ಭಾಗಲ್‌ಪುರ, ಬಿಹಾರ: ಜಿಲ್ಲೆಯ ನವಗಾಚಿಯಾದ ರಂಗ್ರಾದಲ್ಲಿ ಭಾನುವಾರ ಮಹಿಳೆಯ ಶವ ಪತ್ತೆಯಾದ ನಂತರ ವಾತಾವರಣ ಹದಗೆಟ್ಟಿದೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಯಾದ ನಂತರ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಸಮಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿ ಗದ್ದಲ ಸೃಷ್ಟಿಸಿದರು. ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹಿಳೆ ದಿಢೀರ್ ನಾಪತ್ತೆ: ಮೂರು ದಿನಗಳ ಹಿಂದೆ ಮಹಿಳೆಯೊಬ್ಬರು ಹಠಾತ್ತನೆ ನಾಪತ್ತೆಯಾಗಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಮಹಿಳೆಯ ಶವ ಪತ್ತೆಯಾದ ನಂತರ ಮೃತನ ಕುಟುಂಬಸ್ಥರು ಆಕ್ರೋಶಗೊಂಡು ಕೋಲಾಹಲ ಸೃಷ್ಟಿಸಿದ್ದರು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡು ಮೂರು ದ್ವಿಚಕ್ರವಾಹನ, ಕಾರು ಹಾಗೂ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.
ಪೊಲೀಸರ ನಿರ್ಲಕ್ಷ್ಯ ಆರೋಪ: ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಯಾದಾಗ ಮೃತರ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಈ ನಿರ್ಲಕ್ಷ್ಯದಿಂದ ಇಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಜನರು ದೂರುತ್ತಿದ್ದಾರೆ. ಮಹಿಳೆ ಕಾಣೆಯಾಗಿರುವ ದೂರು ದಾಖಲಿಸಿಕೊಂಡರೂ ಪೊಲೀಸರು ಗಂಭೀರತೆ ತೋರಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕುಪಿತಗೊಂಡ ಕುಟುಂಬಸ್ಥರು ಗಲಾಟೆ: ಫೆಬ್ರವರಿ 16 ರಂದು ಶೋಭಾ ದೇವಿ ಹಾಲು ನೀಡಲು ಹೋಗಿ ಮನೆಗೆ ಹಿಂತಿರುಗಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಮಹಿಳೆ ಪತ್ತೆಯಾಗಿರಲಿಲ್ಲ. ಭಾನುವಾರ ದಕ್ಷಿಣಬಾರಿ ತೊಲಾದಿಂದ ಶವ ಹೊರತೆಗೆಯಲಾಗಿತ್ತು. ಆ ಬಳಿಕ ಪರಿಸ್ಥಿತಿ ಹದಗೆಟ್ಟಿತ್ತು.
ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಸದ್ಯದ ಪರಿಸ್ಥಿತಿ ಶಾಂತವಾಗಿದೆ. ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಕೆಲವರನ್ನು ಬಂಧಿಸಲಾಗಿದೆ. ಪೊಲೀಸರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲಾಗುವುದು. ಒಂದು ವೇಳೆ ಪೊಲೀಸರ ವಿರುದ್ಧ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನವಗಾಚಿಯಾ ಎಸ್ಪಿ ಪುರಾನ್ ಝಾ ಹೇಳಿದ್ದಾರೆ.
ಗ್ರಾಮದಲ್ಲಿ ಭುಗಿಲೆದ್ದ ಆಕ್ರೋಶ: ಮಾಹಿತಿ ಪ್ರಕಾರ, ರಂಗ್ರಾದ ದಕ್ಷಿಣಬರಿ ತೋಲಾದಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್ ವಾಹನಕ್ಕೂ ಹಾನಿಯಾಗಿದೆ. ಸಿಟ್ಟಿಗೆದ್ದ ಜನರು ಹಲವರಿಗೆ ಥಳಿಸಿದ್ದಾರೆ, ಅಷ್ಟೇ ಅಲ್ಲ ಈ ಘಟನೆ ವರದಿ ಮಾಡಲು ಹೋದ ಕೆಲ ಪತ್ರಕರ್ತರಿಗೂ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಓದಿ: ಶಂಭು ಗಡಿಯಲ್ಲಿ ರೈತರ 'ದಿಲ್ಲಿ ಚಲೋ' ಹೋರಾಟ ತೀವ್ರ: ಇಂದು 4ನೇ ಸುತ್ತಿನ ಮಾತುಕತೆ