ETV Bharat / bharat

ನಾವು ಆಧುನಿಕ ಅಭಿಮನ್ಯುಗಳಾಗಿ ಚಕ್ರವ್ಯೂಹ ಭೇದಿಸಿದ್ದೇವೆ: ದೇವೇಂದ್ರ ಫಡ್ನವೀಸ್ - DEVENDRA FADNAVIS

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಹಿಂದೆ ಮಹಾರಾಷ್ಟ್ರವು ದೃಢವಾಗಿ ನಿಂತಿದೆ ಎಂದು ಈ ಚುನಾವಣಾ ಫಲಿತಾಂಶ ತೋರಿಸಿದೆ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದರು.

ದೇವೇಂದ್ರ ಫಡ್ನವೀಸ್, ಏಕನಾಥ್​ ಶಿಂಧೆ, ಅಜಿತ್​ ಪವಾರ್​ ಜಂಟಿ ಮಾಧ್ಯಮಗೋಷ್ಠಿ
ದೇವೇಂದ್ರ ಫಡ್ನವೀಸ್, ಏಕನಾಥ್​ ಶಿಂಧೆ, ಅಜಿತ್​ ಪವಾರ್​ ಜಂಟಿ ಮಾಧ್ಯಮಗೋಷ್ಠಿ (IANS)
author img

By ETV Bharat Karnataka Team

Published : Nov 23, 2024, 6:46 PM IST

ಮುಂಬೈ(ಮಹಾರಾಷ್ಟ್ರ): ರಾಜ್ಯದ ಜನತೆ ದಾರಿ ತಪ್ಪಿಸುವಂತಹ ಪ್ರಚಾರ ಮಾಡಿದವರ ವಿರುದ್ಧ ಹೋರಾಡಿದವರ ಪರ ಮತ ಚಲಾಯಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಹಿಂದೆ ಮಹಾರಾಷ್ಟ್ರವು ದೃಢವಾಗಿ ನಿಂತಿದೆ ಎಂದು ಈ ಚುನಾವಣಾ ಫಲಿತಾಂಶ ತೋರಿಸಿದೆ. ಕಳೆದ ಎರಡು ವರ್ಷದಲ್ಲಿ ಪಕ್ಷ ಸಂಘಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವ್ ಮತ್ತು ಹಿರಿಯ ನಾಯಕರಿಗೆ ಮತ್ತು ವಿಶೇಷವಾಗಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ರಾಜ್ಯದಲ್ಲಿ ವಿರೋಧ ಪಕ್ಷಗಳು ಹರಡುತ್ತಿದ್ದ ದಾರಿ ತಪ್ಪಿಸುವಂತಹ ಪ್ರಚಾರವನ್ನು ಮಹಾರಾಷ್ಟ್ರದ ಜನರು ತಿರಸ್ಕರಿಸಿದ್ದಾರೆ. ನಾನು ಮಹಾರಾಷ್ಟ್ರದ ಜನತೆಗೆ ಧನ್ಯವಾದ ಹೇಳುತ್ತೇನೆ. ಆಧುನಿಕ ಅಭಿಮನ್ಯುಗಳಾದ ನಾವು, ಕೊನೆಗೂ ಚಕ್ರವ್ಯೂಹವನ್ನು ಭೇದಿಸಿದ್ದೇವೆ. ಇಡೀ ಮಹಾರಾಷ್ಟ್ರ ಪ್ರಧಾನಿ ಮೋದಿಯವರ ಹಿಂದೆ ಇದೆ. ಮೋದಿ ನೀಡಿದ ಏಕ್ ಹೈ ತೋ ಸೀಫ್ ಹೈ ಎಂಬ ಘೋಷಣೆಯನ್ನು ಮಹಾರಾಷ್ಟ್ರದ ಎಲ್ಲಾ ಸಮುದಾಯಗಳ ಜನರು ಸ್ವಾಗತಿಸಿದ್ದಾರೆ. ನಮಗೆ ಆಶೀರ್ವದಿಸಿದ ನಮ್ಮ ಪ್ರೀತಿಯ ಸಹೋದರಿಯರಿಗೆ (ಲಾಡ್ಲಿ ಬೆಹನಾ ಯೋಜನೆ ಫಲಾನುಭವಿಗಳು)ಧನ್ಯವಾದಗಳು ಎಂದು ಹೇಳಿದರು.

ಒಟ್ಟಾಗಿ ಚರ್ಚಿಸಿ ಸಿಎಂ ಆಯ್ಕೆ: ಪಕ್ಷಗಳು ಗೆದ್ದ ಸ್ಥಾನಗಳ ಆಧಾರದ ಮೇಲೆ ಮುಖ್ಯಮಂತ್ರಿ ಹುದ್ದೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರು ಒಟ್ಟಾಗಿ ಸಿಎಂ ಆಯ್ಕೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಯಾವುದು ನಿಜವಾದ ಶಿವಸೇನೆ ಮತ್ತು ಎನ್​ಸಿಪಿ ಎಂಬ ಪ್ರಶ್ನೆಗೆ ಉತ್ತರಿಸಿ, ಏಕನಾಥ್ ಶಿಂಧೆ ನೇತೃತ್ವದ ಪಕ್ಷ ಗೆದ್ದ ಸ್ಥಾನಗಳನ್ನು ಗಣನೆಗೆ ತೆಗೆದುಕೊಂಡರೆ ಅದು ನಿಜವಾದ ಶಿವಸೇನೆಯಾಗಿದೆ. ಇದು ಬಾಳಾಸಾಹೇಬ್ ಠಾಕ್ರೆ ಅವರ ಆಲೋಚನೆಗಳಿಗೆ ಬದ್ಧವಾಗಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಗೆದ್ದ ಸ್ಥಾನಗಳನ್ನು ಪರಿಗಣಿಸಿದರೆ ಈಗ ಇದು ನಿಜವಾದ ಎನ್‌ಸಿಪಿಯಾಗಿದೆ ಎಂದರು.

ಇದನ್ನೂ ಓದಿ: ಪರಿಣಾಮ ಬೀರದ ಜರಾಂಗೆ ಪಾಟೀಲ್ ಮರಾಠಾ ಕೋಟಾ ವಿಚಾರ: ಮಹಾಯುತಿ ತಂತ್ರಗಾರಿಕೆಗೆ ಮೇಲುಗೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.