ETV Bharat / bharat

ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್​​ನ ದಿಗ್ಗಜ ರತನ್​ ಟಾಟಾ ಇನ್ನಿಲ್ಲ

ಉದ್ಯಮ ಸಾಮ್ರಾಜ್ಯದ ಸಾಮ್ರಾಟ ರತನ್​ ಟಾಟಾ ಇನ್ನಿಲ್ಲ. 86ನೇ ವಯಸ್ಸಿನಲ್ಲಿ ಅವರು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

veteran-industrialist-ratan-tata-dies-at-86at
ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್​​ನ ದಿಗ್ಗಜ ರತನ್​ ಟಾಟಾ ಇನ್ನಿಲ್ಲ: ಗಣ್ಯರ ಸಂತಾಪ (ETV Bharat)
author img

By PTI

Published : Oct 10, 2024, 6:25 AM IST

ಮುಂಬೈ: ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ನೇವಲ್ ಟಾಟಾ ವಯೋಸಹಜ ಅನಾರೋಗ್ಯ ಕಾರಣಗಳ ಹಿನ್ನೆಲೆಯಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್​ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ಕೂಡಾ ನೀಡಲಾಗಿತ್ತು.

ಆ ಬಳಿಕ ಟಾಟಾ ಗ್ರೂಪ್ ಅಧಿಕಾರಿಗಳು ಏನನ್ನೂ ದೃಢೀಕರಿಸಲಿಲ್ಲ ಅಥವಾ ನಿರಾಕರಿಸಲಿಲ್ಲವಾದರೂ ಅವರನ್ನು ಇಂಟೆನ್ಸಿವ್​ ಕೇರ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು.

ಚಂದ್ರಶೇಖರನ್​​ ರಿಂದ ಸಂತಾಪ: ಟಾಟಾ ಸನ್ಸ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಟಾಟಾ ಗ್ರೂಪ್​ನ ವರಿಷ್ಠರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟಾಟಾ ಗ್ರೂಪ್‌ಗೆ ಮಾತ್ರವಲ್ಲದೇ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ನಿಜವಾದ ಹಾಗೂ ಅಸಾಧಾರಣ ನಾಯಕರಾದ ರತನ್ ನೇವಲ್ ಟಾಟಾ ಅವರಿಗೆ ಭಾರವಾದ ಹೃದಯ ಹಾಗೂ ಭಾವನೆಯೊಂದಿಗೆ ವಿದಾಯ ಹೇಳುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

ಟಾಟಾ ತನ್ನ ನೈತಿಕ ದಿಕ್ಸೂಚಿಗೆ ಬದ್ದ: ಟಾಟಾ ಗ್ರೂಪ್‌ಗೆ ಟಾಟಾ ಅವರು ಅಧ್ಯಕ್ಷರಿಗಿಂತ ಹೆಚ್ಚು. ನನಗೆ, ಅವರು ಮಾರ್ಗದರ್ಶಕರಾಗಿದ್ದರು. ಅಷ್ಟೇ ಅಲ್ಲ ಸ್ನೇಹಿತರಾಗಿದ್ದರು. ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆಗೆ ಅಚಲವಾದ ಬದ್ಧತೆಯೊಂದಿಗೆ ಟಾಟಾ ಗ್ರೂಪ್ ಅವರ ಉಸ್ತುವಾರಿಯಲ್ಲಿ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿಕೊಂಡಿತ್ತು. ಅಷ್ಟೇ ಅಲ್ಲ ಕಂಪನಿ ಯಾವಾಗಲೂ ತಮ್ಮ ನೈತಿಕ ದಿಕ್ಸೂಚಿಗೆ ಬದ್ಧವಾಗಿದೆ ಎಂದು ಚಂದ್ರಶೇಖರನ್​ ಹೇಳಿದ್ದಾರೆ.

ರತನ್​​ ಅವರ ತತ್ವಗಳ ಅಡಿ ಕೆಲಸ ಮುಂದುವರೆಯುತ್ತೆ: ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ಟಾಟಾ ಅವರ ಸಮರ್ಪಣೆ ಕೋಟ್ಯಂತರ ಜನರ ಜೀವನವನ್ನು ಮುಟ್ಟಿದೆ. ಶಿಕ್ಷಣದಿಂದ ಆರೋಗ್ಯದವರೆಗೆ ಅವರು ತೆಗೆದುಕೊಂಡ ಉಪಕ್ರಮಗಳು ಸಮಾಜದಲ್ಲಿ ತಮ್ಮದೇ ಛಾಪನ್ನು ಮೂಡಿಸಿವೆ. ಮುಂದಿನ ಪೀಳಿಗೆಗೆ ಅವರ ಆದರ್ಶಗಳು ಮುಂದುವರೆಯುತ್ತವೆ ಎಂದಿದ್ದಾರೆ. ಇಡೀ ಟಾಟಾ ಕುಟುಂಬದ ಪರವಾಗಿ ನಾನು ಅವರ ಪ್ರೀತಿಪಾತ್ರರಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರು ಉತ್ಸಾಹದಿಂದ ಪ್ರತಿಪಾದಿಸಿದ ತತ್ವಗಳನ್ನು ಎತ್ತಿಹಿಡಿಯಲು ನಾವು ಶ್ರಮಿಸುತ್ತಿರುವಾಗ ಅವರ ಪರಂಪರೆಯು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.

2012ರಲ್ಲೇ 100 ಶತಕೋಟಿ ದಾಟಿದ್ದ ಕಂಪನಿ; ಕಠಿಣ ಮತ್ತು ಕುಶಾಗ್ರಮತಿಯನ್ನು ಮರೆಮಾಚುವಷ್ಟು ಸೌಮ್ಯ ವರ್ತನೆಗೆ ಹೆಸರುವಾಸಿಯಾದ ಟಾಟಾ ಅವರು 1991 ರಿಂದ ಡಿಸೆಂಬರ್ 28, 2012ರವರೆಗೆ, ಅಂದರೆ ನಿವೃತ್ತರಾಗುವವರೆಗೆ ಟಾಟಾ ಗ್ರೂಪ್‌ನ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರ ಉಸ್ತುವಾರಿ ಅವಧಿಯಲ್ಲಿ ಟಾಟಾ ಸನ್ಸ್​ $100 ಶತಕೋಟಿ ಡಾಲರ್​ ಆದಾಯದ ಕಂಪನಿಯಾಗಿ ಬೆಳೆದು ನಿಂತಿತ್ತು

ಎಲ್ಲೆಲ್ಲಿ ಅವರ ರತನ್​ ಛಾಪು: ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಪವರ್, ಟಾಟಾ ಗ್ಲೋಬಲ್ ಬೆವರೇಜಸ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಸೇರಿದಂತೆ ಪ್ರಮುಖ ಟಾಟಾ ಕಂಪನಿಗಳ ಅಧ್ಯಕ್ಷರಾಗಿ ರತನ್​ ಟಾಟಾ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿದ್ದರು ಮತ್ತು ಮಿತ್ಸುಬಿಷಿ ಕಾರ್ಪೊರೇಷನ್ ಮತ್ತು ಜೆಪಿ ಮೋರ್ಗಾನ್ ಚೇಸ್‌ನ ಅಂತಾರಾಷ್ಟ್ರೀಯ ಸಲಹಾ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು.

ಟಾಟಾ ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಕೌನ್ಸಿಲ್ ಆಫ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಟ್ರಸ್ಟಿಗಳ ಮಂಡಳಿಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಇದನ್ನು ಓದಿ: ಹಿರಿಯ ಉದ್ಯಮಿ ರತನ್​ ಟಾಟಾ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲಿ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.