ETV Bharat / bharat

ಚುನಾವಣಾ ಬಾಂಡ್ ಎಂದರೇನು? ಇಲ್ಲಿದೆ ಮಾಹಿತಿ

author img

By PTI

Published : Feb 15, 2024, 3:57 PM IST

Updated : Feb 15, 2024, 4:32 PM IST

ಮಹತ್ವದ ತೀರ್ಪೊಂದರಲ್ಲಿ ಚುನಾವಣಾ ಬಾಂಡ್​ಗಳನ್ನು ಇಂದು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈ ಸಂದರ್ಭದಲ್ಲಿ ಚುನಾವಣಾ ಬಾಂಡ್ ಎಂದರೇನು?, ಅದು ಹೇಗೆ ಕೆಲಸ ಮಾಡುತ್ತದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

electoral bond
electoral bond

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಹಾಗೂ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

2017-18ರ ಕೇಂದ್ರ ಬಜೆಟ್​ನಲ್ಲಿ ಹಣಕಾಸು ಸಚಿವರು ಮೊದಲ ಬಾರಿಗೆ ಘೋಷಿಸಿದಂತೆ, ಚುನಾವಣಾ ಬಾಂಡ್ ಎಂಬುದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹಣಕಾಸು ಸಾಧನವಾಗಿದೆ.

ಚುನಾವಣಾ ಬಾಂಡ್ ಯೋಜನೆ, 2018ರ ಪ್ರಕಾರ, ಚುನಾವಣಾ ಬಾಂಡ್ ಎಂಬುದು ಪ್ರಾಮಿಸರಿ ನೋಟಿನ ಸ್ವರೂಪದಲ್ಲಿ ನೀಡಲಾಗುವ ಬಾಂಡ್ ಆಗಿದೆ ಹಾಗೂ ಇದು ಬೇರರ್ ರೂಪದಲ್ಲಿರುತ್ತದೆ. ಖರೀದಿದಾರ ಅಥವಾ ಪಾವತಿದಾರರ ಹೆಸರನ್ನು ಹೊಂದಿಲ್ಲದ, ಯಾವುದೇ ಮಾಲೀಕತ್ವದ ಮಾಹಿತಿಯನ್ನು ದಾಖಲಿಸದ ಮತ್ತು ಸಾಧನವನ್ನು ಹೊಂದಿರುವ ಮಾಲೀಕನನ್ನೇ (ಅಂದರೆ ರಾಜಕೀಯ ಪಕ್ಷ) ಅದರ ಮಾಲೀಕ ಎಂದು ಪರಿಗಣಿಸುವ ಹಣಕಾಸು ಸಾಧನವನ್ನು 'ಬೇರರ್' ಎಂದು ಕರೆಯಲಾಗುತ್ತದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿವರಿಸಿದೆ.

ಈ ಯೋಜನೆಯ ಅಡಿಯಲ್ಲಿ ಭಾರತದ ಪ್ರಜೆಗಳಾಗಿರುವ ವ್ಯಕ್ತಿಗಳು ಮತ್ತು ದೇಶೀಯ ಕಂಪನಿಗಳು 1,000, 10,000, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ.ಗಳ ಗುಣಕಗಳಲ್ಲಿ ಸಿಗುವ ಈ ಬಾಂಡ್​ಗಳನ್ನು ಖರೀದಿಸಿ ತಮ್ಮ ಆಯ್ಕೆಯ ರಾಜಕೀಯ ಪಕ್ಷಗಳಿಗೆ ದಾನ ಮಾಡಬಹುದು. ಈ ಬಾಂಡ್​ಗಳನ್ನು ಪಡೆಯುವ ರಾಜಕೀಯ ಪಕ್ಷಗಳು 15 ದಿನಗಳಲ್ಲಿ ಅವನ್ನು ನಗದೀಕರಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಒಬ್ಬಂಟಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಬಾಂಡ್​ಗಳನ್ನು ಖರೀದಿಸಬಹುದು.

ಒಬ್ಬ ವ್ಯಕ್ತಿಯು (ಕಾರ್ಪೊರೇಟ್ ಘಟಕಗಳು ಸೇರಿದಂತೆ) ಖರೀದಿಸಬಹುದಾದ ಚುನಾವಣಾ ಬಾಂಡ್​ಗಳ ಸಂಖ್ಯೆಗೆ ಯಾವುದೇ ಮಿತಿ ಇಲ್ಲ. 15 ದಿನಗಳ ಸಿಂಧುತ್ವದ ಅವಧಿಯೊಳಗೆ ನಗದೀಕರಿಸದ ಬಾಂಡ್​ಗಳ ಮೊತ್ತವನ್ನು ಬಾಂಡ್​ ನೀಡಿದ ಅಧಿಕೃತ ಬ್ಯಾಂಕ್, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಜಮಾ ಮಾಡುತ್ತದೆ.

ರಾಜಕೀಯ ಪಕ್ಷಗಳು ತಾವು ಪಡೆದ ದೇಣಿಗೆಯ ವಿವರಗಳನ್ನು ವಾರ್ಷಿಕವಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಹೀಗೆ ವರದಿ ಸಲ್ಲಿಸುವಾಗ ಬಾಂಡ್​ಗಳ ಮೂಲಕ ಬಂದ ದೇಣಿಗೆಯ ವಿವರಗಳಾದ- ಬಾಂಡ್​ ನೀಡುವವರ ಹೆಸರು ಮತ್ತು ವಿಳಾಸಗಳನ್ನು ಉಲ್ಲೇಖಿಸುವ ಅಗತ್ಯವಿರುವುದಿಲ್ಲ ಎಂದು ಎಡಿಆರ್ ಹೇಳುತ್ತದೆ. ಹೀಗೆ ಅನಾಮಧೇಯವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಧಾನವನ್ನು ಬಹು ಹಿಂದಿನಿಂದ ಪ್ರಶ್ನಿಸಲಾಗಿದೆ. ಈ ವಿಧಾನದಲ್ಲಿನ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಬಾಂಡ್​ಗಳು ನಾಗರಿಕರ ಮೂಲಭೂತ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಲಾಗಿದೆ.

ಚುನಾವಣಾ ಬಾಂಡ್​ಗಳು ನಾಗರಿಕರಿಗೆ ಯಾವುದೇ ವಿವರಗಳನ್ನು ನೀಡದಿದ್ದರೂ, ಸರ್ಕಾರಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್ ಬಿಐ) ಮಾಹಿತಿಯನ್ನು ಕೇಳುವ ಮೂಲಕ ದಾನಿಗಳ ವಿವರಗಳನ್ನು ನೋಡಬಹುದು ಎಂದು ಎಡಿಆರ್ ತಿಳಿಸಿದೆ. "ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಸ್ವೀಕರಿಸುವ ಯಾವುದೇ ದೇಣಿಗೆಯನ್ನು ವರದಿಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಮತ್ತು ಆದ್ದರಿಂದ ಇದು ಹಿಮ್ಮುಖ ಹೆಜ್ಜೆಯಾಗಿದೆ ಮತ್ತು ಈ ಯೋಜನೆಯನ್ನು ರದ್ದುಪಡಿಸುವುದು ಸೂಕ್ತ" ಎಂದು ಎಡಿಆರ್ ಹೇಳಿದೆ.

ಇದನ್ನೂ ಓದಿ: ಚುನಾವಣಾ ಬಾಂಡ್​ಗಳು ಸಂವಿಧಾನ ಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್​

Last Updated : Feb 15, 2024, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.