ETV Bharat / bharat

ವಯನಾಡ್​ ಭೂ ಕುಸಿತ: ಸಾವಿನ ಸಂಖ್ಯೆ 308ಕ್ಕೇರಿಕೆ: 300ಕ್ಕೂ ಹೆಚ್ಚು ಜನ ಕಣ್ಮರೆ, ಮುಂದುವರಿದ ಕಾರ್ಯಾಚರಣೆ - wayanad landslide water combing - WAYANAD LANDSLIDE WATER COMBING

ಭೂ ಕುಸಿತದಿಂದಾಗಿ ಮಲಪ್ಪುರಂನವರೆಗೆ ಚಾಲಿಯಾರ್ ​ನದಿಯಲ್ಲಿ 143 ಮೃತ ದೇಹ ಮತ್ತು ಕೆಲ ಮೃತ ದೇಹಗಳ ಭಾಗಗಳು ಕೊಚ್ಚಿಕೊಂಡು ಬಂದಿರುವುದು ಪತ್ತೆಯಾಗಿದೆ. 40 ವಿವಿಧ ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಮುಂದುವರೆದಿದೆ.

wayanad-landslide-approximately-300-people-still-missing-says-adgp-m-r-ajith-kumar
ವಯನಾಡು ಭೂ ಕುಸಿತ (IANS)
author img

By PTI

Published : Aug 2, 2024, 11:39 AM IST

ವಯನಾಡ್​​, ಕೇರಳ: ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಭೂ ಭೂಕುಸಿತದಲ್ಲಿ 308 ಸಾವುಗಳು ಸಂಭವಿಸಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಖಚಿತಪಡಿಸಿದ್ದಾರೆ. ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪ್ರದೇಶದ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ.

ಭೂಕುಸಿತದಿಂದ ಪ್ರತ್ಯೇಕವಾಗಿರುವ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳನ್ನು ಸಂಪರ್ಕಿಸುವ ಇರುವಂಜಿಪ್ಪುಳ ನದಿಯ ಮೇಲೆ ನಿರ್ಮಿಸಲಾದ 190 ಅಡಿ ಬೈಲಿ ಸೇತುವೆಯನ್ನು ಭಾರತೀಯ ಸೇನೆಯು ಇಂದು ಮುಂಜಾನೆ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಿದೆ.

ಮತ್ತೊಂದು ಕಡೆ ಈ ದುರಂತದ ಬಗ್ಗೆ ಮಾತನಾಡಿರುವ ಎಡಿಜಿಪಿ ಎಂ ಆರ್​ ಅಜಿತ್​ ಕುಮಾರ್​, ಪ್ರವಾಹ ಪೀಡಿತ ಪ್ರದೇಶ ಮುಂಡಕ್ಕೈನಲ್ಲಿ ಕಣ್ಮರೆಯಾದವರ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದ್ದಾರೆ. 300 ಜನರು ಕಣ್ಮರೆಯಾಗಿದ್ದು, ಕಂದಾಯ ಇಲಾಖೆ ವಿವರಗಳ ಸಂಗ್ರಹಿಸಿದ ನಂತರ, ಇನ್ನೊಂದೆರಡು ಮೂರು ದಿನದಲ್ಲಿ ಈ ಕುರಿತು ಅಂತಿಮ ಚಿತ್ರಣ ಸಿಗಲಿದೆ ಎಂದರು.

ಭೂ ಕುಸಿತಕ್ಕೆ ಒಳಗಾಗಿರುವ ಪ್ರದೇಶವನ್ನು ಆರು ವಲಯವಾಗಿ ವಿಭಾಗಿಸಲಾಗಿದೆ. ಶ್ವಾನಗಳ ಸಹಾಯದಿಂದ ಪ್ರತ್ಯೇಕ ತಂಡಗಳಿಂದ ಮೃತರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ವಿಶೇಷ ಏಜೆನ್ಸಿಗಳ ಸಹಾಯದಿಂದ ಕೇರಳ ಪೊಲೀಸರು ಕೋಯಿಕ್ಕೋಡ್ ನಗರದವರೆಗೆ ಚಾಲಿಯಾರ್ ನದಿಯಲ್ಲಿ ಕೂಂಬಿಂಗ್ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದರ ಜೊತೆಗೆ ನಾವು ನದಿ ಕೂಂಬಿಂಗ್​ ಸಹ ನಡೆಸಲಿದ್ದೇವೆ. ನಿನ್ನೆ ಪೊತುಕಲ್​ನಲ್ಲಿ ಮೃತ ದೇಹ ಪತ್ತೆ ಮಾಡಿದೆವು. ಇದೀಗ ಕೋಯಿಕ್ಕೋಡ್​ ನಗರದವರೆಗೆ ಚಾಲಿಯರ್​ ನದಿಯ ಎಲ್ಲ ದಂಡೆಗಳನ್ನು ಠಾಣಾ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡುವಂತೆ ಎಲ್ಲಾ ಪೊಲೀಸ್​ ಠಾಣೆಗಳಿಗೆ ನಿರ್ದೇಶಿಸಲಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿನ ಚಾಲಿಯರ್​ ನದಿ ದಂಡೆಯಲ್ಲೂ ಕೆಲವು ಮೃತ ದೇಹ ಪತ್ತೆಯಾಗಿರುವ ವರದಿ ಬಂದಿದೆ. ವಯನಾಡಿನಲ್ಲಿ ಆದ ಭೂ ಕುಸಿತದಿಂದ ಮಲಪ್ಪುರಂನವರೆಗೆ ಚಾಲಿಯಾರ್​ನದಿಯಲ್ಲಿ 143 ಮೃತ ದೇಹ ಮತ್ತು ಕೆಲವು ದೇಹದ ಭಾಗಗಳು ಕೊಚ್ಚಿಕೊಂಡು ಬಂದಿರುವುದು ಪತ್ತೆಯಾಗಿದೆ ಎಂದು ವಿವರಣೆ ನೀಡಿದರು.

ವಯನಾಡ್​ ಜಿಲ್ಲಾಡಳಿತದ ಪ್ರಕಾರ, 127 ಮಕ್ಕಳು ಮತ್ತು 76 ಮಹಿಳೆಯರು ಸಾವನ್ನಪ್ಪಿದ್ದು, 225 ಮಂದಿ ಗಾಯಗೊಂಡಿದ್ದಾರೆ. ಮುಂಡಕ್ಕೈ ಮತ್ತು ಚೂರ್ಮಲಾ ಪ್ರದೇಶಗಳು ಗಂಭೀರವಾಗಿ ಹಾನಿಗೊಂಡಿದೆ ಎಂದರು.

40 ತಂಡಗಳಿಂದ ರಕ್ಷಣಾ ಕಾರ್ಯಾಚರಣೆ: ಭೂ ಕುಸಿತವಾಗಿರುವ ವಯನಾಡು ಜಿಲ್ಲೆಯಲ್ಲಿ ನಾಲ್ಕನೇ ದಿನದ ರಕ್ಷಣೆ ಕಾರ್ಯ ಭರದಿಂದ ಸಾಗಿದ್ದು, 40 ತಂಡಗಳು ಈ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ. ಸೇನಾ ತಂಡ 190 ಅಡಿ ಉದ್ದದ ಬೈಲಿ ಸೇತುವೆ ಕಟ್ಟಿದ್ದು ಮುಂಜಾನೆಯೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಈ ಸೇತುವೆ ಮೂಲಕ ಪ್ರವಾಹಕ್ಕೆ ಒಳಗಾಗಿರುವ ಮುಂಡಕ್ಕೈ ಮತ್ತು ಚೂರಲ್ಮಾಲಾ ಗ್ರಾಮಗಳ ನಡುವೆ ಸಂಪರ್ಕ ನಡೆಸಿದ್ದು, ಸೇತುವೆ ಮೂಲಕ ಅಂಬ್ಯುಲೆನ್ಸ್​​ ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 7ಗಂಟೆಯಿಂದಲೇ ಶ್ವಾನ ದಳಗಳೊಂದಿಗೆ ಪತ್ತೆ ಕಾರ್ಯ ನಡೆಸಲಾಗಿದೆ. ಪ್ರವಾಹ ಪೀಡಿತ ಪ್ರದೇಶವನ್ನು ಆರು ವಲಯವಾಗಿ ವಿಭಜಿಸಲಾಗಿದೆ. ಮೊದಲ ವಲಯ ಅಟ್ಟಮಲ ಮತ್ತು ಆರನ್ಮಲ, ಎರಡನೇಯದು ಮುಂಡಕ್ಕೈ, ಮೂರನೇಯದಯ ಪುಂಚಿರಿಮಟ್ಟಂ, ನಾಲ್ಕನೇಯದು ವೆಳ್ಳರಿಮಲ ಗ್ರಾಮ, ಐದನೇಯದು ಜಿವಿಎಚ್‌ಎಸ್‌ಎಸ್ ವೆಳ್ಳರಿಮಲ ಅಂತಿವಾಗಿ ನದಿ ದಂಡೆಗಳಲ್ಲಿ ಪತ್ತೆ ಕಾರ್ಯಕ್ಕೆ 40 ತಂಡಗಳು ಸಜ್ಜಾಗಿವೆ.

ಸೇನೆ, ಎನ್​ಡಿಆರ್​ಎಫ್​, ಕೋಸ್ಟಲ್​ ಗಾರ್ಡ್​​, ನೌಕಾ ಮತ್ತು ಎಂಜಿಇ ಜೊತೆಗೆ ಸ್ಥಳೀಯರು ಮತ್ತು ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿ ಒಳಗೊಂಡ ಜಂಟಿ ರಕ್ಷಣಾ ತಂಡ ರೂಪುಗೊಂಡಿದೆ. ಇದರ ಜೊತೆಗೆ ಪೊಲೀಸ್​ ಹೆಲಿಕ್ಯಾಪ್ಟರ್​ ಬಳಕೆ ಮಾಡಿ ಮತ್ತೊಂದು ಪತ್ತೆ ಕಾರ್ಯ ಆರಂಭಿಸಲಾಗಿದೆ. ಸದ್ಯ ಆರು ಶ್ವಾನಗಳು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದು, ತಮಿಳುನಾಡಿನಿಂದ ಇನ್ನು ನಾಲ್ಕು ಶ್ವಾನಗಳು ವಯನಾಡಿಗೆ ಬರಲಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಯನಾಡ್‌ ಭೂಕುಸಿತ: ನಿಜಕ್ಕೂ ಏನಾಗಿರಬಹುದು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.