ETV Bharat / bharat

ತಹಶೀಲ್ದಾರ್ ಹುದ್ದೆಗೆ ರಾಜೀನಾಮೆ ನೀಡಿದ ಭಾರತದ ವೇಗದ ಈಜುಪಟು - ಭಾರತೀಯ ಹಿರಿಯ ಈಜುಪಟು

Indian swimmer Virdhawal Khade: ಒಲಿಂಪಿಯನ್ ಈಜುಪಟು ವಿರ್ಧಾವಲ್ ಖಾಡೆ ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಭವಿಷ್ಯದ ಪೀಳಿಗೆಯ ಈಜುಗಾರರಿಗೆ ತರಬೇತಿ ನೀಡುವತ್ತ ಅವರು ಗಮನ ಹರಿಸಿದ್ದಾರೆ.

Virdhawal Khade Resigns from Government of Maharashtra to Work as Swimming Coach
ಒಲಿಂಪಿಯನ್ ಈಜುಪಟು ವಿರ್ಧಾವಲ್ ಖಾಡೆ
author img

By ETV Bharat Karnataka Team

Published : Feb 8, 2024, 6:44 PM IST

ಹೈದರಾಬಾದ್: ಭಾರತೀಯ ಹಿರಿಯ ಈಜುಪಟು ವಿರ್ಧಾವಲ್ ಖಾಡೆ ಅವರು ತಮ್ಮ ಕೋಚಿಂಗ್ ವೃತ್ತಿಜೀವನದ ಮೇಲೆ ಗಮನ ಹರಿಸುವ ಸಲುವಾಗಿ ತಹಶೀಲ್ದಾರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 2010ರಲ್ಲಿ ನಡೆದ ಏಷ್ಯನ್ ಗೇಮ್ಸ್​ನ 50 ಮೀಟರ್​ ಈಜು ಸ್ಪರ್ಧೆಯಲ್ಲಿ ಇವರು ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದರು. ಮೂಲತಃ ಮಹಾರಾರಷ್ಟ್ರದ ಕೊಲ್ಲಾಪುರದವರಾದ ವಿರ್ಧಾವಲ್, 2012 ರಿಂದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ.

"ನಾನು ನನ್ನ ರಾಜೀನಾಮೆಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದೇನೆ. ಭವಿಷ್ಯದ ಪೀಳಿಗೆಯ ಈಜುಗಾರರಿಗೆ ತರಬೇತಿ ನೀಡುವತ್ತ ಗಮನ ಹರಿಸುವ ಸಲುವಾಗಿ ತಹಶೀಲ್ದಾರ್ ಹುದ್ದೆಯನ್ನು ತೊರೆಯಬೇಕಾಯಿತು. ಇನ್ನು ಮುಂದೆ ಈಜು ತರಬೇತುದಾರನಾಗಿ ನನ್ನ ಮುಂದಿನ ಪ್ರಯಾಣ ಸಾಗಲಿದೆ. ಭಾರತಕ್ಕೆ ಒಲಿಂಪಿಕ್ ಪದಕವನ್ನು ತಂದುಕೊಡುವುದು ನನ್ನ ಮುಂದಿನ ಗುರಿ" ಎಂದು ವಿರ್ಧಾವಲ್ ಖಾಡೆ ತಮ್ಮ ಎಕ್ಸ್​ (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ನಿರ್ಧಾರದ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, "ಈಜು ಕ್ರೀಡೆಯಲ್ಲಿ ಭವಿಷ್ಯದ ಯುವ ಆಟಗಾರರನ್ನು ಹುರಿದುಂಬಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿರುವೆ. ಭಾರತಕ್ಕೆ ಮತ್ತಷ್ಟು ಒಲಿಂಪಿಕ್ ಪದಕಗಳನ್ನು ತರುವುದು ಮತ್ತು ಉತ್ತಮ ಈಜುಪಟುಗಳನ್ನು ನಿರ್ಮಿಸುವುದು ನನ್ನ ಮುಂದಿನ ಗುರಿ" ಎಂದು ಅವರು ಹೇಳಿದ್ದಾರೆ.

"ಈಜುಪಟು ಆಗಿ ಕಳೆದ 11 ವರ್ಷಗಳಿಂದ ಸರ್ಕಾರಿ ಉದ್ಯೋಗದಲ್ಲಿದ್ದೆ. ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶೇ. 100ರಷ್ಟು ಸಮರ್ಪಣಾ ಮನೋಭಾವ ಇರಬೇಕು. ಎರಡು ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುವಾಗ ಆಗುವ ತೊಂದರೆಗಳನ್ನು ಗಮನಿಸಿರುವೆ. ಎರಡಕ್ಕೂ ನ್ಯಾಯ ಒದಗಿಸುವುದು ಕಷ್ಟ. ಜನ ನನ್ನನ್ನು ಈಗ ಈಜು ತರಬೇತುದಾರ ಎಂದು ಕರೆಯಬಹುದು. ವಿದ್ಯಾರ್ಥಿಗಳಿಗೆ ಶಕ್ತಿ ಮೀರಿ ತರಬೇತಿ ನೀಡುವೆ. ಆದರೆ, ವಿಭಿನ್ನ ವಿಭಾಗಗಳಲ್ಲಿ ಕೆಲಸ ಮಾಡುವಾಗ ಅದು ಕಷ್ಟಕರವಾಗಿತ್ತು. ನನ್ನ ತರಬೇತುದಾರರು ನನಗೆ ಹಾಗೇ ತರಬೇತಿ ನೀಡಿದ್ದರು. ಅವರು ಸಂಪೂರ್ಣ ಸಮರ್ಪಣೆ ಮತ್ತು ಬದ್ಧತೆಯನ್ನು ತೋರಿಸದಿದ್ದರೆ ನಾನು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ನನ್ನ ತರಬೇತುದಾರರು ಈ ರೀತಿ ಕೆಲಸ ಮಾಡಿದ್ದರಿಂದಲೇ ನಾನು ಕ್ರೀಡೆಯಲ್ಲಿ ಇಷ್ಟು ಪ್ರಗತಿ ಸಾಧಿಸುವುದನ್ನು ನೀವು ನೋಡುತ್ತಿದ್ದೀರಿ. ಉದಯೋನ್ಮುಖ ಈಜುಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತು ರಾಜ್ಯಕ್ಕೆ (ಮಹಾರಾಷ್ಟ್ರ) ಮತ್ತಷ್ಟು ಪದಕ ವಿಜೇತ ಕ್ರೀಡಾಪಟುಗಳನ್ನು ನೀಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಕೆಲಸದ ಜೊತೆಗೆ ಈಜುಪಟುವಾಗಿ ತಾವು ಎದುರಿಸಿದ ಸಮಸ್ಯೆಗಳನ್ನು ಸಹ ಅವರು ಬಹಿರಂಗಪಡಿಸಿದರು. ‘‘ರಜೆಗಳ ಸಮಸ್ಯೆಗಳಿಂದ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲು ಕಷ್ಟ. ಕಳೆದ ವರ್ಷ ಏಷ್ಯನ್ ಗೇಮ್ಸ್‌ಗೆ ತಯಾರಿ ನಡೆಸಲು ತಾವು ವೇತನರಹಿತ ರಜೆ ತೆಗೆದುಕೊಳ್ಳಬೇಕಾಯಿತು. ಆರರಿಂದ ಏಳು ತಿಂಗಳವರೆಗೆ ನಾನು ವೇತನ ರಹಿತ ರಜೆಯಲ್ಲಿದ್ದೆ. ಇದು ನನಗೆ ದೊಡ್ಡ ಹಿನ್ನಡೆಯಾಗಿತ್ತು. ದುಡಿಯುವ ವಯಸ್ಸಿನಲ್ಲಿ ಪೋಷಕರಿಂದ ಹಣ ಕೇಳುವುದು ಬಹಳ ನೋವಿನ ಸಂಗತಿ. ಆ ಕಾರಣದಿಂದ ತಾವು ಸರ್ಕಾರಿ ಕೆಲಸದ ಜೊತೆಗೆ ಈಜುಪಟುವಾಗಿ ಮುಂದುವರೆಯಬೇಕಾಯಿತು‘‘ ಎಂದು ವಿರ್ಧಾವಲ್ ತಮ್ಮ ಸಾಧನೆಯ ಹಾದಿಯನ್ನು ಬಿಚ್ಚಿಟ್ಟರು.

Virdhawal Khade Resigns from Government of Maharashtra to Work as Swimming Coach
ಒಲಿಂಪಿಯನ್ ಈಜುಪಟು ವಿರ್ಧಾವಲ್ ಖಾಡೆ

"ಕ್ರೀಡೆ ಬಹಳಷ್ಟು ಬದಲಾಗಿದೆ. ಹೊಸ ಅಕಾಡೆಮಿಗಳು ಸ್ಥಾಪನೆಯಾಗಿವೆ. ದೇಶದಲ್ಲಿ ಅಕಾಡೆಮಿಗಳ ಸಂಖ್ಯೆ ಹೆಚ್ಚಿದೆ. ಗ್ಲೆನ್‌ಮಾರ್ಕ್ ಮತ್ತು ಜೆಎಸ್‌ಡಬ್ಲ್ಯು ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡಿವೆ. ಹೊಸ ಹೊಸ ಅಕಾಡೆಮಿಗಳನ್ನು ಪ್ರಾರಂಭಿಸಿದ್ದಾರೆ. ಆದರೆ, ಮಹಾರಾಷ್ಟ್ರವು ಹಿಂದುಳಿದಿರುವುದು ದುರದೃಷ್ಟ. ಇತರೆ ರಾಜ್ಯಕ್ಕೆ ಹೋಲಿಸಿದರೆ ನಾವು ಪದಕ ಪಟ್ಟಿಯಲ್ಲಿ ಹಿಂದಿದ್ದೇವೆ. ಉನ್ನತ ಮಟ್ಟದ ತರಬೇತುದಾರರು ಮತ್ತು ಸೌಲಭ್ಯಗಳ ಕೊರತೆ ಇದಕ್ಕೆ ಕಾರಣ ಇರಬಹುದು. ಅದೇನೇ ಇರಲಿ, ಶ್ರೇಷ್ಠ ಪಟುಗಳನ್ನು ನಿರ್ಮಿಸುವ ಕೆಲಸ ಮಾಡುವೆ" ಎಂದು ಮಿರ್ಧಾವಲ್​ ಅವರು ಹೇಳಿದರು.

ಇದನ್ನೂ ಓದಿ: ಟಿ20 ವಿಶ್ವಕಪ್, ಐಪಿಎಲ್‌ನಲ್ಲಿ ರಿಷಬ್ ಪಂತ್ ಆಡುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.