ETV Bharat / bharat

'ಬೂತ್ ಗೆದ್ದು ಬಿಜೆಪಿ ಗೆಲ್ಲಿಸಿ': ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ - PM Modi

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅಗತ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಬೂತ್​ ಮಟ್ಟದ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

PM Narendra Modi
ಪ್ರಧಾನಿ ನರೇಂದ್ರ ಮೋದಿ
author img

By ETV Bharat Karnataka Team

Published : Apr 5, 2024, 7:57 PM IST

ಬೆಂಗಳೂರು: "ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಬೂತ್ ಗೆದ್ದು ಬಿಜೆಪಿ ಗೆಲ್ಲಿಸಿ" ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಕರ್ನಾಟಕದ ಬೂತ್ ಕಾರ್ಯಕರ್ತರ ಜತೆ ನಮೋ ಆ್ಯಪ್ ಮೂಲಕ ಸಂವಾದ ನಡೆಸಿದ ಮೋದಿ, "2-3 ಜನರ ಗುಂಪು ರಚಿಸಿ ಕುಳಿತು ಮಾತನಾಡಿ, ಮತದಾನ ಖಚಿತಪಡಿಸಿಕೊಳ್ಳಿ. ಸಾಧನೆಗಳನ್ನು ನಿರ್ದಿಷ್ಟ ಮನೆಗಳಿಗೆ ತಲುಪಿಸುವ ಕಡೆ ಗಮನ ಕೊಡಿ" ಎಂದು ಮನವಿ ಮಾಡಿದರು.

"ಸಾಧನೆ, ಕೆಲಸಗಳ ಕುರಿತು ಮಾತನಾಡಿ. ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು. ಅವರ ಭ್ರಷ್ಟಾಚಾರಗಳನ್ನು ಅನಾವರಣಗೊಳಿಸಿ. ಪ್ರಯೋಜನಾರ್ಥಿಗಳ ಜತೆ ಮಾತನಾಡಲು ಯುವಜನರೊಂದಿಗೆ ಯುವಜನರನ್ನೇ ನಿಯೋಜಿಸಿ. ಹಿರಿಯರೊಂದಿಗೆ ಹಿರಿಯರೇ ಮಾತನಾಡುವಂತಿರಲಿ. ಲಾಭಾರ್ಥಿಗಳಿಗೆ ಆದ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡೋಣ. ಡೈರಿಯಲ್ಲಿ ಇದನ್ನು ಬರೆದುಕೊಳ್ಳಿ. ಮತದಾರರ ಮನ ಗೆಲ್ಲೋಣ. ಮತದಾರರ ಹೃದಯ ಗೆಲ್ಲುವುದು, ಕುಟುಂಬದ ಮನ ಗೆಲ್ಲುವುದು, ಬೂತ್‍ನ ಎಲ್ಲರ ಮನ ಗೆದ್ದು ಬಿಜೆಪಿಗೆ ಮತ ಕೊಡುವಂತೆ ಮಾಡುವ ಸವಾಲನ್ನು ನಿರ್ವಹಿಸಬೇಕಿದೆ" ಎಂದು ತಿಳಿಸಿದರು.

"ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದು, ಪ್ರತೀ ಬೂತ್‍ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು. ಇದು ಗೆಲುವಿನ ಕಡೆ ನಮ್ಮನ್ನು ಕರೆದೊಯ್ಯಲಿದೆ. ನಾವು ಆಡಳಿತದಲ್ಲಿ ಇಲ್ಲದಿದ್ದರೂ ನಾವು ಭೇದಭಾವ ಮಾಡಿಲ್ಲ. ಇದನ್ನು ಜನರಿಗೆ ತಿಳಿಸೋಣ" ಎಂದು ಹೇಳಿದರು.

ಇದೇ ವೇಳೆ ಪ್ರಧಾನಿ ಮೋದಿ, ಕಾರ್ಯಕರ್ತರು ಜನರನ್ನು ಭೇಟಿ ಮಾಡುವ ಕೆಲಸ ಮಾಡುತ್ತಿದ್ದಾರೆಯೇ? ಸಾಧನೆಗಳನ್ನು ತಿಳಿಸುವ ಕಾರ್ಯ ನಡೆದಿದೆಯೇ? ಬಿಜೆಪಿ ಸರ್ಕಾರದ ಯಾವ ಕೆಲಸ ಹೆಚ್ಚು ಇಷ್ಟವಾಗಿದೆ? ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

"ಮಹಿಳಾ ಶಕ್ತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಿ. ಮತದಾನ ಮಾಡುವುದು ಹೇಗೆ ಎಂದು ಜಾಗೃತಿ ಮೂಡಿಸಿ. ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. 'ನಾರಿ ಶಕ್ತಿ ವಂದನಾ' ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ. ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ." ಎಂದು ಸಲಹೆ ಕೊಟ್ಟರು.

"ಬೂತ್ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿದಿನದ ಕೆಲಸ ಮುಗಿದ ಬಳಿಕ ಸೇರಬೇಕು. ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿದೆ" ಎಂದರು. ಪನ್ನಾ ಪ್ರಮುಖರ ಮೂಲಕ ಚರ್ಚೆ ಮಾಡಿದ್ದೀರಾ? ರೈತರಿಗಾಗಿ ಜಾರಿಗೊಳಿಸಿದ ವಿವಿಧ ಯೋಜನೆಗಳ ಕುರಿತು ಅನ್ನದಾತರಿಗೆ 6 ಸಾವಿರ ರೂಪಾಯಿ ಕೊಟ್ಟ ಕುರಿತು ಮಾಹಿತಿ ನೀಡಿದ್ದೀರಾ? ನಾರಿ ಶಕ್ತಿ, ನಮೋ ಆ್ಯಪ್ ಮೂಲಕ ಮಾಡಿದ ಜಾಗೃತಿ, ಚಾಯ್ ಪೇ ಚರ್ಚಾ ಕಾರ್ಯಕ್ರಮಗಳ ಕುರಿತು ಕೂಡ ಅವರು ಮಾಹಿತಿ ಪಡೆದುಕೊಂಡರು.

"ಮೂಲಸೌಕರ್ಯ ವೃದ್ಧಿ, ಕಿಸಾನ್ ಸಮ್ಮಾನ್ ಸೇರಿ ವಿವಿಧ ಯೋಜನೆಗಳ ಕುರಿತು ಪ್ರತ್ಯೇಕವಾಗಿ ತಿಳಿಸಿ. ಕಾಂಗ್ರೆಸ್ ಸರ್ಕಾರವು ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುದನ್ನು ಮನದಟ್ಟು ಮಾಡಿ. ಮೋದಿ ಗ್ಯಾರಂಟಿ ನುಡಿದಂತೆ ನಡೆಯುವ ಗ್ಯಾರಂಟಿ ಎಂದು ತಿಳಿಹೇಳಬೇಕು. ಬಡವರಿಗೆ ಮನೆ ನಿರ್ಮಾಣ, ಶೌಚಾಲಯ, ಗ್ಯಾಸ್ ಸಂಪರ್ಕ, ಮನೆಮನೆಗೆ ನಳ್ಳಿ ನೀರಿನ ಸಂಪರ್ಕ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಯೋಜನೆಗಳನ್ನು ನಮ್ಮ ಸರ್ಕಾರ ಕೊಟ್ಟಿದೆ. ಇದು ಮೋದಿ ಗ್ಯಾರಂಟಿ. ಇದನ್ನು ಜನರಿಗೆ ತಿಳಿಸಿ" ಎಂದು ವಿನಂತಿಸಿದರು.

ಉಡುಪಿಯ ದ್ವಾರಕಾ ನಗರ ಕೃಷ್ಣನಗರದ ಹಿನ್ನೆಲೆಯನ್ನು ತಿಳಿಸಿದ ನರೇಂದ್ರ ಮೋದಿ, "ಉಡುಪಿಯನ್ನು ಕಂಡರೆ ಅತ್ಯಂತ ಸಂತಸವಾಗುತ್ತದೆ" ಎಂದರು. "ಸಮಾಜದ ಎಲ್ಲ ವರ್ಗಕ್ಕೆ, ಲಾಭಾರ್ಥಿಗಳನ್ನು ತಲುಪುವ ಕಡೆ ಗಮನ ಕೊಡಿ. ಪ್ರತೀ ಬೂತ್ ಗೆಲ್ಲುವ ಮೂಲಕ ಲೋಕಸಭಾ ಚುನಾವಣೆ ಗೆಲ್ಲೋಣ. ಪ್ರಥಮ ಬಾರಿ ಮತದಾನ ಮಾಡುವವರ ಮನ ಗೆಲ್ಲಲು ನೀವೇನು ಮಾಡುತ್ತೀರಿ? ಎಂದು ಕೇಳಿ ಉತ್ತರ ಪಡೆದರು.

ಕೈ ಮೇಲೆ ಕಮಲದ ಚಿಹ್ನೆ: ಹಿಂದಿನ ಚುನಾವಣೆಗಳಲ್ಲಿ ಪಡೆದ ಮತಗಳ ಕುರಿತು ಮಾಹಿತಿ ಶೇಖರಿಸಿದ್ದೀರಾ? ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಕಮಲದ ಚಿಹ್ನೆಯನ್ನು ಕೈಯ ಮೇಲೆ ಮೆಹಂದಿ ಮೂಲಕ ಹಾಕಿಕೊಳ್ಳಿ. ಇದರ ಮೂಲಕ ಜನಜಾಗೃತಿ ಮೂಡಿಸಿ. ಯುಗಾದಿ ಸಂದರ್ಭದಲ್ಲಿ ಕಮಲ ಚಿಹ್ನೆ ಮೂಲಕ ರಂಗೋಲಿ ಮಾಡುವ ಕುರಿತ ಸಲಹೆಯೂ ಒಳ್ಳೆಯದೇ" ಎಂದು ಪ್ರಧಾನಿ ನುಡಿದರು.

"ಬೂತ್ ಮಟ್ಟದ ಬೈಠಕ್‍ಗಳಿಗೆ ಮಹತ್ವವಿದೆ. ಇದನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಿ. ಹಿರಿಯ ನಾಗರಿಕರ ಮನಸ್ಸನ್ನು ಗೆಲ್ಲಬೇಕು. ಕುಟುಂಬದ ಎಲ್ಲ ಮತದಾರರೂ ಮತದಾನ ಮಾಡುವಂತೆ ನೋಡಿಕೊಳ್ಳಿ. ಬೂತ್ ಗೆದ್ದು ಲೋಕಸಭಾ ಸ್ಥಾನ ಗೆಲ್ಲಬೇಕು. ಪ್ರತಿ ಬೂತ್‍ನಲ್ಲಿ 370ಕ್ಕೂ ಹೆಚ್ಚು ಮತ ಪಡೆದು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು" ಎಂದರು.

"ಬೇಸಿಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗುತ್ತಿದೆ. ಬೆಳಗ್ಗೆ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳುವುದು ತುಂಬಾ ಉಪಯುಕ್ತ ಎಂದು ಸಲಹೆ ಕೊಟ್ಟರು. ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಕೊನೆಯಲ್ಲಿ ಜನತೆಗೆ ರಾಮನವಮಿ, ಯುಗಾದಿ ಹಬ್ಬಗಳ ಶುಭಾಶಯ ಕೋರಿದರು. ಮೈಸೂರಿನ ರಾಜೇಶ್, ಶಿವಮೊಗ್ಗದ ಸರಳಾ, ಬೆಳಗಾವಿಯ ಶ್ರುತಿ ಆಪ್ಟೇಕರ್, ಉಡುಪಿಯ ಸುಪ್ರೀತ್ ಭಂಡಾರಿ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ಕಳೆದ 10 ವರ್ಷಗಳ ಕೆಲಸ ಕೇವಲ ಟ್ರೇಲರ್​ ಅಷ್ಟೇ: ಪ್ರಧಾನಿ ಮೋದಿ - PM Modi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.