ETV Bharat / bharat

ಭಾರೀ ಮಳೆಗೆ ಹೈದರಾಬಾದ್‌ನಲ್ಲಿ ಗೋಡೆ ಕುಸಿತ: 7 ಮಂದಿ ಸಾವು - Wall Collapse - WALL COLLAPSE

ಹೈದರಾಬಾದ್‌ನಲ್ಲಿ ಮಂಗಳವಾರ ಸಂಜೆ ಸುರಿದ ಜಡಿ ಮಳೆಗೆ ಗೋಡೆ ಕುಸಿದು ಹಲವು ಮಂದಿ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : May 8, 2024, 9:03 AM IST

ಹೈದರಾಬಾದ್(ತೆಲಂಗಾಣ): ಹೈದರಾಬಾದ್​ನಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬಾಚುಪಲ್ಲಿ ಎಂಬಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಒಡಿಶಾ ಮತ್ತು ಛತ್ತೀಸ್‌ಗಢ ನಿವಾಸಿಗಳೆಂದು ಗುರುತಿಸಲಾಗಿದೆ.

ರೇಣುಕಾ ಎಲ್ಲಮ್ಮ ಕಾಲೊನಿಯಲ್ಲಿ ಗೋಡೆ ಕುಸಿದಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ.

ತಿರುಪತಿ ರಾವ್ ಮಜ್ಜಿ (20), ಶಂಕರ್ (22), ರಾಜು (25), ಖುಷಿ, ರಾಮ್ ಯಾದವ್ (34), ಗೀತಾ (32) ಮತ್ತು ಹಿಮಾಂಶು (14) ಮೃತಪಟ್ಟವರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಬರೋಬ್ಬರಿ 810 ಕೆ.ಜಿ ಬಂಗಾರ ಸಾಗಿಸುತ್ತಿದ್ದ ಟ್ರಕ್​​ ಅಪಘಾತ: ಅಷ್ಟಕ್ಕೂ ಮಧ್ಯರಾತ್ರಿ ನಡೆದಿದ್ದೇನು? - What happened in Midnight

ETV Bharat Logo

Copyright © 2025 Ushodaya Enterprises Pvt. Ltd., All Rights Reserved.