ETV Bharat / bharat

ನಿಮ್ಮ ಆಧಾರ್​ ​ಬಳಕೆಯ ಹಿಸ್ಟರಿ ತಿಳಿಯಬೇಕೇ?: ಹಾಗಾದ್ರೆ ಈ ಸರಳ ಹಂತಗಳನ್ನು ಅನುಸರಿಸಿ - Aadhaar usage history

ನಿಮ್ಮ ಆಧಾರ್​ ಕಾರ್ಡನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳುವ ಬಗ್ಗೆ ಭಯವಿದೆಯೇ?. ಹಾಗಿದ್ದರೆ, ಚಿಂತೆ ಏಕೆ?, ಹಿಸ್ಟರಿ ತಿಳಿಯಲು ಈ ಕೆಳಗಿನ ಸುಲಭ ವಿಧಾನಗಳನ್ನು ಅನುಸರಿಸಿ.

ನಿಮ್ಮ ಆಧಾರ್​ ​ಬಳಕೆಯ ಹಿಸ್ಟರಿ ತಿಳಿಯಲು ಬಯಸುತ್ತೀರಾ?

author img

By ETV Bharat Karnataka Team

Published : Mar 20, 2024, 8:34 AM IST

ಪ್ರಸ್ತುತ ದಿನಮಾನಗಳಲ್ಲಿ ಆಧಾರ್ ಕಾರ್ಡ್​ ಎಂಬುದು ಎಲ್ಲದಕ್ಕೂ ಕಡ್ಡಾಯವಾಗಿರುವ ದಾಖಲೆ. ಬ್ಯಾಂಕ್ ಖಾತೆ ತೆರೆಯಲು, ಹೊಸ ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಸಾಲಕ್ಕೆ, ಸರ್ಕಾರದ ಯೋಜನೆಗಳು ಇತ್ಯಾದಿಗಳಿಗೆ ಆಧಾರ್ ಬೇಕೇ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಗೊತ್ತಿಲ್ಲದಂತೆ ಬೇರೊಬ್ಬರು ನಮ್ಮ ಆಧಾರ್​ ಬಳಸಿಕೊಂಡು ಸಿಮ್​ ಖರೀದಿ ಮಾಡುವುದು ಅಥವಾ ನಮ್ಮ‌ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಸೃಷ್ಟಿಸುವಂಥ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಹಾಗಾಗಿ ಈ ಎಲ್ಲದರಿಂದ ಎಚ್ಚರಿಕೆ ವಹಿಸಲು ಆಗಾಗ್ಗೆ ನಮ್ಮ ಆಧಾರ್ ಬಳಕೆಯ ಹಿಸ್ಟರಿಯನ್ನು ಪರಿಶೀಲಿಸುವುದು ಒಳ್ಳೆಯದು.

ಆಧಾರ್​ ಹಿಸ್ಟರಿ ಪರಿಶೀಲಿಸುವುದು ಹೇಗೆ?:

  • ಮೊದಲು ನಿಮ್ಮ ಮೊಬೈಲ್​ ಅಥವಾ ಗೆಜೆಟ್​ಗಳಲ್ಲಿ UIDAI ಅಧಿಕೃತ ಪೋರ್ಟಲ್ https://uidai.gov.in/en/ ವೆಬ್‌ಸೈಟ್​ ಅನ್ನು ತೆರೆಯಿರಿ.
  • ನಂತರ ಮೇಲೆ ಕಾಣುವ My Aadhaar ಟ್ಯಾಬ್ ಮೇಲೆ ಟ್ಯಾಪ್​ ಮಾಡಿ, Aadhaar Service ಮೇಲೆ ಕ್ಲಿಕ್​ ಮಾಡಿ.
  • ಅಲ್ಲಿ ಕಾಣಿಸುವ Aadhaar Authentication History ಒತ್ತಿ.
  • ತಕ್ಷಣವೇ ಲಾಗಿನ್ ಮಾಡಲು ಹೊಸ ಪುಟ ತೆರೆದುಕೊಳ್ಳುತ್ತದೆ.
  • ಲಾಗಿನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ, ಒಟಿಪಿ ನಮೂದಿಸಿ ಲಾಗಿನ್ ಆಗಿ.
  • ಕೆಳಗೆ ಸ್ಕ್ರಾಲ್ ಮಾಡಿದ ಮೇಲೆ Authentication History ಎಂಬುದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.
  • ಅಲ್ಲಿ ALL ಆಯ್ಕೆ ಮಾಡಿ ಮತ್ತು ಡೇಟಾವನ್ನು ಆಯ್ಕೆ ಮಾಡಿಕೊಂಡು Fetch Authentication History ಮೇಲೆ ಕ್ಲಿಕ್ ಮಾಡಿ.
  • ತಕ್ಷಣವೇ, ಕಳೆದ ಆರು ತಿಂಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಯಾವುದಕ್ಕೆಲ್ಲಾ ಬಳಸಿದ್ದೀರಿ ಎಂಬುದರ ಕುರಿತು ಎಲ್ಲಾ ಮಾಹಿತಿ ಲಭಿಸುತ್ತದೆ. ಇಷ್ಟೇ ಸಿಂಪಲ್​.!

ಈ ಮೂಲಕ ಆರು ತಿಂಗಳವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಸಲಾಗಿದೆ ಮತ್ತು ಯಾವುದಕ್ಕೆ ಬಳಕೆಯಾಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ನಿಮ್ಮನ್ನು ಹೊರತುಪಡಿಸಿ ಬೇರೆ ಯಾರಾದರೂ ನಿಮ್ಮ ಆಧಾರ್ ಕಾರ್ಡ್ ಬಳಸಿರುವುದು ಕಂಡುಬಂದರೆ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.