ಪರಿಸರ ಪ್ರವಾಸೋದ್ಯಮದ ಮೂಲಕ ಆದಾಯವನ್ನೂ ತಂದುಕೊಡುತ್ತದೆ.

ಕೆಲವು ಉದ್ಯಾನವನಗಳಲ್ಲಿ ಖಡ್ಗಮೃಗಗಳ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯಿಂದಾಗಿ ಕಡಿಮೆ ಸಂತಾನೋತ್ಪತ್ತಿ ದರಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಮೆಕ್ಕಲು ಬಯಲು ಹುಲ್ಲುಗಾವಲುಗಳ ಕಣ್ಮರೆಯಾಗಿರುವುದು ಘೇಂಡಾಮೃಗಗಳ ಶ್ರೇಣಿಯಲ್ಲಿನ ಅಗಾಧ ಕುಂಠಿತಕ್ಕೆ ಕಾರಣವಾಗಿದೆ. ಇಂದು, ಬೆಳೆಯುತ್ತಿರುವ ಮಾನವ ಜನಸಂಖ್ಯೆಗೆ ಬೇಕಾಗಿರುವ ಭೂಮಿಯ ಅಗತ್ಯತೆ, ಇತರ ಪ್ರಾಣಿ ಪ್ರಭೇದಗಳ ಮೇಲೆ ಪರಿಣಾಮ ಬೀರುವ ಭಯವನ್ನುಂಟು ಮಾಡುತ್ತಿದೆ. ಈಗಾಗಲೇ ಘೇಂಡಾಮೃಗಗಳು ವಾಸಿಸುವ ಅನೇಕ ಸಂರಕ್ಷಿತ ಪ್ರದೇಶಗಳವರೆಗೆ, ಮಾನವರ ಹೆಜ್ಜೆಗುರುತುಗಳು ತಲುಪಿವೆ. ಇದು ಮಾನವ-ಘೇಂಡಾಮೃಗ ಸಂಘರ್ಷಕ್ಕೆ ಕಾರಣವಾಗುತ್ತದೆ. ಏಕೆಂದರೆ ಘೇಂಡಾಮೃಗಗಳು ಸಂರಕ್ಷಿತ ಪ್ರದೇಶಗಳ ಗಡಿಯನ್ನು ದಾಟಿ ಮೇವಿಗಾಗಿ ಸುತ್ತಮುತ್ತಲಿನ ಹಳ್ಳಿಗಳಿಗೆ ನುಗ್ಗುತ್ತವೆ. ಭಾರತ ಮತ್ತು ನೇಪಾಳದಲ್ಲಿ ಘೇಂಡಾಮೃಗಗಳು ಪ್ರತಿ ವರ್ಷ ಹಲವಾರು ಜನರನ್ನು ಕೊಲ್ಲುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.

ಭಾರತೀಯ ಘೇಂಡಾಮೃಗಗಳ ಸ್ಥಿತಿ: ಭಾರತದಲ್ಲಿ ಪ್ರಾಥಮಿಕವಾಗಿ ಹಿಮಾಲಯ ಮತ್ತು ಬ್ರಹ್ಮಪುತ್ರ ಮತ್ತು ಗಂಗಾ ಕಣಿವೆಯ ತಪ್ಪಲಿನಲ್ಲಿರುವ ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳು ಖಡ್ಗಮೃಗಗಳ ಆವಾಸಸ್ಥಾನಗಳಾಗಿದ್ದವು. ಹಿಂದೆ ಬ್ರಹ್ಮಪುತ್ರ ಮತ್ತು ಗಂಗಾ ಕಣಿವೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದ ಘೇಂಡಾಮೃಗಗಳು ಪ್ರಸ್ತುತ, ಇಂಡೋ-ನೇಪಾಳ, ಪಶ್ಚಿಮ ಬಂಗಾಳದ ಉತ್ತರ ಭಾಗಗಳು ಮತ್ತು ಅಸ್ಸಾಂನ ಸಣ್ಣ ಜಾಗಗಳಿಗೆ ಸೀಮಿತಗೊಂಡಿದೆ.

ಭಾರತದೊಳಗೆ, ಖಡ್ಗಮೃಗಗಳು ಮುಖ್ಯವಾಗಿ ಏಳು ಸಂರಕ್ಷಿತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನ, ಪೊಬಿತಾರಾ ಡಬ್ಲ್ಯುಎಲ್‌ಎಸ್, ಒರಾಂಗ್ ರಾಷ್ಟ್ರೀಯ ಉದ್ಯಾನ, ಅಸ್ಸಾಂನ ಮನಸ್ ರಾಷ್ಟ್ರೀಯ ಉದ್ಯಾನ, ಪಶ್ಚಿಮ ಬಂಗಾಳದ ಜಲ್ದಪರ ರಾಷ್ಟ್ರೀಯ ಉದ್ಯಾನ ಮತ್ತು ಗೊರುಮಾರಾ ರಾಷ್ಟ್ರೀಯ ಉದ್ಯಾನ ಮತ್ತು ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನ. ಇದರ ಜೊತೆಗೆ, ಉತ್ತರ ಪ್ರದೇಶದ ಕಟರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯ (WLS) ಮತ್ತು ಬಿಹಾರದ ವಾಲ್ಮೀಕಿ ಹುಲಿ ರಕ್ಷಿತಾರಣ್ಯದಲ್ಲಿ ಪಕ್ಕದ ನೇಪಾಳದಿಂದ ಬರುವ ಕೆಲವೊಂದು ಘೇಂಡಾಮೃಗಗಳನ್ನು ಗಮನಿಸಲಾಗಿದೆ.

ಭಾರತದಲ್ಲಿ ಘೇಂಡಾಮೃಗಗಳ ಸಂರಕ್ಷಣೆ: ಕಾಜಿರಂಗ ವಿಶ್ವದ ಅತಿ ದೊಡ್ಡ ಒಂದು ಕೊಂಬಿನ ಘೇಂಡಾಮೃಗಗಳನ್ನು ಹೊಂದಿರುವ ರಾಷ್ಟ್ರೀಯ ಉದ್ಯಾನವನವಾಗಿದೆ. ನೈಸರ್ಗಿಕ ಕಾರ್ಣಗಳಿಂದಾಗಿ 400 ಘೇಂಡಾಮೃಗಗಳು ಸಾವನ್ನಪ್ಪಿದ್ದರ ಹೊರತಾಗಿಯೂ, 2018ರಿಂದ ಈಚೆಗೆ ಈ ಉದ್ಯಾನವನದಲ್ಲಿ 200 ಘೇಂಡಾಮೃಗಗಳ ಸಂಖ್ಯೆ ಹೆಚ್ಚಳವಾಗಿದೆ. ಘೇಂಡಾಮೃಗ ಹಾಗೂ ಇತರ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ವಿಶಾಲವಾದ ಭೂ ಕಾರಿಡಾರ್ ನಿರ್ಮಿಸುವ ಉದ್ದೇಶದಿಂದ ಭಾರತ ಸರ್ಕಾರ 2023ರಲ್ಲಿ ಒರಾಂಗ್​ ರಾಷ್ಟ್ರೀಯ ಉದ್ಯಾನವನವನ್ನು ಸುಮಾರು 200 ಚದರ ಕಿ.ಮೀಗಳಷ್ಟು ಹೆಚ್ಚು ಮಾಡಿದೆ. ಇದರಿಂದಾಗಿ ಈ ಉದ್ಯಾನವನ ಲಾಖೋವಾ ಮತ್ತು ಬುರಾಚಪೋರಿ ವನ್ಯಜೀವಿ ಅಭಯಾರಣ್ಯಗಳನ್ನು ಸಂಪರ್ಕಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಕೂಡ 919.48 ಚದರ ಕಿಲೋಮೀಟರ್‌ಗಳಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಇಂದು 'ವಿಶ್ವ ಗುಲಾಬಿ ದಿನ': ಇದರ ಮಹತ್ವವೇನು?, ಕ್ಯಾನ್ಸರ್​ ರೋಗಿಗಳಿಗೆ ಮುಖ್ಯವೇಕೆ? - World Rose Day Special

ETV Bharat Logo

Copyright © 2024 Ushodaya Enterprises Pvt. Ltd., All Rights Reserved.