ETV Bharat / bharat

ವಿಶ್ವ ಹಸಿವಿನ ದಿನ: ಜಗತ್ತಿನಲ್ಲಿ ಇಂದಿಗೂ ಹಸಿವಿನಿಂದ ಬಳಲುತ್ತಿದ್ದಾರೆ 800 ಮಿಲಿಯನ್​ ಜನ! - World Hunger Day

ದೇಶಗಳ ಅವಿರಹಿತ ಪ್ರಯತ್ನದ ನಡುವೆಯೂ ಇಂದಿಗೂ ಕೋಟ್ಯಂತರ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ.

world-hunger Celebrating sustainable solutions to hunger and poverty
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : May 28, 2024, 1:05 PM IST

ಹೈದರಾಬಾದ್​: ಜಗತ್ತಿನೆಲ್ಲೆಡೆ ಮೇ 28 ಅನ್ನು ವಿಶ್ವ ಹಸಿವಿನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ ಹಸಿವು ಮತ್ತು ಆಹಾರದ ಮಹತ್ವ ಸಾರಲಾಗುತ್ತಿದೆ. 2011ರಲ್ಲಿ ಈ ದಿನಾಚರಣೆ ಅಸ್ತಿತ್ವಕ್ಕೆ ಬಂತು. ಈ ಮೂಲಕ ಹಸಿವು ಮತ್ತು ಬಡತನ ನಿವಾರಣೆಗೆ ಸುಸ್ಥಿರ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಜಗತ್ತಿನಲ್ಲಿ ಇಂದಿಗೂ 800 ಮಿಲಿಯನ್​ ಜನರು ಹೊಟ್ಟೆ ತುಂಬಾ ಊಟ ಸಿಗದೇ ಸಂಕಷ್ಟದಲ್ಲಿದ್ದಾರೆ.

ವಿಶ್ವ ಹಸಿವಿನ ದಿನದ ಧ್ಯೇಯ: ಜಗತ್ತಿನೆಲ್ಲೆಡೆ ಮಹಿಳೆಯರು ಮತ್ತು ಮಕ್ಕಳು ಯುದ್ಧ, ಬರ, ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ಸದ್ಯ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪರಿಣಾಮ, ಅಪೌಷ್ಟಿಕತೆ ತಾಯಿಯಿಂದ ಮಗುವಿಗೆ ಹರಡುತ್ತಿದೆ. ಇದು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಜಾಗತಿಕ ಹಸಿವಿನ ಸತ್ಯಾಂಶಗಳು:

  • ಜಗತ್ತು ಭೂಮಿ ಮೇಲಿರುವ 8 ಬಿಲಿಯನ್​ (800 ಕೋಟಿ) ಜನರಿಗಾಗುವಷ್ಟು ಆಹಾರ ತಯಾರಿಸಿದರೂ 828 ಮಿಲಿಯನ್​ ಮಂದಿ ಪ್ರತೀನಿತ್ಯ ಹಸಿವಿನಿಂದ ಬಳಲುತ್ತಿದ್ದಾರೆ.
  • ಶೇ.42ರಷ್ಟು ಜನರಿಗೆ ಒಳ್ಳೆಯ, ಆರೋಗ್ಯಯುತ ಆಹಾರ ಸಿಗುತ್ತಿಲ್ಲ.
  • ಜಾಗತಿಕವಾಗಿ ಒಂದು ಬಿಲಿಯನ್​ ಯುವತಿಯರು ಮತ್ತು ಮಹಿಳೆಯರು ಅಪೌಷ್ಟಿಕತೆ ಹೊಂದಿದ್ದಾರೆ.
  • 5 ವರ್ಷದೊಳಗಿನ 149 ಮಿಲಿಯನ್​ ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ.
  • ಜಾಗತಿಕವಾಗಿ 2.3 ಬಿಲಿಯನ್​ ಜನರು, ಅಂದರೆ ಶೇ.29.6ರಷ್ಟು ಜನರು ಬೇಕಾದಷ್ಟು ಆಹಾರ ಹೊಂದಿಲ್ಲ.
  • ಪ್ರತೀ ವರ್ಷ 9 ಮಿಲಿಯನ್​ ಜನರು ಹಸಿವು ಸಂಬಂಧಿತ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಬಹುತೇಕರು 5 ವರ್ಷದೊಳಗಿನವರು ಅನ್ನೋದು ಗಮನಾರ್ಹ.
  • ಐದು ವರ್ಷದೊಳಗಿನ 45 ಮಿಲಿಯನ್​ ಮಕ್ಕಳು ಹಸಿವಿನಿಂದ ಸಂಕಷ್ಟದಲ್ಲಿದ್ದಾರೆ.
  • 2022ರಲ್ಲಿ ಈ ಹಸಿವಿನ ಪ್ರಮಾಣ ಶೇ.25ರಷ್ಟು ಹೆಚ್ಚಾಯಿತು. ಇದಕ್ಕೆ ಕಾರಣ ಉಕ್ರೇನ್​ ಯುದ್ಧ.

ಆಹಾರ ಬಿಕ್ಕಟ್ಟಿನ ಜಾಗತಿಕ ವರದಿ: ಈ ವರದಿಯ ಪ್ರಕಾರ, 2030ರ ವೇಳೆಗೆ ಜಾಗತಿಕ ಹಸಿವು ಕೊನೆಗೊಳಿಸುವ ಗುರಿ ಇದೆ. 2023ರಲ್ಲಿ, ಸುಮಾರು 282 ಮಿಲಿಯನ್ ಜನರು ಅಥವಾ 59 ದೇಶಗಳ ಶೇ.21.5ರಷ್ಟು ಜನರು ಹಸಿವನ್ನು ಹೆಚ್ಚಿನ ತೊಂದರೆ ಎದುರಿಸಿದ್ದಾರೆ. 2022ರಿಂದ 24 ಮಿಲಿಯನ್ ಜನರು ತೀವ್ರ ತುರ್ತು ಆಹಾರ ಮತ್ತು ಜೀವನೋಪಾಯಕ್ಕೆ ಅಗತ್ಯವಿರುವ ಆಹಾರ ಅಭದ್ರತೆ ಎದುರಿಸಿದ್ದರು.

ಆಹಾರ ತ್ಯಾಜ್ಯ ಸೂಚ್ಯಂಕ ವರದಿ: ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ 2024ರ ಪ್ರಕಾರ, 1.05 ಬಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿದೆ. ಶೇ.13ರಷ್ಟು ಜನರು ಪೂರೈಕೆ ಸರಪಳಿಯಲ್ಲಿ ಆಹಾರ ನಷ್ಟ ಅನುಭವಿಸುತ್ತಿದ್ದಾರೆ. ಜಗತ್ತಿನ ಬಹುತೇಕ ಆಹಾರ ವ್ಯರ್ಥಗಳು ಮನೆಗಳಲ್ಲಿಯೇ ನಡೆಯುತ್ತಿದೆ. ಒಟ್ಟು 631 ಮಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿದೆ. ಆಹಾರ ಸೇವೆ ಮತ್ತು ಚಿಲ್ಲರೆ ವಲಯದಲ್ಲಿ ಕ್ರಮವಾಗಿ 290 ಮತ್ತು 131 ಮಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿದೆ. ಸರಾಸರಿ, ವ್ಯಕ್ತಿಯೊಬ್ಬ ವರ್ಷಕ್ಕೆ 79 ಕೆ.ಜಿ ಆಹಾರ ವ್ಯರ್ಥ ಮಾಡುತ್ತಾನೆ. ಇದು ಜಾಗತಿಕವಾಗಿ ಹಸಿವಿನಿಂದ ಬಳಲುತ್ತಿರುವ 1.3 ಮಿಲಿಯನ್​ ಜನರ ಪ್ರತಿನಿತ್ಯದ ಆಹಾರಕ್ಕೆ ಸಮವಾಗಿದೆ.

ಅಧಿಕ ಆದಾಯ, ಮಧ್ಯಮ ಮೇಲ್ವರ್ಗ ಮತ್ತು ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ಈ ಆಹಾರ ತ್ಯಾಜ್ಯ ಪ್ರಮಾಣದ ಮಟ್ಟ ಮನೆಗಳಲ್ಲಿ ಭಿನ್ನವಾಗಿದ್ದು, ಸರಾಸರಿ 7 ಕೆ.ಜಿ ಇದೆ. ಮಧ್ಯಮ ಆದಾಯದ ದೇಶದಲ್ಲಿ ನಗರಕ್ಕೆ ಹೋಲಿಕೆ ಮಾಡಿದಾಗ ಗ್ರಾಮೀಣ ಪ್ರದೇಶದಲ್ಲಿ ಆಹಾರ ತ್ಯಾಜ್ಯ ಕಡಿಮೆ ಆಗಿದೆ. ಇಲ್ಲಿ ಆಹಾರವನ್ನು ಪ್ರಾಣಿಗಳಿಗೆ, ಮನೆಯಲ್ಲಿ ಮಿಶ್ರ ಗೊಬ್ಬರವಾಗಿ ಪುನರ್​ಬಳಕೆ ಮಾಡಲಾಗುತ್ತದೆ. ಈ ವರದಿಯು ಆಹಾರ ವ್ಯರ್ಥ್ಯವನ್ನು ಕಡಿಮೆಗೊಳಿಸುವ ಗುರಿ ಹೊಂದಿದೆ.

ಭಾರತದ ಹಸಿವಿನ ಪ್ರಮಾಣ: 2023ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 125 ದೇಶಗಳಲ್ಲಿ ಭಾರತ 111ನೇ ಸ್ಥಾನ ಪಡೆದಿತ್ತು. 28.7 ಸ್ಕೋರ್​ ಹೊಂದುವ ಮೂಲಕ ದೇಶದಲ್ಲಿ ಹಸಿವನ ಮಟ್ಟ ಗಂಭೀರವಾಗಿದೆ.

ವಿಶ್ವದಲ್ಲೇ ಭಾರತ ಅತೀ ಹೆಚ್ಚು ಮಕ್ಕಳ ವ್ಯರ್ಥ ದರ ಹೊಂದಿದೆ. ಇದು ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಈ ಸೂಚ್ಯಂಕದ ಪ್ರಕಾರ, ಭಾರತದ ಅಪೌಷ್ಟಿಕತೆ ದರವು ಶೇ.16.6ರಷ್ಟಿದೆ. ಐದು ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ ಶೇ.3.1ರಷ್ಟಿದೆ. 15ರಿಂದ 24 ವರ್ಷದ 58.1ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಭಾರತದಲ್ಲಿ ಅಕ್ಕಿ, ಗೋಧಿ, ಹಾಲು ಮತ್ತು ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಕೃಷಿ ಉತ್ಪನ್ನವಾದರೂ, ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲಿ 190 ಮಿಲಿಯನ್​ ಜನರು ಹಸಿವಿನಿಂದ ಬಳಲಿದರೆ, ಭಾರತದಲ್ಲಿ 1.4 ಬಿಲಿಯನ್​ ಜನರು ಹಸಿವಿನಿಂದಿದ್ದಾರೆ. ಇದಕ್ಕೆ ಕಾರಣ ಪೂರೈಕೆ ಸರಪಳಿ ನಷ್ಟ. ಭಾರತ ಕಳಪೆ ಮೂಲಸೌಕರ್ಯ ಹೊಂದಿದ್ದು, ಇದರ ಪರಿಣಾಮ ಶೇ 40 ಆಹಾರಗಳ ಕೃಷಿ ಬಳಿಕ ನಷ್ಟವಾಗುತ್ತಿದೆ. ಶೀತಲ ಸಂಗ್ರಹಣೆ ಇಲ್ಲದೇ ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿದೆ. ನೂರಾರು ಟನ್ ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುವ ಅಪಾಯವಿದೆ. ಭಾರತದ ಕಡಿಮೆ ಉತ್ಪಾದಕತೆಗೆ ಅಸಮರ್ಥ ಆಹಾರ ವಿತರಣಾ ವ್ಯವಸ್ಥೆಗಳು, ಅನಿಯಮಿತ ಮತ್ತು ಅಸಾಮಾನ್ಯ ಹವಾಮಾನ, ನಿಯಮಗಳು ಮತ್ತು ರೈತರಿಗೆ ಶಿಕ್ಷಣ ಮತ್ತು ತರಬೇತಿಯ ಕೊರತೆ ಕೂಡ ಪ್ರಮುಖ ಅಂಶವಾಗಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆ ತಿಳಿಸಿದೆ.

ಭಾರತದ ಹಸಿವಿನ ಹೋರಾಟ- ಪೋಷಣ್​ ಅಭಿಯಾನ: 2018ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರಂಭಿಸಿದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳು ಮತ್ತು ಮಹಿಳೆಯರಲ್ಲಿ ಕುಂಠಿತ ಬೆಳವಣಿಗೆ, ಅಪೌಷ್ಟಿಕಾಂಶತೆ ಮತ್ತು ರಕ್ತ ಹೀನತೆ ಕಡಿಮೆ ಮಾಡುವುದಾಗಿದೆ.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ: 2017ರಲ್ಲಿ ಜಾರಿಗೆ ಬಂದ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಯೋಜನೆ ಉದ್ದೇಶ ತಾಯಂದಿರ ಆರೋಗ್ಯ ಸುಧಾರಣೆ ಮಾಡುವುದಾಗಿದೆ.

ಆಹಾರ ಬಲವರ್ಧನೆ: ಪೌಷ್ಟಿಕಾಂಶ ಸುಧಾರಣೆಗೆ ಕಬ್ಬಿಣ, ಐಯೋಡಿನ್​, ಜಿಂಕ್​, ವಿಟಮಿನ್​ ಎ ಮತ್ತು ಡಿ ಹೊಂದಿರುವ ಆಹಾರ ನೀಡುವುದಾಗಿದೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013: ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಗ್ರಾಮೀಣ ಜನಸಂಖ್ಯೆಯ ಶೇ.75ರಷ್ಟು ಮತ್ತು ನಗರದ ಶೇ.50ರಷ್ಟು ಜನರು ಕಾನೂನುಬದ್ಧವಾಗಿ ಅರ್ಹರಾಗಿದ್ದಾರೆ.

ಇದನ್ನೂ ಓದಿ: ಜಗತ್ತಿನಾದ್ಯಂತ ಪ್ರತಿನಿತ್ಯ 1 ಬಿಲಿಯನ್‌ಗೂ ಹೆಚ್ಚು​ ಊಟ ವ್ಯರ್ಥ: ವಿಶ್ವಸಂಸ್ಥೆ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.