ಹೈದರಾಬಾದ್: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಪ್ರತಿಭೆ ಇರುತ್ತದೆ. ಕೆಲವರು ಈ ಪ್ರತಿಭೆಯನ್ನು ಪತ್ತೆ ಮಾಡಿ ಸಮಾಜದ ಮುಂದೆ ಪ್ರದರ್ಶಿಸಿ, ಇದಕ್ಕೆ ಉತ್ತಮ ಮಾರ್ಗ ಕಲ್ಪಿಸುತ್ತಾರೆ. ಉತ್ತಮ ಪ್ರದರ್ಶನದ ಕಾರಣದಿಂದಲೇ ಕೆಲವು ಮಂದಿ ಸೂಕ್ತ ವೇದಿಕೆಯನ್ನು ಪಡೆಯುತ್ತಾರೆ. ಸರಿಯಾದ ವೇದಿಕೆ ಸಿಕ್ಕಾಗ ಅವರ ಸೃಜನಶೀಲತೆ ಅನೇಕ ಉದ್ಯೋಗ ಅವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ. ವಿಶ್ವಸಂಸ್ಥೆಯ ಅಧ್ಯಯನ ಪ್ರಕಾರ, ಸೃಜನಶೀಲ ಆರ್ಥಿಕತೆಯು ಜಗತ್ತಿನೆಲ್ಲೆಡೆ 4-5 ಕೋಟಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
ಸೃಜನಶೀಲತೆಯ ಬಗ್ಗೆ ಸಾರ್ವತ್ರಿಕ ವ್ಯಾಖ್ಯಾನ ಇರುವುದಿಲ್ಲ. ಪರಿಕಲ್ಪನೆಯು ಅರ್ಥವಿವರಣೆಗೆ ಮುಕ್ತವಾಗಿದೆ. ಕಲಾತ್ಮಕ ಅಭಿವ್ಯಕ್ತಿಯಿಂದ ಆರ್ಥಿಕ, ಸಾಮಾಜಿಕ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದನ್ನು ಗಮನದಲ್ಲಿರಿಸಿಕೊಂಡು ವಿಶ್ವಸಂಸ್ಥೆ ಏಪ್ರಿಲ್ 21ಅನ್ನು ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನವನ್ನಾಗಿ ಘೋಷಣೆ ಮಾಡಿದೆ. ಈ ಮೂಲಕ ಮಾನವ ಅಭಿವೃದ್ಧಿಯ ಎಲ್ಲಾ ವಿಷಯಕ್ಕೆ ಸೃಜನಶೀಲತೆ ಮತ್ತು ಅವಿಷ್ಕರಣೆಯ ಪಾತ್ರದ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಸೃಜನಶೀಲತೆ ಮತ್ತು ಸಂಸ್ಕೃತಿ: ಸೃಜನಶೀಲತೆ ಆರ್ಥಿಕತೆ ಕುರಿತು ಯಾವುದೇ ಒಂದು ವ್ಯಾಖ್ಯಾನವಿಲ್ಲ. ಮಾನವನ ಕ್ರಿಯಾತ್ಮಕತೆ ಮತ್ತು ಆಲೋಚನೆ ಮತ್ತು ಬೌದ್ಧಿಕ ಶಕ್ತಿ ಇದರ ಮೂಲವಾಗಿದೆ. ಜ್ಞಾನಾಧಾರಿತ ಆರ್ಥಿಕ ಚಟುವಟಿಕೆಗಳು ಸೃಜನಶೀಲತೆಯ ಉದ್ಯಮಕ್ಕೆ ಆಧಾರವಾಗಿದೆ.
ಸೃಜನಶೀಲ ಉದ್ಯಮ: ಇದು ಆಡಿಯೋವಿಶುವಲ್ ಉತ್ಪನ್ನ, ವಿನ್ಯಾಸ, ಹೊಸ ಮಾಧ್ಯಮ, ಕಲೆ ಪ್ರದರ್ಶನ, ಕಲೆ ಪ್ರಕಟಣೆ ಮತ್ತು ದೃಶ್ಯೀಕರಣವನ್ನು ಹೊಂದಿದೆ. ಇದು ರೂಪಾಂತರದ ವಲಯವಾಗಿದ್ದು, ಆದಾಯ ಸೃಷ್ಟಿ, ಉದ್ಯೋಗ ಸೃಷ್ಟಿ ಮತ್ತು ರಫ್ತು ಗಳಿಕೆಯನ್ನು ಹೊಂದಿದೆ.
ಸಂಸ್ಕೃತಿಯು ಸುಸ್ಥಿರ ಅಭಿವೃದ್ಧಿಯ ಅತ್ಯಗತ್ಯ ಅಂಶವಾಗಿದೆ. ವ್ಯಕ್ತಿ ಮತ್ತು ಸಮುದಾಯಕ್ಕೆ ಗುರುತು, ನಾವೀನ್ಯತೆ ಮತ್ತು ಸೃಜನಶೀಲತೆಯ ಮೂಲವನ್ನು ಪ್ರತಿನಿಧಿಸುತ್ತದೆ. ಸೃಜನಶೀಲತೆ ಮತ್ತು ಸಂಸ್ಕೃತಿಯು ಪ್ರಮುಖವಾದ ವಿತ್ತೀಯವಲ್ಲದ ಮೌಲ್ಯವನ್ನು ಹೊಂದಿದ್ದು ಅದು ಅಂತರ್ಗತ ಸಾಮಾಜಿಕ ಅಭಿವೃದ್ಧಿ, ಜನರ ನಡುವಿನ ತಿಳುವಳಿಕೆಗೆ ಕೊಡುಗೆ ನೀಡುತ್ತದೆ.
ಇಂದು ಸೃಜನಶೀಲತೆ ಉದ್ಯಮವು ಜಗತ್ತಿನ ಆರ್ಥಿಕತೆ ಹೊಸ ಉದ್ಯೋಗ ಅವಕಾಶ ಒದಗಿಸುವ ಡೈನಾಮಿಕ್ ವಲಯವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇದು ಜಿಗಿತ ಕಾಣುತ್ತಿದೆ.
ಸುಸ್ಥಿರ ಅಭಿವೃದ್ಧಿ: ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನದಂದು, ರಾಷ್ಟ್ರಗಳ ಆರ್ಥಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವೀನ್ಯತೆ ಅತ್ಯಗತ್ಯ ಎಂಬ ಕಲ್ಪನೆಯನ್ನು ಸ್ವೀಕರಿಸಲು ಜಗತ್ತನ್ನು ಆಹ್ವಾನಿಸಲಾಗಿದೆ. ನಾವೀನ್ಯತೆ, ಸೃಜನಶೀಲತೆ ಮತ್ತು ಸಾಮೂಹಿಕ ಉದ್ಯಮಶೀಲತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹೊಸ ವೇಗವನ್ನು ಒದಗಿಸುತ್ತದೆ.
ಸೃಜನಶೀಲತೆಯ ನೀತಿ: ಸಂಸ್ಕೃತಿ ಮತ್ತು ಸೃಜನಶೀಲತೆ ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ ಶೇ 3.1ರಷ್ಟು ಮತ್ತು ಎಲ್ಲಾ ಉದ್ಯೋಗದ ಶೇ 6.2 ರಷ್ಟು ಹೊಂದಿದೆ. ಸಾಂಸ್ಕೃತಿಕ ಸರಕುಗಳು ಮತ್ತು ಸೇವೆಗಳ ರಫ್ತು 2005 ರಿಂದ ದ್ವಿಗುಣಗೊಂಡಿದೆ. 2019 ರಲ್ಲಿ 389.1 ಅಮೆರಿಕನ್ ಡಾಲರ್ ಬಿಲಿಯನ್ ತಲುಪಿದೆ. ವಿಶ್ವದ ಅತ್ಯಂತ ಕಿರಿಯ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಇದನ್ನು ಅನೇಕ ಬಾರಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಾಗಿ ನೋಡಲಾಗುವುದು.
ಇದನ್ನೂ ಓದಿ: ಸೃಜನಶೀಲತೆ-ಕೌಶಲ್ಯತೆಯಿಂದ ವಿಫುಲ ಉದ್ಯೋಗಾವಕಾಶ: ಪ್ರೊ. ಅಗರವಾಲ್