ETV Bharat / bharat

ಪಶ್ಚಿಮ ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ: ಮಮತಾ - ಪೌರತ್ವ ತಿದ್ದುಪಡಿ ಕಾಯ್ದೆ

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂಬ ಮಾತುಗಳನ್ನಾಡುವವರು ವೋಟ್ ಬ್ಯಾಂಕ್​ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

west-bengal-cm-mamata-banerjee-warns-centre-about-caa-implementation
ಬಿಜೆಪಿ ವಿಭಜಿಸಲು ಪ್ರಯತ್ನಿಸುತ್ತಿದೆ, ಪಶ್ಚಿಮ ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ: ಮಮತಾ
author img

By ETV Bharat Karnataka Team

Published : Jan 29, 2024, 10:09 PM IST

ಕೂಚ್ ಬೆಹಾರ್(ಪಶ್ಚಿಮ ಬಂಗಾಳ): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಕೇಂದ್ರ ಸಚಿವ ಶಂತನು ಠಾಕೂರ್ ಅವರ, ಒಂದು ವಾರದೊಳಗೆ ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತರಲಾಗುವುದು ಎಂಬ ಹೇಳಿಕೆಗೆ ಸಿಎಂ ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಅವರು ಸೋಮವಾರ ಕೂಚ್ ಬೆಹಾರ್‌ನಲ್ಲಿ ಮಾತನಾಡಿ, "ಎನ್ಆರ್​ಸಿ ಬೇಡ ಎಂದು ಬಂಗಾಳದಲ್ಲಿ ಆಂದೋಲನವನ್ನು ಪ್ರಾರಂಭಿಸಿದವರು ಯಾರು?. ರಾಜ್‌ಬನ್ಶಿ ಸಮುದಾಯದವರು ಭಾರತೀಯ ನಾಗರಿಕರು. ಈ ರೀತಿಯ ಮಾತುಗಳನ್ನು ಹೇಳುವವರು ವೋಟ್ ಬ್ಯಾಂಕ್​ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ನೀವೆಲ್ಲರೂ ಈ ದೇಶದ ಪ್ರಜೆಗಳು. ನೀವು ಪಡಿತರ, ವಿದ್ಯಾರ್ಥಿ ವೇತನ, ಕಿಸಾನ್ ಬಂಧು, ಶಿಕ್ಷಾ ಶ್ರೀ ಸೇರಿದಂತೆ ಪಶ್ಚಿಮ ಬಂಗಾಳ ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯುತ್ತಿದ್ದೀರಿ. ನೀವು ಈ ದೇಶದ ಪ್ರಜೆಗಳಲ್ಲವಾದರೆ ಈ ಎಲ್ಲ ಸೌಲಭ್ಯಗಳನ್ನೂ ಹೇಗೆ ಪಡೆಯಲು ಸಾಧ್ಯವಿತ್ತು?" ಎಂದು ಪ್ರಶ್ನಿಸಿದ್ದಾರೆ.

"ಗಡಿಯಲ್ಲಿ ಪ್ರತ್ಯೇಕ ಗುರುತಿನ ಚೀಟಿಗಳನ್ನು ನೀಡಲು ಬಿಎಸ್ಎಫ್ ಪ್ರಯತ್ನಿಸುತ್ತಿದೆ. ನಿಮ್ಮಲ್ಲಿ ಯಾರೂ ಈ ಕಾರ್ಡ್ ಪಡೆಯುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು ಪಡಿತರ ಚೀಟಿ , ಆಧಾರ್ ಕಾರ್ಡ್​ ಅನ್ನು ಹೊಂದಿದ್ದೇವೆ. ನಾನು ನಿಮ್ಮ ಎರಡನೇ ನಂಬರ್ ಕಾರ್ಡ್( ಟು ನಂಬರ್​ ಕಾರ್ಡ್​) ತೆಗೆದುಕೊಳ್ಳುವುದಿಲ್ಲ. ಆ ಕಾರ್ಡ್ ತೆಗೆದುಕೊಂಡರೆ ಎನ್​ಆರ್​ಸಿ ವ್ಯಾಪ್ತಿಗೆ ಬರುತ್ತಾರೆ. ಇದರಿಂದ ಯಾರಾದರೂ ಸಮಸ್ಯೆಗೆ ಸಿಲುಕಿದರೆ ಅವರೊಂದಿಗೆ ನಾನು ಹುಲಿಯಂತೆ ಇರುತ್ತೇನೆ" ಎಂದರು.

"ಎನ್‌ಆರ್‌ಸಿ ಮತ್ತು ಸಿಎಎ ಕುರಿತು ಜನರಿಗೆ ದಾರಿ ತಪ್ಪಿಸಲಾಗುತ್ತಿದೆ. ಎಲ್ಲ ನಾಗರಿಕ ಸೇವೆಗಳನ್ನು ಪಡೆಯುವವರಿಗೆ ಪ್ರತ್ಯೇಕ ಪೌರತ್ವ ಅಗತ್ಯವಿಲ್ಲ. ಅವರೆಲ್ಲರೂ ನಾಗರಿಕರು. ಪೌರತ್ವ ನೀಡುವ ಹೆಸರಿನಲ್ಲಿ ಬಿಜೆಪಿ ವಿಭಜಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ವಿವಿಧ ಪ್ರಕರಣ: ಭೂಪೇಂದ್ರ ಹೂಡಾ, ಲಾಲೂ ಪ್ರಸಾದ್​ ವಿಚಾರಣೆ.. ಸೊರೇನ್ ಮನೆಗೆ ಇಡಿ, ದೆಹಲಿಗೆ ಸಿಎಂ ಹೇಮಂತ್​​​

ಕೇಂದ್ರ ಸಚಿವ ಶಂತನು ಠಾಕೂರ್ ಹೇಳಿದ್ದೇನು?: ಕೇಂದ್ರ ಸಚಿವ ಶಂತನು ಠಾಕೂರ್ ಸೋಮವಾರ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಒಂದು ವಾರದೊಳಗೆ ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತರಲಾಗುವುದು. ಶಾಸನವನ್ನು ಏಳು ದಿನಗಳಲ್ಲಿ ತ್ವರಿತವಾಗಿ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಇನ್ನು ಶಂತನು ಠಾಕೂರ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಾಟುವಾ ಸಮುದಾಯದ ಹೆಚ್ಚಿನ ಜನರನ್ನು ಹೊಂದಿರುವ ಬೊಂಗಾವ್​​ನ ಬಿಜೆಪಿ ಸಂಸದರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.